ರಾಯಚೂರು

ಮಾನವೀಯತೆಯೇ ನಿಜವಾದ ಧರ್ಮ

Published On :

ಮಸ್ಕಿ: ಮಾನವೀಯತೆಯೇ ನಿಜವಾದ ಧರ್ಮವೆಂದು ತೆಕ್ಕಲಕೋಟೆ ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯ ಶ್ರೀ ಹೇಳಿದರು.
ಪಟ್ಟಣದ ಹೊರವಲಯದಲ್ಲಿನ ಕಂಬಾಳಿ ಮಠದಲ್ಲಿ ತೆಕ್ಕಲೊಕೋಟೆಯ ಕಂಬಾಳಿ ಮಠದ ಲಿಂ. ಶಿವಸಂಗಮೇಶ್ವರ ಶಿವಾಚಾರ್ಯರರ 55ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.
ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಸ್ಪರ್ಧಾತ್ಮಕ ಕಾರಣಗಳಿಂದ ಮಾನಸಿಕ ತುಮುಲಗಳನ್ನು ಎದುರಿಸುವಂತಾಗಿದೆ.
 ಮಾನಸಿಕ ಸ್ಥಿತಿ ಸಮತೋಲನದಲ್ಲಿರಿಸಿಕೊಳ್ಳಲು ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳ ಅಧ್ಯಯನ ಅವಶ್ಯಕ. ಮನುಷ್ಯ ಮನುಷ್ಯರನ್ನು ಪ್ರೀತಿಸುವುದು ಕಲಿತು, ಪರಸ್ಪರ ಮಾನವೀಯತೆಯಿಂದ ಬದುಕಲು ಮುಂದಾದರೆ ಮಾತ್ರ ಧರ್ಮಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು. ಗಬ್ಬೂರಿನ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯ ಮಾತನಾಡಿ, ಭಾರತೀಯ ಸನಾತನ ಧರ್ಮದಲ್ಲಿ ಬದುಕಿನ ಎಲ್ಲಾ ಸಾರಗಳನ್ನು ವಿವರಿಸಲಾಗಿದೆ. ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯವೆಂದು ನುಡಿದರು.
ಮಸ್ಕಿಯ ಗಚ್ಚಿನಮಠದ ರುದ್ರಮುನಿ ದೇವರು ಸಾನ್ನಿಧ್ಯ ವಹಿಸಿದ್ದರು. ಡಾ. ಪಂಚಾಕ್ಷರಯ್ಯ ಹಿರೇಮಠ, ಸಂಗಯ್ಯ ಸ್ವಾಮಿ ಸರಗಣಾಚಾರಿ ಮಠ, ಉಮೇಶ ನಾಗಲೀಕರ, ಪಂಪಣ್ಣ ಅಂತರಗಂಗಿ, ನಾಗಪ್ಪ ಸೇರಿ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.