ನಾಳೆ ಪಂಚಾಮೃತ ಅಭಿಷೇಕ
ಶಿವಮೊಗ್ಗ: ಕೋಟೆ ರಸ್ತೆಯ ಶ್ರೀ ಶನೈಶ್ಚರ ಸೇವಾ ಸಮಿತಿ ಟ್ರಸ್ಟ್ ಏ.10ರಂದು ಬೆಳಿಗ್ಗೆ 6.30ರಿಂದ 7.30ರವರೆಗೆ ನವಗ್ರಹ ಮೂಲಬಿಂಬಕ್ಕೆ ಪಂಚಾಮೃತ ಅಭಿಷೇಕ ಏರ್ಪಡಿಸಿದೆ. ಬೆಳಗ್ಗೆ 9.30ರಿಂದ 11.30ರವರೆಗೆ ನವಗ್ರಹ ಪೂರ್ವಕ ಶನಿಶಾಂತಿ ಹೋಮ ನಡೆಯುವುದು ಎಂದು ಟ್ರಸ್ಟ್‌ನ ಆರ್ಚಕ ವೃಂದ ತಿಳಿಸಿದೆ. ವಿವರಗಳಿಗೆ- 9449699584 ಸಂಪರ್ಕಿಸಿ.
ಚೆಸ್ ತರಬೇತಿ
ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ಏ.12ರಿಂದ 20ರವರೆಗೆ ಪ್ರಾಥಮಿತ ಹಂತದ ಚೆಸ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಬೇಸಿಗೆ ರಜೆಯ ಪ್ರಯುಕ್ತ ಚೆಸ್ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಆಸಕ್ತರು ಇದರ ಉಪಯೋಗ ಪಡೆದುಕೊಳ್ಳುವಂತೆ ಆಕಾಡೆಮಿಯ ಶ್ರೀ ಕೃಷ್ಣ ಉಡುಪ ತಿಳಿದ್ದಾರೆ. ವಿವರಗಳಿಗಾಗಿ-945809662.
ನೇಮಕ
ಶಿವಮೊಗ್ಗ: ಜಿಲ್ಲಾ ಜೆಡಿಎಸ್‌ನ ಅಧ್ಯಕ್ಷ ಎಂ. ಶ್ರೀಕಾಂತ್ ಹಾಗೂ ಜಿಲ್ಲಾ ಯವ ಜೆಡಿಎಸ್ ಅಧ್ಯಕ್ಷ ಜಿ.ಡಿ. ಮಂಜುನಾಥ್ ಅವರ ಆದೇಶದ ಮೇರೆಗೆ ಬಿ.ಎಸ್. ವಾರೀಷ್ ಪಾಷಾ ಅವರನ್ನು ಯುವ ಜೆಡಿಎಸ್‌ನ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ಪಕ್ಷ ತಿಳಿಸಿದೆ.
ಕೆಜೆಪಿ ಪ್ರಚಾರ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜಿ. ಬಸವಣ್ಣಪ್ಪ ಅವರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದರು. ಅಬ್ಬಲಗೆರೆ, ಹಾರ್ನಾಹಳ್ಳಿ, ಕುಂಚೇನಹಳ್ಳಿ, ಮಲ್ಲಾಪುರ ಗ್ರಾಮ ಪಂಚಾಯಿ ಭಾಗದಲ್ಲಿ ಮನೆ- ಮನೆಗಳಿಗೆ ತೆರಳಿ ಮತ ಯಾಚಿಸಿದರು. ಈ ವೇಳೆ ಕೆಜೆಪಿ ಮುಖಂಡ ಬಿ.ಎಚ್. ರುದ್ರಪ್ಪ, ಜಿ.ಎಂ. ಹಾಲೇಶಪ್ಪ, ಕಸಟ್ಟೆ ಸುರೇಶ್, ಹುಬ್ಬಳ್ಳಿ ನಾಗರಾಜ್, ಜಿ.ಇ. ರಮೇಶ್, ನಾಗೇಶ್ ನಾಯ್ಕ್, ಜಿಲ್ಲಾ ರೈತ ಘಟಕದ ಅಧ್ಯಕ್ಷ ಯಡೇಹಳ್ಳಿ ಪಾಲಾಕ್ಷಪ್ಪ, ಕ್ಷೇತ್ರ ಕೆಜೆಪಿ ಅಧ್ಯಕ್ಷ ಜಿ. ಸಾದಶಿವಪ್ಪ ಗೌಡ ಮತ್ತಿತರರು ಇದ್ದರು ಎಂದು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ತಿಳಿಸಿದ್ದಾರೆ.
ನಾಳೆ ಸನ್ಮಾನ
ಶಿವಮೊಗ್ಗ: ಪಿಇಎಸ್ ಕಾಲೇಜು ಸಭಾಂಗಣದಲ್ಲಿ ಏಪ್ರಿಲ್ 10ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಅಭಿಖ್ಯಾನ-2013 ಮತ್ತು ರ್ಯಾಂಕ್ ವಿಜೇತರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯಅತಿಥಿಗಳಾಗಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಪಾಲ್ಗೊಳ್ಳಲಿದ್ದಾರೆ. ಪ್ರಾಂಶುಪಾಲ ನಾಗರಾಜ್, ಟ್ರಸ್ಟಿ ಎಸ್.ವೈ. ಅರುಣಾದೇವಿ ಉಪಸ್ಥಿತರಿರುವರು. 2011-12ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಬಿಬಿಎಂ ಮತ್ತು ಬಿಸಿಎ ಪದವಿಗಳಲ್ಲಿ ರ್ಯಾಂಕ್ ಗಳಿಸಿದ 8 ಜನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

