ರೇಲ್ವೆ ಖಾತೆ ಸಚಿವರ ಪ್ರವಾಸ
ಗುಲ್ಬರ್ಗ: ಕೇಂದ್ರ ರೇಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಜ.18ರಂದು ರಾತ್ರಿ 7. 20 ಗಂಟೆಗೆ ರೇಲ್ವೆ ಮುಖಾಂತರ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. 19 ರಂದು ನಗರದ ಸಿದ್ಧಾರ್ಥ ಬಡಾವಣೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಧಮ್ಮಕ್ರಾಂತಿ ಉತ್ಸವ ಬೀಳ್ಕೋಡುವ ಸಮಾರಂಭದಲ್ಲಿ ಭಾಗವಹಿಸಿ ಮಧ್ಯಾಹ್ನ 12 ಗಂಟೆಗೆ ಆಂಧ್ರಪ್ರದೇಶದ ಮೇಡಕ್ ಜಿಲ್ಲೆಗೆ ಪ್ರಯಾಣಿಸುವರು. ನಂತರ ರಾತ್ರಿ 8.30ಕ್ಕೆ ಮರಳಿ ಗುಲ್ಬರ್ಗಕ್ಕೆ ಆಗಮಿಸಿ, ರಾತ್ರಿ 9ಕ್ಕೆ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಪುರಸ್ಕಾರ ಪ್ರದಾನ ಇಂದು
ಗುಲ್ಬರ್ಗ: ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಸಂಯುಕ್ತಾಶ್ರಯದಲ್ಲಿ ಜ. 18ರಂದು ಐಸಿಐ ಅಲ್ಟ್ರಾಟೆಕ್ ಪುರಸ್ಕಾರ- 2013 ಪ್ರದಾನ ಸಮಾರಂಭ ಜೇವರ್ಗಿ ರಸ್ತೆಯಲ್ಲಿರುವ ಇಕೋ ಗಾರ್ಡನ್ ಹೋಟಲ್ ಅಂಗಳದಲ್ಲಿ ಆಯೋಜಿಸಲಾಗಿದೆ. ಸಿವಿಲ್ ಏಡ್ ಟೆಕ್ ಸಂಸ್ಥೆಯ ಹಿರಿಯ ನಿರ್ದೇಶಕ ಡಾ. ಎಂಎಸ್ ಸುದರ್ಶನ, ಅಲ್ಟ್ರಾಟೆಕ್ನ ಉಪಾಧ್ಯಕ್ಷ (ದಕ್ಷಿಣ) ಡಾ. ವಿ. ರಾಮಚಂದ್ರ ಸಮ್ಮುಖದಲ್ಲಿ ಈ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಐಸಿಐ ಅಧ್ಯಕ್ಷ ಅರವಿಂದ ಗಲಗಲಿ, ಕಾರ್ಯದರ್ಶಿ ವಿಜಯ ತೋಟಿಗೇರ ತಿಳಿಸಿದ್ದಾರೆ.
24ರಂದು ಹರಳಯ್ಯ ಸಂಸ್ಕೃತಿ ಉತ್ಸವ
ಗುಲ್ಬರ್ಗ: ಮಹಾಶರಣ ಹರಳಯ್ಯ ಚಲನಚಿತ್ರ ಬಿಡುಗಡೆ ಹಾಗೂ ಶರಣ ಹರಳಯ್ಯ ಸಂಸ್ಕೃತಿ ಉತ್ಸವ ಮೆರವಣಿಗೆ ಸಮಾರಂಭವನ್ನು ಕಾರಣಾಂತರಗಳಿಂದ ಜ. 17ರ ಬದಲಿಗೆ ಜ. 24ರಂದು ಮುಂದೂಡಲಾಗಿದೆ. ಡಾ. ಶರಣ ಬಸಪ್ಪಾ ಅಪ್ಪಾ ಚಿತ್ರ ಬಿಡುಗಡೆ ಹಾಗೂ ಕಾರ್ಯಕ್ರಮದ ಉತ್ಸವ ಮೆರವಣಿಗೆ ಚಾಲನೆ ನೀಡಲಿದ್ದಾರೆ ಎಂದು ಕಾರ್ಯದರ್ಶಿ ಮಹಾಂತೇಶ ಗೌಳಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

