ಇಂದು ಮಾಂಸ ಮಾರಾಟ ನಿಷೇಧ
ಶಿವಮೊಗ್ಗ: ಏಪ್ರಿಲ್ 19ರಂದು ನಡೆಯಲಿರುವ ಶ್ರೀರಾಮ ನವಮಿ ದಿನದಂದು ಶಿವಮೊಗ್ಗ ನಗರಸಭಾ ವ್ಯಾಪ್ತಿಯ ಸಮಸ್ತ ಎಲ್ಲಾ ಬಗೆಯ ಮಾಂಸ ಮಾರಾಟಗಾರರು ತಮ್ಮ ಕಸಾಯಿ ಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಾಂಸ ಮಾರಾಟಗಾರರು ಅಂದು ತಮ್ಮ ಅಂಗಡಿ ಮುಚ್ಚಿ ಮಾರಾಟ ನಿಲ್ಲಿಸುವಂತೆ ಪೌರಾಯುಕ್ತರು ನಗರಸಭಾ ಪ್ರಕಟಣೆಯಲ್ಲಿ ತಿಳಿಸಿದ್ದು, ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿಯೂ, ಇದಕ್ಕೆ ಆಸ್ಪದ ನೀಡಬಾರದೆಂದು ಕೋರಿದ್ದಾರೆ.
ಮುಕ್ತಭಂಡಾರ ಪುಸ್ತಕ ಮಾರಾಟ
ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ತೆಗೆದುಕೊಂಡಿರುವವರ ಅನುಕೂಲಕ್ಕಾಗಿ ಮುಕ್ತ ಭಂಡಾರ ಎಂಬ ಅಧ್ಯಯನ ಪುಸ್ತಕವನ್ನು ಹೊರತಂದಿದ್ದು, ಪುಸ್ತಕದ ಬೆಲೆ ರು. 125 ಆಗಿರುತ್ತದೆ.
ಆಸಕ್ತರು ಕಚೇರಿ ವೇಳೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕ.ರಾ.ಮು.ವಿ. ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಪುಸ್ತಕವನ್ನು ಕೊಳ್ಳಬಹುದಾಗಿದೆ. ವಿವರಗಳಿಗಾಗಿ ದೂ.ಸಂ. 0821-2515944ನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

