ದುರಸ್ತಿಗೆ ಕರವೇ ಆಗ್ರಹ
ಕ.ಪ್ರ. ವಾರ್ತೆ ಸಿಂಧನೂರು ಜೂ. 18
ಸಿಂಧನೂರು-ಮಸ್ಕಿ ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬುಧವಾರ ನಗರದ ಯಲ್ಲಮ್ಮ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನುನಡೆಸಲಾಯಿತು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಯಚೂರು-ಗಂಗಾವತಿ ರಸ್ತೆಯಲ್ಲಿ ಚನ್ನಮ್ಮ ವೃತ್ತದಿಂದ ಹಾದು ತಹಸೀಲ್ದಾರ್ ಕಚೇರಿ ತಲುಪಿ ಬಹಿರಂಗ ಸಭೆಯಾಗಿ ಮಾರ್ಪಾಡಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ದೇವೇಂದ್ರಗೌಡ, ಸಿಂಧನೂರು-ಮಸ್ಕಿ ರಸ್ತೆಯಲ್ಲಿ ಜನರು ಪ್ರಯಾಣಿಸುತ್ತಾರೆ ಎನ್ನುವುದನ್ನೇ ಉಭಯ ಕ್ಷೇತ್ರಗಳ ಶಾಸಕರು ಮರೆತಿದ್ದಾರೆ. ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಿದ್ದು, ಜನರು ಜೀವಭಯ ಎದುರಿಸುತ್ತಿದ್ದಾರೆ. ಅವಘಡ ಸಂಭವಿಸಿದರೆ ಅದಕ್ಕೆ ಮಸ್ಕಿ ಮತ್ತು ಸಿಂಧನೂರಿನ ಶಾಸಕರೇ ನೇರ ಹೊಣೆಗಾರರಾಗಿದ್ದಾರೆ ಎಂದು ಹರಿಹಾಯ್ದರು. ಕರವೇ ಮುಖಂಡರಾದ ಬಸನಗೌಡ, ಬಸವರಾಜ, ರಫೀ ಸೇರಿದಂತೆ ಗ್ರಾಮೀಣ ಆಟೋ ಚಾಲಕರ ಸಂಘದ ಚಾಲಕರು ಮಾತನಾಡಿದರು.
ಲೋಕೋಪಯೋಗಿ ಇಲಾಖೆ ಹಾಗೂ ಸಿಂಧನೂರು, ಮಸ್ಕಿ ಉಭಯ ಕ್ಷೇತ್ರಗಳ ಶಾಸಕರು, ಸಂಸದರು ಹುಸಿ ಭರವಸೆ ಕೊಡುವ ಮೂಲಕ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಗರ್ಭಿಣಿಯರು, ವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
15 ದಿನಗಳ ಗಡುವು: ಇನ್ನೂ 15 ದಿನದೊಳಗೆ ಕಾಮಗಾರಿ ಆರಂಭಿಸದಿದ್ದರೆ, ಹೋರಾಟವನ್ನು ಉಗ್ರ ಸ್ವರೂಪಗೊಳಿಸಲಾಗುವುದು. ರಸ್ತಾರೋಖೋ, ಶಾಸಕರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಒಂದು ವೇಳೆ ಅಷ್ಟಕ್ಕೂ ಸ್ಪಂದಿಸದಿದ್ದರೆ, ರಸ್ತೆಯನ್ನು ಆಯಾ ಗ್ರಾಮದವರೇ ಅಗೆದು ದುರಸ್ತಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಕರವೇ ತಾಲೂಕು ಘಟಕ ಅಧ್ಯಕ್ಷ ಗಂಗಣ್ಣ ಡಿಶ್, ಎಸ್. ದೇವೇಂದ್ರಗೌಡ, ವಿರುಪಣ್ಣ ಗುಡಿ, ಯುವ ಘಟಕ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ, ದಾವಲಸಾಬ್ ದೊಡ್ಮನಿ, ಕಾಳಪ್ಪ ಮೇಸ್ತ್ರಿ, ಎಂ.ಡಿ. ರಫಿ ಭಾಗವಹಿಸಿದ್ದರು.
ಮುದ್ದಾಪುರ, ಹಾರಾಪುರ, ಎಲೆಕೂಡ್ಲಿಗಿ, ಪಗಡದಿನ್ನಿ ಕ್ಯಾಂಪ್, ಪಗಡದಿನ್ನಿ, ಕುನ್ನಟಗಿ, ಕುನ್ನಟಗಿ ಕ್ಯಾಂಪ್, ಬಸಾಪುರ, ಕಲ್ಲೂರು, ಮುಳ್ಳೂರು, ಕೋಳಬಾಳ, ಎಲೆಕೂಡ್ಲಿಗಿ ಕ್ರಾಸ್ನ ಗ್ರಾಮಸ್ಥರು ಭಾಗವಹಿಸಿದ್ದರು. ಈ ಮಾರ್ಗದ ಗ್ರಾಮಗಳಲ್ಲಿ ಓಡಾಡುವ 50ಕ್ಕೂ ಹೆಚ್ಚು ಟಂಟಂ ಚಾಲಕರು ರಸ್ತೆ ದುರಸ್ತಿಗೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

