ಸಮರ್ಪಕ ನೀರಿಗೆ ಆಗ್ರಹ
ಸಿಂಧನೂರು: ತಾಲೂಕಿನ 36ನೇ ವಿತರಣಾ ಕಾಲುವೆಯ 36/6 ವ್ಯಾಪ್ತಿಗೆ ಒಳಪಟ್ಟ ಜಮೀನುಗಳಿಗೆ ನೀರು ಹರಿಯದೇ 1800ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಖರ್ಚು ಮಾಡಿ ಬೆಳೆದ ಬತ್ತದ ಬೆಳೆ ಒಣಗುತ್ತಿದ್ದು, ಸಮರ್ಪಕ ನೀರು ಹರಿಸಲು ಒತ್ತಾಯಿಸಿ ಗುರುವಾರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ನೇತೃತ್ವದಲ್ಲಿ ರೈತರು ಧರಣಿ ನಡೆಸಿದರು.
ವಾರದಲ್ಲಿ ಐದು ದಿನ ನಾಲೆಗೆ ನೀರು ಹರಿಸಬೇಕೆನ್ನುವ ನಿಯಮವಿದ್ದರೂ, ಒಂದು ದಿನವೂ ನೀರು ಸರಿಯಾಗಿ ಬರುವುದಿಲ್ಲ. ಇದರಿಂದಾಗಿ ಬೂದಿವಾಳ 800, ಕನ್ನಾರಿ 600 ಹಾಗೂ ಮಲದಿನ್ನಿಕ್ಯಾಂಪ್ನ 400 ಎಕರೆ ಪ್ರದೇಶದಲ್ಲಿ ಬತ್ತ ಬೆಳೆದು ಪರಿತಪಿಸುವಂತಾಗಿದೆ ಎಂದು ಟಿಬಿಪಿ ಮುನಿರಾಬಾದ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಸಿಂಧನೂರಿನ ನಂ.3 ನೀರಾವರಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿಪತ್ರ ಸಲ್ಲಿಸಿ ಗಮನ ಸೆಳೆದರು. ಈಗ ನೀರಿಲ್ಲದೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿ ಕೊಂಡಂತಾಗಿದೆ. ಒಂದು ವೇಳೆ ನೀರು ಹರಿಸದೇ ಹೋದರೆ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಬೂದಿಹಾಳನ ಚಂದ್ರಗೌಡ ಸಾಹುಕಾರ, ಆದನಗೌಡ ಹೊಸಕಲ್, ಶೀನಪ್ಪ ಕನ್ನಾರಿ ಅಧಿಕಾರಿಗಳಿಗೆ ವಿವರಿಸಿದರು. 24 ಗಂಟೆಯೊಳಗಾಗಿ ರೈತರ ಮನವಿಗೆ ಸ್ಪಂದನೆ ನೀಡದಿದ್ದಲ್ಲಿ ಹೋರಾಟ ನಡೆಸುವುದಾಗಿ ಎನ್.ಶಿವನಗೌಡ ಗೊರೇಬಾಳ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

