ರಾಯಚೂರು

'ವಚನ ತತ್ವ ಅರಿತು ಬಾಳಿರಿ'

Published On :

ಮುದಗಲ್:  12ನೇ ಶತಮಾನದಲ್ಲಿ ಬಸವಣ್ಣನವರು ಸೇರಿದಂತೆ ಅನೇಕ ಶರಣರು ರಚಿಸಿದ ವಚನಗಳ ತತ್ವಗಳನ್ನು ಅರಿತುಕೊಂಡು ಜೀವನವನ್ನು ಸಾಗಿಸಿ ಬಾಳಿನಲ್ಲಿ ಸಮಾನತೆ ಹಾಗೂ ಹೊಂದಾಣಿಕೆ ಕಾಣಿರಿ ಎಂದು ಪ್ರವಚನಾಕಾರ ಡಾ. ಈಶ್ವರ ಮಂಟೂರು ತಿಳಿಸಿದರು.
ಪಟ್ಟಣದ ಶ್ರೀ ವಿಜಯ ಮಹಾಂತೆಶ್ವರ ಮಠದ ಆವರಣದಲ್ಲಿ ನಡೆಯುತ್ತಿರುವ ಬಸವ ಧರ್ಮದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ದೇವನೊಬ್ಬನೇ ಆದರೆ ನಾಮ ಹಲವು. ಜಾತಿ- ಮತ- ಪಂಥಗಳನ್ನು ಹೊಡೆದೋಡಿಸಿ ಸರ್ವರನ್ನೂ ಸಮಾನ ರೀತಿಯಲ್ಲಿ ಕಾಣಬೇಕು. ಅಂದಾಗಲೇ ಜಾತ್ಯತೀತ ರಾಷ್ಟ್ರ ನಿರ್ಮಾಣ ಸಾಧ್ಯವೆಂದರು.
ಜಗಜ್ಯೋತಿಯಾದ ಬಸವೇಶ್ವರರು: ಅನೇಕ ಶರಣರು ರಚಿಸಿರುವ ವಚನಗಳ ಸಾರಾಂಶವನ್ನು ಅರಿಯದೇ ವ್ಯರ್ಥ ಜೀವನವನ್ನು ಸಾಗಿಸಿದ್ದು, ಸನ್ಮಾರ್ಗದಲ್ಲಿ ನಡೆಯಬೇಕಾದರೆ ಅಧ್ಯಾತ್ಮಿಕ ಚಿಂತನೆ ಅಗತ್ಯ. ಜೀವನದ ನೋವು ನಲಿವುಗಳನ್ನು ಉಂಡು ವಚನಗಳ ಮೂಲಕ ಉತ್ತಮ ಸಂದೇಶವನ್ನು ಬಸವಣ್ಣನವರು ಜಗಕೆ ನೀಡಿ ಜಗಜ್ಯೋತಿಯಾಗಿ ಹೊರಹೊಮ್ಮಿದ್ದಾರೆ ಎಂದು ಕೊಂಡಾಡಿದರು.
ಗೌರವ ಸನ್ಮಾನ: ಸತತ 30 ದಿನಗಳವರೆಗೆ ನಡೆಯಲಿರುವ ಬಸವ ಧರ್ಮ ಪ್ರವಚನ ಕಾರ್ಯಕ್ರಮದ ಕೇಂದ್ರಬಿಂದು ಡಾ. ಈಶ್ವರ ಮಂಟೂರು ಅವರಿಗೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಿವಯೋಗಪ್ಪ, ರಾಷ್ಟ್ರಪ್ರಶಸ್ತಿ ವಿಜೇತ ಹಾಜಿ ಮಲಂಗ ಬಾಬ ಗೌರವಿಸಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.