ಆತ್ಮಹತ್ಯೆಗೆ ಯತ್ನ; ಪತ್ನಿ ಸಾವು
ರಾಯಚೂರು: ತಾಲೂಕಿನ ದಿನ್ನಿ ಗ್ರಾಮದಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದು ಪತ್ನಿ ಸಾವಿಗೀಡಾಗಿದ್ದು, ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಳನ್ನು ದಿನ್ನಿ ಗ್ರಾಮದ ನಿವಾಸಿ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಈಕೆಯ ಪತಿ ವೀರೇಶ್ ಮತ್ತು ಲಕ್ಷ್ಮೀ ಅವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಲಕ್ಷ್ಮಿ ಗ್ರಾಮದಲ್ಲಿಯೇ ಮೃತಪಟ್ಟಿದ್ದು, ತೀವ್ರ ಅಸ್ವಸ್ಥೊಂಡ ವೀರೇಶನನ್ನು ನಗರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
ಇಂದು ಸಾಮೂಹಿಕ ಧರ್ಮೋಪನಯನ
ಸಿಂಧನೂರು: ನಗರದ ಅನಂತ ಪದ್ಮನಾಭ ಜ್ಞಾನ ಪ್ರಸಾರ ಸಮಿತಿಯ ಸಹಯೋಗದಲ್ಲಿ ನಾಳೆ ಶ್ರೀರಾಮಂದಿರದ ಸಭಾಂಗಣದಲ್ಲಿ ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ಧರ್ಮೋಪನಯನ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶಂಕರನಾರಾಯಣಾಚಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ಚಿಂತರವೇಲಿ ಕೇಶವಾಚಾರ್ಯರ ಸಾನಿಧ್ಯದಲ್ಲಿ, ಮಂತ್ರಾಲಯದ ಪಂಡಿತ ದ್ವಾರಕಾನಾಥಾಚಾರ್ ಅವರ ಮಾರ್ಗದರ್ಶನದಲ್ಲಿ, ಹೊಸಪೇಟೆಯ ಪಂಡಿತ ಪಾರ್ಥಸಾರಥಿ ಜೋಶಿ ಅವರ ಪೌರೋಹಿತ್ಯದಲ್ಲಿ ಧರ್ಮೋಪನಯನಗಳು ನಡೆಯಲಿವೆ. ಬೆಳಗ್ಗೆ 7ಕ್ಕೆ ಸ್ವಸ್ತಿ ಪುಣ್ಯಾಹವಾಚನ, ನಾಂದಿ ಸ್ಥಾಪನೆ, 9ಕ್ಕೆಭೋಜನ, 10.26ಕ್ಕೆ ಸಲ್ಲುವ ಶುಭಮುಹೂರ್ತದಲ್ಲಿ ಅಕ್ಷತಾರೋಪಣ, 11.30ಕ್ಕೆ ಶ್ರೀಗಳಿಂದ ಉಪನಯನ ಸಂಸ್ಕಾರ ಕುರಿತು ಉಪನ್ಯಾಸ ಹಾಗೂ ಸಮಾರೋಪ ಸಮಾರಂಭ ನಡೆಯಲಿವೆ. ನಂತರ ಶ್ರೀಗಳವರ ಸಂಸ್ಥಾನ ಪೂಜೆ, ತೀರ್ಥ ಪ್ರಸಾದಗಳು ನಡೆಯಲಿವೆ. ಪರಸ್ಥಳದಿಂದ ಬರುವ ವಟುಗಳ ಕುಟುಂಬದವರಿಗೆ ಬ್ರಾಹ್ಮಣರ ಬೀದಿಯಲ್ಲಿರುವ ಉಪ್ಪಾರವಾಡಿ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಗಳಿಗೆ ಸಕಲ ಸದ್ಭಕ್ತರು ಆಗಮಿಸಬೇಕೆಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

