ಬ್ರಾಹ್ಮಣರು ಸಂಘಟಿತರಾಗಿ
ಶಿವಮೊಗ್ಗ: ಸಾರ್ವಜನಿಕ ಜೀವನದಲ್ಲಿ ಎಲ್ಲಾ ಸೌಲಭ್ಯಗಳು ಸಂಖ್ಯಾಬಲ ಮತ್ತು ಜಾತಿ ಆಧಾರದ ಮೇಲೆ ಸಿಗುತ್ತಿವೆ. ಅರ್ಹತೆಯಿಂದ ಅಲ್ಲ ಎಂಬುದನ್ನು ತಿಳಿದು ಬ್ರಾಹ್ಮಣ ತಿಳಿದು ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ.ದಿವಾಕರ್ ಅಭಿಪ್ರಾಯಪಟ್ಟರು.
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ ಹಾಗೂ ಸುವರ್ಣ ದಾಂಪತ್ಯ ಸನ್ಮಾನ ಕಾರ್ಯಕ್ರಮದ್ಲಲಿ ಅವರು, ಇದನ್ನು ಅರಿತು ಬ್ರಾಹ್ಮಣ ಸಮುದಾಯ ಸಾರ್ವಜನಿಕ ಆಡಳಿತ ಹಿಡಿಯಲು ಸಂಘಟಿತರಾಗಬೇಕು. ಬ್ರಾಹ್ಮಣರು ಸಾರ್ವಜನಿಕ ಆಡಳಿತದಲ್ಲಿ ಅಧಿಕಾರ ಮತ್ತು ಅವಕಾಶ ಪಡೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಬ್ರಾಹ್ಮಣರಿಗೆ ಅಧಿಕಾರ: ವಿಧಾನಸಭೆ ಚುನಾವಣೆಯಲ್ಲಿ ತಪ್ಪು ಮಾಡಿದವರನ್ನು ಕ್ಷಮಿಸಿಬಿಡೋಣ. ಮುಂದೆ ಬರಲಿರುವ ಮಹಾನಗರಪಾಲಿಕೆಯ ಚುನಾವಣೆಯೇ ಆಗಲಿ, ಸಂಸತ್ ಚುನಾವಣೆಯೇ ಆಗಲಿ ಅದರಲ್ಲಿ ಅಧಿಕಾರ ಬ್ರಾಹ್ಮಣರಿಗೇ ಸಿಗುವಂತಾಗಬೇಕು. ವಿಪ್ರರು ಅಧಿಕಾರ ಹಿಡಿದವರನ್ನು ಓಲೈಸುವುದನ್ನು ಬಿಟ್ಟು ಸಮಾಜದವರನ್ನು ಓಲೈಸಬೇಕು ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಸಮಾಜದ ಒಳಿತಿಗಾಗಿ ವಿಪ್ರ ನೌಕರರ ಸಂಘ ಕೆಲಸ ಮಾಡಿದೆ. ಸಮಾಜ ಮಾಡಬೇಕಾದ ಕಾರ್ಯಗಳನ್ನೂ ಮಾಡಿದೆ. ಸಮಾಜದಲ್ಲಿ ಸಂಘದಲ್ಲಿ ಇರುವ ಸಮಸ್ಯೆಗಳನ್ನು ತಿಳಿಸಿದರೆ, ಸರ್ಕಾರದ ಮೂಲಕ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ಸಂಘದ ಅಧ್ಯಕ್ಷ ಆರ್. ಅಚ್ಯುತರಾವ್, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಅನಂತ, ಜೋಷಿ ಫೌಂಡೇಶಢಜಜ ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್ ಜೋಶಿ, ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

