ಪದಾಧಿಕಾರಿಗಳ ಆಯ್ಕೆ ಸಭೆ
ದೇವದುರ್ಗ: ಕನಿಷ್ಠ ವೇತನ, ಸೇವೆ ಕಾಯಂ, ಹೊರಗುತ್ತಿಗೆ ಪದ್ಧತಿ ರದ್ದತಿಗೆ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಹೋರಾಟದ ಅವಶ್ಯಕತೆಯಿದೆ ಎಂದು ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ ಕರೆ ನೀಡಿದರು.
ಅರಕೇರಾ ಗ್ರಾಮದ ವಾಲ್ಮೀಕಿ ಭವನದಲ್ಲಿ ಸಿಐಟಿಯು ಗ್ರಾಮ ಘಟಕ ರಚನೆ ಸಭೆಯಲ್ಲಿ ಮಾತನಾಡಿ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದಾಗಬೇಕು. ಅಸಂಘಟಿತ ಕಾರ್ಮಿಕರ ಹಿತ ಕಾಯುವ ಕಾನೂನು ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಲು ಕರೆ ನೀಡಿದರು. ಪ್ರಾಂತ ರೈತ ಸಂಘದ ಮುಖಂಡ ನರಸಣ್ಣ ನಾಯಕ, ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ವರಲಕ್ಷ್ಮೀ ಮಾತನಾಡಿದರು.
ಗ್ರಾಮ ಘಟಕ: ಸಿಐಟಿಯು ಅರಕೇರಾ ಗ್ರಾಮ ಘಟಕದ ಅಧ್ಯಕ್ಷರಾಗಿ, ಮಲ್ಲಮ್ಮ ಉಪಾಧ್ಯಕ್ಷರಾಗಿ ಹನುಮಂತಿ, ನಾಗರೆಡ್ಡಿ, ಕಾರ್ಯದರ್ಶಿಯಾಗಿ ಶಕೀಲಾಬೇಗಂ, ಸಹ ಕಾರ್ಯದರ್ಶಿಯಾಗಿ ಸುಜಾತಾ, ಶಾಲಂಬಿ ಮತ್ತು ಖಜಾಂಚಿಯಾಗಿ ಗೀತಾ ನೇಮಕಗೊಂಡರೆ, 9 ಜನರು ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಆಯ್ಕೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

