ರಾಯಚೂರು

ಇಂದು ಉಚಿತ ಚಿಕಿತ್ಸೆ

Published On :

ರಾಯಚೂರು: ನಗರದ ಗಾಜಗಾರಪೇಟೆಯಲ್ಲಿರುವ ಪ್ರಾಣ ಸ್ಪರ್ಷ ಸಮಗ್ರ ಆರೋಗ್ಯ ಕೇಂದ್ರದಲ್ಲಿ ಮಾ. 10ರಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮತ್ತು ಫಿಜಿಯೋಥೆರಪಿ, ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.ಹಿಮ್ಮಡಿ ನೋವು, ಸಂಧಿವಾತ, ಕುತ್ತಿಗೆ, ಸೊಂಟ ನೋವು, ಪಾರ್ಶ್ವವಾಯು ಮತ್ತು ನರರೋಗಳು, ಕೀಲುನೋವು ಮತ್ತಿತರೆ ವ್ಯಾಧಿಗಳಿಗೆ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆಂದು ಆರೋಗ್ಯ ಕೇಂದ್ರದ ವೈದ್ಯ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳ ಬಂಧಿಸಿ
ಸಿಂಧನೂರು: ತಾಲೂಕಿನ ಪುರಂಜಂಕ್ಷನ್‌ನಲ್ಲಿ ಈಚೆಗೆ ನಡೆದ ಗುಂಪುಘರ್ಷಣೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.  ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐಗೆ ದೂರು ಸಲ್ಲಿಸಿರುವ ಒಕ್ಕೂಟದ ಮಹಾದೇವ ಧುಮತಿ, ಜಿ.ಚೌರಪ್ಪ ಜವಳಗೇರಾ, ಆರ್. ಅಂಬ್ರೂಸ್, ಬಸವರಾಜ ಕಂದಗಲ್, ಅಮರೇಶ ಗಿರಿಜಾಲಿ, ಅನಿಲಕುಮಾರ ವೈ, ಮಂಜುನಾಥ ಗಾಂಧಿನಗರ, ಈರಣ್ಣ ಸುಲ್ತಾನಪುರ, ದುರುಗಪ್ಪ ಹೆಡಗಿಬಾಳ, ನಾಗರಾಜ ಹೆಡಗಿಬಾಳ, ಆನಂದ ಬೂದಿವಾಳ ಅವರು, ಹುಸೇನಪ್ಪ ತಂ.ಶೇಖರಪ್ಪ ಹಾಗೂ ಪರಶುರಾಮ ತಂ.ಶೇಖರಪ್ಪ ಅವರನ್ನು ಥಳಿಸಿದ್ದು, ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಲ್ಲೆ ನಡೆಸಿದವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮಾ.10ರಂದು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.