ರಾಯಚೂರು

ಅಂಗನವಾಡಿ ಮಕ್ಕಳ ಗೋಳಾಟ

Published On :

 ಪಂಪಯ್ಯ ಮಠ
ಕ.ಪ್ರ. ವಾರ್ತೆ    ಮುದಗಲ್    ಜ.18
ಪಟ್ಟಣ ಸಮೀಪದ ಬನ್ನಿಗೋಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ಕಟ್ಟಡವಿಲ್ಲದೆ ಮಕ್ಕಳು, ಅಂಗನವಾಡಿ ಮಕ್ಕಳು ಹಾಗೂ ಕಾರ್ಯಕರ್ತೆಯರು ಪರದಾಡುವಂತಾಗಿದೆ.
ಬನ್ನಿಗೋಳ ಗ್ರಾಮಕ್ಕೆ ಒಟ್ಟು ನಾಲ್ಕು ಅಂಗನವಾಡಿ ಕೇಂದ್ರಗಳಲ್ಲಿ ಒಂದಕ್ಕೆ ಮಾತ್ರ ಸರ್ಕಾರಿ ಕಟ್ಟಡ ನಿರ್ಮಿಸಿಕೊಟ್ಟಿದ್ದು ಬಿಟ್ಟರೆ ಉಳಿದ ಮೂರು ಅಂಗನವಾಡಿ ಕೇಂದ್ರಗಳು ಮಾತ್ರ ವರ್ಷಪೂರ್ತಿ ಸ್ಥಳಾಂತರಗೊಳ್ಳುತ್ತಿವೆ. ಸದ್ಯಕ್ಕೆ ಒಂದು ಗ್ರಾಪಂ ಪಕ್ಕದ ಸಮುದಾಯ ಭವನದಲ್ಲಿ ಮತ್ತೊಂದು ಆರೋಗ್ಯ ಸಹಾಯಕೀಯರ ಉಪಕೇಂದ್ರದಲ್ಲಿ ನಡೆಸಲಾಗುತ್ತಿದೆ.  3ನೇ ಕೇಂದ್ರವನ್ನು ಹರಿಜನ ವಾರ್ಡ್‌ನ ಅಂಬೇಡ್ಕರ್ ಭವನದಲ್ಲಿ ನಡೆಸಲಾಗುತ್ತಿದೆ.
5 ಸಾವಿರ ಜನಸಂಖ್ಯೆ ಇರುವ ಬನ್ನಿಗೋಳ ಗ್ರಾಮದಲ್ಲಿ 450 ಮಕ್ಕಳಿದ್ದಾರೆ. ಅಲ್ಲಲ್ಲಿ ಆಶ್ರಯ ಪಡೆದು ನಡೆಸಲಾಗುತ್ತಿರುವ ಅಂಗನವಾಡಿ ಕಟ್ಟಡಗಳಲ್ಲಿ ಮಕ್ಕಳಿಗೆ ಸ್ಥಳಾವಕಾಶದ ಕೊರತೆಯಿಂದ ಅನೇಕ ತೊಂದರೆ ಅನುಭವಿಸಬೇಕಾಗಿದೆ.
ಭವನದಲ್ಲಿ: ಸಮುದಾಯ ಕೇಂದ್ರದಲ್ಲಿ ಗೃಹ ಮತ್ತು ಶೌಚಾಲಯ ಉಪಯೋಗಿ ಸಾಮಗ್ರಿಗಳನ್ನು ಸಂಗ್ರಹ ಮಾಡಿಲಾಗಿದೆ. ಮಕ್ಕಳು ಬರುವುದರಿಂದ ಕೇಂದ್ರದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಡಬೇಕು ಎಂಬುವುದು ಶಿಶು ಅಭಿವೃದ್ಧಿ ಇಲಾಖೆ ನಿಯಮ. ಆದ್ದರಿಂದ ಇಲ್ಲಿನ ಸಾಮಗ್ರಿಗಳನ್ನು ಬೇರಡೆ ಸಂಗ್ರಹ ಮಾಡಲು ಗ್ರಾ.ಪಂ. ಮತ್ತು ತಾ.ಪಂ. ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ನಿರ್ಲಕ್ಷ್ಯ ಧೋರಣೆ: ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಮತ್ತು ಜನಪ್ರತಿನಿಧಿಗಳಿಗೆ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಹೊಂದಲು ನಿವೇಶನ ಕೋರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಒಂದೆಡೆ ಜನಪ್ರತಿನಿಧಿಗಳ ನಿರುತ್ಸಾಹವಿದ್ದರೆ, ಮತ್ತೊದೆಡೆ ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ತೊಳಲಾಟ ಮಾತ್ರ ತಪ್ಪುತ್ತಿಲ್ಲ. ಆದ್ದರಿಂದ ಕೂಡಲೇ ಗ್ರಾ.ಪಂ. ಮೂಲಕ ನಿವೇಶನ ನೀಡಿ ಅಂಗನವಾಡಿ ಮಕ್ಕಳ ಕಲಿಕೆಗೆ ಅನುಕೂಲ ಮಾಡುವಂತೆ ಬನ್ನಿಗೋಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.