31ರಿಂದ ರಾಮನವಮಿ ಉತ್ಸವ
ಸಿಂಧನೂರು: ನಗರದ ರಾಮಮಂದಿರದಲ್ಲಿ ಪ್ರತಿ ವರ್ಷದಂತೆ ರಾಮನವಮಿ ಉತ್ಸವವನ್ನು ಮಾ.31 ರಿಂದ 9 ದಿನಗಳ ಪರ್ಯಂತ ನಿರಂತರವಾಗಿ ನಡೆಯಲಿದೆ.
ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಹಿತಿಕ ಕಾರ್ಯಕ್ರಮಗಳು ಸಂಸ್ಕಾರ ಭಾರತಿ ಆಶ್ರಯದಲ್ಲಿ ಜರುಗಲಿವೆ ಎಂದು ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ ಹಾಗೂ ಸಂಸ್ಕಾರ ಭಾರತಿಯ ಗೌರವಾಧ್ಯಕ್ಷ ವೆಂಕಣ್ಣಾಚಾರ್ಯ ದೊಟಿಹಾಳ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು: ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಮಾ.31 ರಿಂದ ಪ್ರತಿದಿನ ಬೆಳಗ್ಗೆ ಸುಪ್ರಭಾತ, ಪಂಚಾಮೃತ, ಅಭಿಷೇಕ, ರಾಮದೇವರ ಅಲಂಕಾರ, ಸಂಜೆ ಪಲ್ಲಕ್ಕಿ ಸೇವೆ, ಭಜನೆ, ಅಷ್ಟಾವಧಾನ ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರುಗಲಿವೆ.
ಷಷ್ಠಿಪೂರ್ತಿ ಸನ್ಮಾನ: ಏಪ್ರಿಲ್ 8ರಂದು ವಿವಿಧ ಭಜನಾ ಮಂಡಳಿಗಳ ಸಹಯೋಗದೊಂದಿಗೆ ರಥೋತ್ಸವ, ತೀರ್ಥಪ್ರಸಾದ ವಿತರಣೆ ನಡೆಯಲಿದ್ದು, ಅಂದು ಸಂಜೆ 6ಕ್ಕೆ ಸಂಸ್ಕಾರ ಭಾರತಿ ಅಧ್ಯಕ್ಷೆ ಮಧುಮತಿ ದೇಶಪಾಂಡೆ ಹಾಗೂ ಪದಾಧಿಕಾರಿಗಳ ಸಹಯೋಗದಲ್ಲಿ ಸಪ್ತ ದಂಪತಿಗಳಿಗೆ ಷಷ್ಠಿಪೂರ್ತಿ ಸನ್ಮಾನ ಜರುಗಲಿವೆ ಎಂದು ತಿಳಿಸಿದ್ದಾರೆ.
ಉಪನ್ಯಾಸಕ: ಶ್ಯಾಮಾಚಾರ್ಯ ಜೋಶಿ ಕೆಂಗಲ್, ಮಾರುತಿರಾವ ಜೋಶಿ ಉದ್ಬಾಳ, ಡಾ. ಆರ್.ವಿ. ಜೋಶಿ, ನಿವೃತ್ತ ಶಿಕ್ಷಕ ಕೃಷ್ಣಾಚಾರ್ಯ ಉದ್ಬಾಳ, ದಾಸಪ್ಪಯ್ಯ ನಾಗರಬೆಂಚಿ, ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ, ಉಪಾಧ್ಯಕ್ಷ ನರಸಿಂಗರಾವ ಚೆನ್ನಳ್ಳಿ ದಂಪತಿಗಳನ್ನು ಸನ್ಮಾನಿಸಲಾಗುವುದು. ಹೆಗ್ಗಾಪುರ ರಾಘವೇಂದ್ರ ಕುಲಕರ್ಣಿ ಬರೆದ ನಿನ್ನೊಲುಮೆ ಸ್ಪುರಿಸಲು ಎಂಬ ಕವನ ಸಂಕಲನ ಅವಲೋಕನವನ್ನು ಉಪನ್ಯಾಸಕ ಶಂಕರ ಗುರಿಕಾರ ನೆರವೇರಿಸುವರು.
ನಂತರ ಖ್ಯಾತ ಹರಿಕಥಾ ಕಲಾವಿದೆ ಕುಮಾರಿ ಅನಘಾ ಪ್ರಸಾದ ತುಮಕೂರು ಇವರಿಂದ ಶ್ರೀಕೃಷ್ಣ ಸುಧಾಮ ಕುರಿತು ಹರಿಕಥೆ ನಡೆಯವುದು. ಇವರಿಗೆ ವಿಜಯಕುಮಾರ ಬದಿ ತಬಲಾ ಸಾಥಿ, ಮಹಾಂತೇಶಸ್ವಾಮಿ ಗೋನವಾರ ಹಾರ್ಮೊನಿಯಂ ಸಾಥಿ ನೀಡುವರು. ರಾತ್ರಿ ನಡೆಯುವ ದಾಸವಾಣಿ ಕಾರ್ಯಕ್ರಮದಲ್ಲಿ ಕಲಾವಿದರಾದ ವಾಸುದೇವ ಉಪ್ಪಳ, ಕೃಷ್ಣ ಮಲಕಸಮುದ್ರ, ಗುಂಡುರಾವ ಚನ್ನಳ್ಳಿ ಭಾಗವಹಿಸುವರು. ಏ.9ರಂದು ಬೆಳಗ್ಗೆ ಪುಷ್ಪಾರ್ಚನೆ, ಮಧ್ಯಾಹ್ನ 1ಕ್ಕೆ ಗೋಪಾಳಕಾವಲಿ, ಅವಭೃತ ಸ್ನಾನ, ಭಜನೆ, ತೀರ್ಥಪ್ರಸಾದ, ರಾತ್ರಿ ತೊಟ್ಟಿಲು ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ರಾಮಮಂದಿರದ ಕೃಷ್ಣಶಾಸ್ತ್ರಿ ನೇತೃತ್ವದಲ್ಲಿ ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

