ರಾಯಚೂರು

ವಂಚನೆ; 8 ಮಂದಿಗೆ 3 ವರ್ಷ ಜೈಲು

Published On :

ಲಿಂಗಸ್ಗೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ವಂಚಿಸಿದ ಆರೋಪದಡಿ ನಾಲ್ವರಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ ರು.  18ಸಾವಿರ ದಂಡ ವಿಧಿಸಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.
1997-98ರಲ್ಲಿ ದೇಸಾಯಿ ಭೋಗಾಪೂರ ತಾಂಡಾದ ಮಹಿಳೆಯರಿಗೆ ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿ ನಿಗಮ ವತಿಯಿಂದ ಸಾಲ ಕೊಡಿಸುವುದಾಗಿ ವಂಚನೆ ಮಾಡುವ ಉದ್ದೇಶದಿಂದ ಒಳಸಂಚು ನಡೆಸಿದ ಕುರಿತು ಪೊಲೀಸ್ ತನಿಖಾಧಿಕಾರಿಗಳಾಗಿದ್ದ ಎಸ್.ಬಿ. ತುಂಬಗಿ, ವಿಜಯ ಡಂಬಳ, ಚಂದ್ರಶೇಖರ ಕಲ್ಯಾಣಿ ಇವರು ಮಸ್ಕಿ ಠಾಣೆಯಲ್ಲಿ 2001ರಲ್ಲಿ ದೋಷಾರೋಪಣ ಪತ್ರ ದಾಖಲಿಸಿದ್ದರು.
ವಂಚನೆ: ಲಿಂಗಸ್ಗೂರು ನ್ಯಾಯಾಲಯ ಪರವಾಗಿ ಅಭಿಯೋಜನೆ ಪರವಾಗಿ 40 ಸಾಕ್ಷಿದಾರರ ಹೇಳಿಕೆ ಪಡೆದು 102 ದಾಖಲೆಗಳನ್ನು ಪರಿಶೀಲಿಸಿ, ಆರೋಪಿತರ ವಿರುದ್ಧ ಆರೋಪವನ್ನು ಸಾಬೀತು ಪಡಿಸಲು ಯಶಸ್ವಿಯಾಗಿದ್ದರಿಂದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿತರು ಬಡವರು, ಅನಕ್ಷರಸ್ಥ ಮಹಿಳಾ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಕೊಡಿಸುವುದಾಗಿ ವಂಚಿಸಿ ಆರೋಪವೆಸಗಿದ್ದಾರೆಂದು ಶಿಕ್ಷೆ ವಿಧಿಸಿ ಆರೋಪಿತರೆಲ್ಲರೂ ಒಂದು ಲಕ್ಷ ರು. ಸ್ವಂತಕ್ಕೆ ಉಪಯೋಗಿಸಿರುವುದು ಸಾಬೀತಾಗಿದೆ.
ಶಿಕ್ಷೆ: ಆ ಹಣವನ್ನು ದಂಡದ ರೂಪದಲ್ಲಿ ಭರಿಸುವಂತೆ ಆದೇಶಿಸಿ ಸದರಿ ಪ್ರಕರಣದಲ್ಲಿ ಆರೋಪಿ ಶಂಕ್ರಪ್ಪನನ್ನು ಬಿಡುಗಡೆಗೊಳಿಸಿ, ಮತ್ತೊಬ್ಬ ಆರೋಪಿ ಕುಮುದಾ ನಾಯಕ ಮರಣ ಹೊಂದಿದ ಪ್ರಯುಕ್ತ ಶಿಕ್ಷೆಯಿಂದ ಬಿಡುಗಡೆ ಮಾಡಿದ್ದಾರೆ. ಉಳಿದ ಆರೋಪಿಗಳಾದ ತಾರಾಬಾಯಿ ಗಂಡ ಶಂಕ್ರಪ್ಪ, ಛಾಯಮ್ಮ ಗಂಡ ಹನುಮಂತ, ರಮಾನಂದ ನಾಯ್ಕ, ಎಸ್‌ಸಿ, ಎಸ್‌ಟಿ ನಿಗಮದ ವ್ಯವಸ್ಥಾಪಕ ಗುರುಮೂರ್ತಿ, ಫೀಲ್ಡ್ ಆಫೀಸರ್ ಮಲ್ಲಿಕಾರ್ಜುನಯ್ಯ, ಮಹಿಳಾ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಮೈತ್ರಾ ಪಾಟೀಲ್ ಹಾಗೂ ವ್ಯವಸ್ಥಾಪಕಿ ಪರಿಮಳಾ, ಅಮರೇಶ ರಾಯಚೂರು ಇವರಿಗೆ ತಲಾ ರು.  18 ಸಾವಿರ ದಂಡ ವಿಧಿಸಿ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶ ಎಸ್.ಬಿ.ದ್ಯಾವಪ್ಪ ಐತಿಹಾಸಿಕ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಅಯ್ಯಾಳಪ್ಪ ಎನ್. ಬಳಬಟ್ಟಿ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.