ಶಿವಮೊಗ್ಗ

ಬಸವಣ್ಣ ಮಹಾನ್ ಸಮತಾವಾದಿ

Published On :

ಕ.ಪ್ರ ವಾರ್ತೆ, ಶಿರಾಳಕೊಪ್ಪ, ಏ.1
ಭಾರತದ ಮೊದಲ ಸಂಸತ್ತಿನಲ್ಲಿ ಸ್ಥಾನಪಡೆದ ಮಹಾನ್ ವ್ಯಕ್ತಿಗಳು ಸಂಸತ್ತಿನಲ್ಲಿ ಅವರವರ ಧರ್ಮಕ್ಕೆ ಸಂಭಂದಿಸಿ ದೇವಸ್ಥಾನ,ಚರ್ಚ್, ಮಸೀದಿ ಸ್ಥಾಪಿಸಬೇಕು ಎಂದು ಬೇಡಿಕೆ ಇಟ್ಟಾಗ ಬಸವಣ್ಣನವರ ಸಮತಾವಾದ ಪ್ರತಿಪಾದಿಸಿದ ಲೋಹಿಯಾ ಅವರು  ಎಲ್ಲರಿಗೂ ಅನ್ವಯವಾಗುವ ಶೌಚಾಲಯ ನಿರ್ಮಿಸಲು ಸೂಚಿಸಿದ ಮಹಾನ್ ಸಮತಾವಾದಿ ಎಂದು ಉಪನ್ಯಾಸಕ ಸರ್ಫರಾಜ್ ಚಂದ್ರಗುತ್ತಿ ತಿಳಿಸಿದರು.
ಶಿರಾಳಕೊಪ್ಪ ಕಸಪ ಘಟಕ ಇಲ್ಲಿನ ಕದಂಬ ಪ್ರಥದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಡಾ. ಮುರಘರಾಜ್ ದತ್ತಿ ಉಪನ್ಯಾಸದಲ್ಲಿ ಬಸವಣ್ಣನವರ ಸಮತಾವಾದ ವಿಷಯ ಕುರಿತು ಮಾತನಾಡಿ, ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರು ಮಂತ್ರಿ ಪದವಿಯನ್ನು ಮಹಾನ್ ಶರಣ ಅಲ್ಲಮ ಪ್ರಭುವಿಗೆ ಕೊಡಿಸಿದರು, ಆದರೆ ಇಂದು ದೇಶದ ಅತ್ಯತ್ತಮ ಹುದ್ದೆಗಳು ಇಂದಿನ ರಾಜಕಾರಣದಲ್ಲಿ ಉಳ್ಳವರ ಪಾಲಾಗುತ್ತಿವೆ ಎಂದು ವಿಷಾದಿಸಿದರು.
ಎಚ್.ಟಿ. ಕರಿಬಸಪ್ಪ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಬಿ.ಎಚ್. ಯುವರಾಜ್ ಕಾರ್ಯಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಿರಾಳಕೊಪ್ಪ ಕಸಪ ಅಧ್ಯಕ್ಷ ಎನ್.ಜಿ. ನಾಗರಾಜ್ ವಹಿಸಿದ್ದರು. ಕಸಪ ಗೌರವಾಧ್ಯಕ್ಷ ಗಂಗಾಧರ್ ನಾಯರ್, ದತ್ತಿದಾನಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.