ರಾಯಚೂರು

ಅಕ್ಷಯ್ ಗೋಲ್ಡ್ ಕಂಪನಿ ವಂಚನೆ

Published On :

ರಾಯಚೂರು: ಆಂಧ್ರದ ವಿಶಾಖಪಟ್ಟಣಂ ಮೂಲಕ ಅಕ್ಷಯ್ ಗೋಲ್ಡ್ ಎಂಬ ಕಂಪನಿಯು ಗ್ರಾಹಕರನ್ನು ವಂಚಿಸಿದ್ದು ಕೂಡಲೇ ಅದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಂಪನಿಯ ಏಜೆಂಟರು ಹಾಗೂ ಗ್ರಾಹಕರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರವೇ ಸಂಘಟನೆಯ ಬೆಂಬಲದೊಂದಿಗೆ ಧರಣಿ ನಡೆಸಿದ ಅಕ್ಷಯ್ ಗೋಲ್ಡ್ ಕಂಪನಿಯ ಏಜೆಂಟರು ಹಾಗೂ ನೊಂದವರ ವೇದಿಕೆಯ ಸಂಘದ ಅಡಿ ಗ್ರಾಹಕರು ಧರಣಿ ನಡೆಸಿ 2007ರಲ್ಲಿ ಆರಂಭಗೊಂಡ ಅಕ್ಷಯ್ ಗೋಲ್ಡ್ ಕಂಪನಿಯು ನಿರುದ್ಯೋಗಿಗಳಿಗೆ ಏಜೆಂಟರೆಂದು ನೇಮಕ ಮಾಡಿಕೊಂಡು ನಂತರದಲ್ಲಿ ಗ್ರಾಹಕರಿಂದ ಠೇವಣಿ ಸಂಗ್ರಹಿಸುವ ಕಾರ್ಯ ಮಾಡಿತು. ಆರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂಸ್ಥೆಯು ನಂತರ ಮುಚ್ಚಿದ್ದು, ಅದರಿಂದ ಏಜೆಂಟರು ಹಾಗೂ ಗ್ರಾಹಕರಿಗೆ ನಷ್ಟ ಉಂಟು ಮಾಡಿದೆ ಎಂದು ಟೀಕಿಸಿದರು.
ಬೆದರಿಕೆ: ಯಾವುದೇ ರೀತಿಯ ಮುನ್ಸೂಚನೆ ನೀಡದೇ ತನ್ನ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಕಂಪನಿಯು ಗ್ರಾಹಕರಿಗೆ ಸೇರಿದ ಠೇವಣಿ ಮೊತ್ತವನ್ನು ಮರುಪಾವತಿ ಮಾಡಿಲ್ಲ. ಅಷ್ಟೇ ಅಲ್ಲ ಏಜೆಂಟರಿಗೆ ಈ ಕುರಿತು ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಸಂಸ್ಥೆಯ ಮುಖ್ಯ ಕಚೇರಿಗೆ ತೆರಳಿ ವಿಚಾರಿಸಿದರೆ ಗೂಂಡಾಗಳಿಂದ ಬೆದರಿಕೆಯೊಡ್ಡಲಾಗುತ್ತಿದೆ ಎಂದು ದೂರಿದರು.
ಈ ಕುರಿತು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಷಯ್ ಗೋಲ್ಡ್ ಕಂಪನಿಯ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು. ಗ್ರಾಹಕರಿಗೆ ಹಾಗೂ ಏಜೆಂಟರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದರು. ನೊಂದವರ ವೇದಿಕೆ ಪ್ರಮುಖರು ಹಾಗೂ ಕರವೇ ಕಾರ್ಯಕರ್ತರು ಧರಣಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.