ಅನಾಥವಾಗಿರುವ ವೀರಗಲ್ಲುಗಳು
ಮುದಗಲ್: ದೇವರ ಮೂರ್ತಿಗಳು, ಇತಿಹಾಸ ಸಾರುವ ಶಿಲಾಶಾಸನಗಳು ಐತಿಹಾಸಿಕ ಮುದಗಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿಯು ಕಾಣ ಸಿಗುತ್ತವೆ. ಅದರಲ್ಲಿ ಸಮೀಪದ ಹೂನೂರು ಗ್ರಾಮದಲ್ಲಿ ಶಿಲಾಯುಗದ ಕೆತ್ತನೆಯ ಶಿಲ್ಪ ಕಲೆಗಳು, ವೀರಗಲ್ಲುಗಳು ಅನಾಥವಾಗಿ ಬಿದ್ದಿರುವುದು ಪ್ರಾಚ್ಯ ವಸ್ತು ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಗಳಾಗಿವೆ.
ಹೂನೂರು ಗ್ರಾಮದ ಮುಖ್ಯ ದ್ವಾರ ಅಗಸಿಯಲ್ಲಿ ಮೂರು ಮುಖದ ವೀರಗಲ್ಲು ಇದ್ದು ಬಹು ವರ್ಷಗಳಿಂದ ಅನಾಥವಾಗಿ ಬಿದ್ದಿದೆ. ಆದರೆ ಗ್ರಾಮಸ್ಥರು ಮಾತ್ರ ಆ ಕಲ್ಲಿನ ಬಗ್ಗೆ ಇತಿಹಾಸವನ್ನೇ ಹೇಳುತ್ತಾರೆ. ಗ್ರಾಮದಲ್ಲಿ ಯಾರಿಗಾದರೂ ಉಸಿರು ಹಿಡಿದಿದ್ದರೆ, ಆ ಕಲ್ಲನ್ನು ಮೂರು ಸುತ್ತು ಸುತ್ತಿದರೆ ಉಸಿರು ಬಿಡುತ್ತದೆ ಎಂದು ಹೇಳುತ್ತಾರೆ. ಆ ಕಲ್ಲಿಗೆ ಇಂದಿಗೂ ಉಸಿರುಗಲ್ಲು ಎಂದು ಕರೆಯುತ್ತಿದ್ದಾರೆ. ಈ ಕಲ್ಲು ಹಸಿರು ಬಣ್ಣದ ಕಲ್ಲಿನಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಪಕ್ಕದಲ್ಲೇ ಶಿಲಾ ಶಾಸನ ಇರುವ ಕಲ್ಲು ಇದ್ದು ಮಕ್ಕಳು ಅದರ ಮೇಲಿಂದ ಜಾರುತ್ತಾರೆ. ಆಟದ ವಸ್ತುವಾಗಿದೆ. ಮೂರು ಮುಖ ಇರುವ ಈ ಕಲ್ಲು ಭ್ರಮ್ಮನ ಶಿಲೆ ಇರಬಹುದೆಂದು ಕೆಲವರು ಹೇಳುತ್ತಾರೆ.
ನಂಬಿಕೆ: ಈ ಶಿಲಾ ಶಾಸನದ ಬಗ್ಗೆ ಅನೇಕ ಅನುಮಾನಗಳು, ಇತಿಹಾಸದ ಸಾರಗಳು ಕೇಳಿಬರುತ್ತಿದೆ. ಭ್ರಮ್ಮನಿಗೆ ನಾಲ್ಕು ಮುಖಗಳಿದ್ದವು, ಕೈಲಾಸಪತಿ ಭ್ರಮ್ಮನ ಇನ್ನೊಂದು ತಲೆಯನ್ನು ತೆಗೆದಿದ್ದರಿಂದ ಮೂರು ಮುಖಗಳು ಉಳಿದಿವೆ ಎನ್ನುವ ನಂಬಿಕೆ ಕೂಡ ಇಲ್ಲಿ ಕೇಳಿ ಬರುತ್ತಿದೆ.
ನಿರ್ಲಕ್ಷ್ಯ: ಹೂನೂರು, ತುರಡಗಿ, ಮಾಕಾಪೂರ , ಪಿಕಳಿಹಾಳ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಇಂತಹ ವೀರಗಲ್ಲುಗಳು, ಶಿಲಾ ಶಾಸನಗಳು ಕಂಡು ಬರುತ್ತಿವೆ. ಇಂತಹ ಶಿಲೆಗಳನ್ನು ರಕ್ಷಣೆ ಮಾಡಬೇಕಾದ ಪ್ರಾಚ್ಯ ವಸ್ತು ಇಲಾಖೆ ನಿರ್ಲಕ್ಷ್ಯ ತಾಳಿದ್ದರಿಂದ ಮುಂದೊಂದು ದಿನ ಈ ಶಾಸನಗಳು, ಶಿಲೆಗಳು ನಶಿಸುತ್ತವೆ ಎನ್ನುವ ಭೀತಿ ಜನರಲ್ಲಿದೆ. ಇತಿಹಾಸ ಸಂಶೋದಕರು ಈ ಗ್ರಾಮಗಳಿಗೆ ಭೇಟಿ ನೀಡಿ ಸಂಶೋಧನೆ ಮಾಡುವುದು ಅಗತ್ಯವಾಗಿದೆ.
-ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

