'ಹಣಕ್ಕಿಂತ ಗುಣ ಮುಖ್ಯ'
ಗುಲ್ಬರ್ಗ: ಏಕಾಗ್ರತೆ, ಯೋಗಾಸನದಿಂದ ಶಕ್ತಿ ಜ್ಞಾನ ಪಡೆಯಬೇಕು. ಇಂದು ಕೇವಲ ವಸ್ತುಲೋಕದ ಭಯಾನಕತೆ ಕಡೆ ಜಗತ್ತು ಹೋಗುತ್ತದೆ. ಹಣಕ್ಕಿಂತ ಗುಣ, ಚಾರಿತ್ರ್ಯ ಮುಖ್ಯವೆಂದು ಸಂಸ್ಕೃತ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಮೈಕಲ್ ಹೇಳಿದರು. ನಗರದ ಸರ್ವಜ್ಞ ಹಾಗೂ ಜಸ್ಟೀಸ್ ಶಿವರಾಜ ಪಾಟೀಲ್ ವಸತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ಅಂಗವಾಗಿ ರಾಷ್ಟ್ರೀಯ ಯುವದಿನ ಹಾಗೂ ವಿಶ್ರಾಂತ ನ್ಯಾಯಮೂರ್ತಿ ಡಾ. ಜಸ್ಟೀಸ್ ಶಿವರಾಜ ಪಾಟೀಲ್ 74ನೇ ಜನ್ಮದಿನ ಆಚರಿಸಲಾಯಿತು. ರಾಣಿ ಚೆನಮ್ಮ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ, ಡಾ. ಅಮರೇಶ ಯತಗಲ್ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಪ್ರೊ. ಚನಾರೆಡ್ಡಿ ಪಾಟೀಲ್ ಮಾತನಾಡಿದರು. ಹೈಕೋರ್ಟ್ ನ್ಯಾಯವಾದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನೇತ್ರ ತಜ್ಞ ದೇವೇಂದ್ರಪ್ಪ ಚಿಂಚೋಳಿ, ಚನಾರೆಡ್ಡಿ ಆರ್. ಪಾಟೀಲ್, ಗೀತಾ ಚೆನರೆಡ್ಡಿ ಪಾಟೀಲ್, ಎಂ.ಸಿ. ಕಿರೇದಳ್ಳಿ, ವಿನೂತಾ ಆರ್.ಬಿ. ಪ್ರಶಾಂತ ಕುಲ್ಕರ್ಣಿ, ಕರುಣೇಶ ಉಪಸ್ಥಿತರಿದ್ದರು. ಗಂಗಾಧರ ಬಡಿಗೇರ ನಿರೂಪಿಸಿದರು. ಡಾ. ವಿದ್ಯಾವತಿ ಪಾಟೀಲ್ ಅತಿಥಿಗಳನು ಪರಿಚಯಿಸಿದರು. ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ ಸ್ವಾಗತಿಸಿ, ಡಾ. ಸಂತೋಷ ಕುಮಾರ ವಂದಿಸಿದರು.
ಬಿಜೆಪಿ ಯುವ ಮೋರ್ಚಾ: ಬಿಜೆಪಿ ಯುವ ಮೋರ್ಚಾ ಗುಲ್ಬರ್ಗ ಗ್ರಾಮಾಂತರ ಜಿಲ್ಲೆ ವತಿಯಿಂದ ಶೇಖ ರೋಜಾದ ಹತ್ತಿರವಿರುವ ಡಾ. ಅಂಬೇಡ್ಕರ್ ಆಶ್ರಯ ಕಾಲೋನಿಯಲ್ಲಿ ಬಡ ಮತ್ತು ಶಿಕ್ಷಣ ವಂಚಿತ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳಾದ ಸ್ಕೂಲ್ ಬ್ಯಾಗ್, ನೋಟ್ಬುಕ್ ಇತರ ಸಾಮಗ್ರಿಗಳನು ವಿತರಿಸಿ ಸ್ವಾಮಿ ವಿವೇಕಾನಂದರ ಜಯಂತಿ ವಿನೂತನವಾದ ರೀತಿಯಲ್ಲಿ ಆಚರಿಸಲಾಯಿತು. ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಪರಶುರಾಮ ನಸಲವಾಯಿ ಮಾತನಾಡಿ, ಸ್ವಾಮಿ ವಿವೇಕಾನಂದರು 120 ವರ್ಷಗಳ ಹಿಂದೆ ನುಡಿದ ಬೆಸ್ತರ ಚಮ್ಮಾರರ ಜಾಲಗಾರರ, ರೈತರ ಜೋಪಡಿಗಳಿಂದ ಭಾರತದ ರಾಷ್ಟ್ರದ ನವ ನಿರ್ಮಾಣವಾಗಲಿ ಎಂದು ಕಂಡ ಕನಸು ನನಸಾಗಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸುಧಾಕರ ಮೀನಾಹಾಬಳ, ಸುನಿಲ್ಕುಮಾರ ಮಹಾಗಾಂವ್ಕ, ಶಿವಾರಾಜ ಪಾಟೀಲ್, ಬಸವರಾಜ ಸೂಲಳ್ಳಿ, ರಾಜಶೇಖರ ಬೋಳೆವಾಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

