ಶಿವಮೊಗ್ಗ

18 ನಾಮಪತ್ರ ಸಲ್ಲಿಕೆ

Published On :

ಶಿವಮೊಗ್ಗ: ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಳ್ಳಲು ಇನ್ನೊಂದು ದಿನವಿರುವಂತೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಮಂಗಳವಾರ 15 ಅಭ್ಯರ್ಥಿಗಳು 18 ನಾಮಪತ್ರ ಸಲ್ಲಿಸಿದರು. ಭದ್ರಾವತಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕದಿರೇಶ್, ಜೆಡಿಯು ಅಭ್ಯರ್ಥಿಯಾಗಿ ನ್ಯಾಯವಾದಿ ಕಲ್ಪನ ಎ. ನಾಡಿಗ್ ಶರ್ಮ, ಸೊರಬ ಕ್ಷೇತ್ರದಿಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಸೂರು ಚಂದ್ರೇಗೌಡ, ಸಾಗರ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ದಿನೇಶ್ ಜಿ.ಪಿ., ತೀರ್ಥಹಳ್ಳಿ ಬಿಎಸ್ಪಿ ಅಭ್ಯರ್ಥಿಯಾಗಿ ಕುನಾಜೆ ಮಂಜುನಾಥಗೌಡ, ಶಿವಮೊಗ್ಗ ಎಸ್‌ಡಿಪಿಐ ಅಭ್ಯಥಿಯಾಗಿ ಕೆ.ಬಿ. ಬಷೀರ್ ಅಹ್ಮದ್, ಪಕ್ಷೇತರ ಅಭ್ಯರ್ಥಿಯಾಗಿ ಸೈಯದ್ ಮಜರ್ ಮಂಗಳವಾರ ನಾಮಪತ್ರ ಸಲ್ಲಿಸಿದರು. ಸೊರಬ ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡರು ಮಂಗಳವಾರ ಇನ್ನೆರಡು ಪ್ರತಿ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಜಿಲ್ಲೆಯಲ್ಲಿ ಸಲ್ಲಿಕೆಯಾದ ನಾಮಪತ್ರಗಳ ಸಂಖ್ಯೆ 76 ತಲುಪಿದೆ. ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆದಿನ.
ಸೊರಬ: 7 ನಾಮಪತ್ರ ಸಲ್ಲಿಕೆ
ಸೊರಬ: ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಬಾಸೂರು ಚಂದ್ರೆಗೌಡ ನಾಮಪತ್ರ ಸಲ್ಲಿಸಿದರು. ಸೋಮವಾರ ನಾಮಪತ್ರ ಸಲ್ಲಿಸಿ, ಉಳಿದ ಅಪೂರ್ಣ ಮಾಹಿತಿಯನ್ನು ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
 ಜಿಪಂ ಸದಸ್ಯ ಹುನವಳ್ಳಿ ಗಂಗಾಧರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ, ಮಾಜಿ ಸದಸ್ಯ ಎ.ಎಲ್. ಅರವಿಂದ್, ವಕೀಲ ಎಂ. ನಾಗಪ್ಪ ಇದ್ದರು. ಚುನಾವಣಾಧಿಕಾರಿ ಸಿ.ಎನ್. ಶ್ರೀಧರ್, ಎಆರ್‌ಒ ತೇಜಸ್ ಕುಮಾರ್, ಇಎಲ್‌ಎನ್ ಸಂಕ್ರಪ್ಪ ನಾಮಪತ್ರ ಸ್ವೀಕರಿಸಿದರು. ಈವರೆಗೆ ಒಟ್ಟು 7 ಜನ ನಾಮಪತ್ರ ಸಲ್ಲಿಸಿದಂತಾಗಿದೆ.
ವಿ. ಕದಿರೇಶ್ ನಾಮಪತ್ರ
ಭದ್ರಾವತಿ: ಕೆಜೆಪಿ ಭದ್ರಾವತಿ ನಗರ ಘಟಕದ ಅಧ್ಯಕ್ಷ ವಿ. ಕದಿರೇಶ್ ಭದ್ರಾವತಿ ಕ್ಷೇತ್ರಕ್ಕೆ ಸ್ಪರ್ಧಿಸಲು ಕೆಜೆಪಿ ಉಮೇದುವಾರರಾಗಿ ಮಂಗಳವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಪಕ್ಷೇತರರಾಗಿ ನ್ಯಾಯವಾದಿ ಕಲ್ಪನಾ ಎ. ನಾಡಿಗ್, ದೊಣಬಘಟ್ಟದ ಅಹಮದ್ ಆಲಿ ಹಾಗೂ ಅಮೀರ್‌ಜಾನ್ ಕಾಲೋನಿಯ ಮಾಜಿ ನಗರಸಭಾ ಸದಸ್ಯ ಟಿಪ್ಪೂ ಸುಲ್ತಾನ್ ಅವರು ಸಹ ನಾಮಪತ್ರವನ್ನು ಸಲ್ಲಿಸಿದರು. ಸೋಮವಾರ ತಡವಾಗಿ ನಾಮಪತ್ರ ಸಲ್ಲಿಸಿದ ಹೊಸಮನೆಯ ಓಂ ವಿಜಯವಂಶಿ ಅವರ ನಾಮಪತ್ರವೂ ಸೋಮವಾರ ತಡವಾಗಿ ನಾಮಪತ್ರ ಸಲ್ಲಿಸಿದ ಹೊಸಮನೆಯ ಓಂ ವಿಜಯವಂಶಿ ಅವರ ನಾಮಪತ್ರವೂ ಸೇರಿದಂತೆ ಇದುವರೆಗೆ ಸಲ್ಲಿಸಲ್ಪಟ್ಟ ನಾಮಪತ್ರಗಳ ಸಂಖ್ಯೆ 12ಕ್ಕೇರಿದೆ. ಕಾಂಗ್ರೆಸ್ ಟಿಕೆಟ್ ಪಡೆದಿರುವ ಸಿ.ಎಂ. ಇಬ್ರಾಹಿಂ ಅವರು ತಮ್ಮ ನಾಮಪತ್ರವನ್ನು ಇನ್ನೂ ಸಲ್ಲಿಸಿಲ್ಲ. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾದ ಬಿ.ಕೆ. ಸಂಗಮೇಶ್ವರ್ ಪಕ್ಷೇತರರಾಗಿ ಸ್ಪರ್ಧಿಸಲು ಮತ್ತೊಂದು ನಾಮಪತ್ರವನ್ನು ಸಲ್ಲಿಸುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.