ಚೂಡಾನಾಯ್ಕ್ ರಾಜಿನಾಮೆ
ಶಿವಮೊಗ್ಗ: ಕೆಜೆಪಿ (ಶಿವಮೊಗ್ಗ ವಿಭಾಗ) ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಎಚ್. ಚೂಡಾನಾಯ್ಕ್ ರಾಜಿನಾಮೆ ನೀಡಿದ್ದಾರೆ. ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದು, ಜಿಲ್ಲಾ ಮುಖಂಡರು, ಮತದಾರರ ಸಲಹೆಯಂತೆ ಮುಂದಿನ ನಿರ್ಧಾರ ತಿಳಿಸುವುದಾಗಿ ಎಚ್. ಚೂಡಾನಾಯ್ಕ್ ತಿಳಿಸಿದ್ದಾರೆ.
ಕಳುವು ವಾಹನ ಪತ್ತೆಗೆ 4 ಜಿ ತಂತ್ರಜ್ಞಾನ
ಶಿವಮೊಗ್ಗ: ನಿಮ್ಮ ಕಾರು ಕಳುವಾಗಿದೆಯೇ ಅಥವಾ ನಿರ್ಜನ ಪ್ರದೇಶದಲ್ಲಿ ಕೆಟ್ಟು ನಿಂತಿದೆಯೇ ಅದನ್ನು ಹೊರ ಜಗತ್ತಿಗೆ (ಮೆಕಾನಿಕ್ ಅಥವಾ ಸಂಬಂಧಿಕರಿಗೆ) ತಿಳಿಸಲು ಸಾಧ್ಯವಾಗುತ್ತಿಲ್ಲವೇ- ಇದಕ್ಕೂಂದು ಪರಿಹಾರವನ್ನು ನಗರದ ಡಿ.ಎಸ್.ದಿನಕರ್ ನ್ಯಾಷನಲ್ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ಸೆಮಿಸ್ಟರ್ನ ಎಲೆಕ್ಟ್ರಾನಿಕ್ ವಿಭಾಗದ ವಿದ್ಯಾರ್ಥಿಗಳು ಪರಿಹಾರ ಕಂಡು ಹಿಡಿದಿದ್ದಾರೆ. ಶನಿವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ತಂತ್ರಜ್ಞಾನದ ಬಳಕೆ ಕುರಿತಂತೆ ವಿವರಣೆ ನೀಡಿದರು. ಕಾಲೇಜಿನ ಉಪನ್ಯಾಸಕಿ ನವ್ಯಶ್ರೀ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅರ್ಜುನ್, ಸಚಿನ್, ವಿನೋದ್ ಕುಮಾರ್, ತಪನ್ ಜಾದವ್ ಈ ತಂತ್ರಜ್ಞಾನ ಪ್ರಸ್ತುತ ಪಡಿಸಿದರು.
ಉಪಗ್ರಹ, 4 ಜಿ ತಂತ್ರಜ್ಞಾನದ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದಿದ್ದು, ಈ ತಂತ್ರಜ್ಞಾನ ಸದ್ಯ ಬಳಕೆಯಲ್ಲಿರುವುದು ವಿಶ್ವದ 7 ರಾಷ್ಟ್ರಗಳಾದ ಜಪಾನ್, ಚೈನಾ, ಇಟಲಿ, ತೈವಾನ್, ಮೇಲೇಷಿಯಾ, ಬ್ರಿಜಿಲ್ ಹಾಗೂ ಥೈಲ್ಯಾಂಡ್ಗಳಲ್ಲಿ ಮಾತ್ರ. ವಾಹನ ಕಳೆದುಕೊಂಡಾಗ ತಂತ್ರಜ್ಞಾನದಿಂದ ಉಪಗ್ರಹದ ಮೂಲಕ ಪತ್ತೆ ಹಚ್ಚಬಹುದು. ಇದು ವಾಹನ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಈ ತಂತ್ರಜ್ಞಾನ ಬಹಳಷ್ಟು ಅನುಕೂಲವಾಗಲಿದೆ.
ಬೈಕ್- ಕ್ರೂಸರ್ ಡಿಕ್ಕಿ: ಬೈಕ್ ಸವಾರ ಸಾವು
ಸಾಗರ: ತಾಲೂಕಿನ ಶಿರೂರು- ಆಲಳ್ಳಿ ಬಳಿ ಬೈಕ್ ಹಾಗೂ ಕ್ರೂಸರ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹುಣಸೂರು ವಾಸಿ ಮರಗೆಲಸ ಮಾಡುತ್ತಿದ್ದ ವಿಷ್ಣು (32) ಮೃತಪಟ್ಟವರು. ವಿಷ್ಣು ಬೈಕಿನಲ್ಲಿ ಹೋಗುತ್ತಿದ್ದ ವೇಳೆ, ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

