ಶಿವಮೊಗ್ಗ

ನಾಳೆ ಭಾವಲಹರಿ- ಗೀತಗಾಯನ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಆ.16
ಶಂಕರ್ ಸೈಕಲೋತ್ಸವ ಮತ್ತು ಶ್ರೀ ಗುರುಗುಹ ಸಂಗೀತ ಸಮಗ್ರ ಆಶ್ರಯದಲ್ಲಿ ಆ.18ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪ್ರಸಿದ್ಧ ಕವಿಗಳ ಕವನ ಗಾಯನ ಭಾವಲಹರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಂಗೀತ ಸಂಯೋಜಕರಾಗಿ ಅಪಾರ ಸೇವೆ ಸಲ್ಲಿಸಿದ ಮಹಾನ್ ಚೇತನಗಳಾದ ದಿ.ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರ ರಾಗಸಂಯೋಜನೆಯ ಭಾವಗೀತೆಗಳ ಸಂಗೀತ ಸಂಜೆ ಇದಾಗಿದ್ದು, ಶಿವಮೊಗ್ಗದ ಪ್ರತಿಭಾವಂತ ಗಾಯಕರಾದ ವಿದ್ವಾನ್ ಕೃಪಾ ಶ್ರೀಕಾಂತ್, ಋತ್ವಿಕ್ ಮುರಳೀಧರ್, ಅಮಿತ್ ಎಸ್. ಕುಮಾರ್, ಚಾರ್ವಿ ಮುರಳೀಧರ್ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವರು ಎಂದು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾದ್ಯಗೋಷ್ಠಿ ನಡೆಸಿಕೊಡಲು ಸ್ಥಳೀಯ ಕಲಾವಿದರಾದ, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ತಬಲದಲ್ಲಿ ಎಂ.ವಿ. ರಾಘವೇಂದ್ರ ಪ್ರಭು ಹಾಗೂ ಅರವಿಂದ ನಾಝುರೆ ಮತ್ತು ರಿದಂ ಪ್ಯಾಡ್‌ನಲ್ಲಿ ರಾಘವೇಂದ್ರ ರಂಗಧೋಳ್ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ಕವನ ಗಾಯನ ವಿಮರ್ಶೆ: ಇಂದಿನವರು ಸಂಗೀತವನ್ನು ಕೇವಲ ಮನರಂಜನೆಯಂತೆ ಆಲಿಸುತ್ತಾರೆ. ಆದರೆ, ಅದರ ಭಾವಾರ್ಥ, ಸಾಹಿತ್ಯಾರ್ಥ ತಿಳಿಯುವುದಿಲ್ಲ. ಹಾಗಾಗಿ ಕಾರ್ಯಕ್ರಮದಲ್ಲಿ ಕವನ ಗಾಯನವನ್ನು ವಿಮರ್ಶೆ ಮಾಡಲು ಕಮಲಾ ನೆಹರು ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಕೆ.ಸಿ. ದಾಕ್ಷಾಯಿಣಿ, ಜ್ಞಾನದೀಪ ಸೀನಿಯರ್ ಸೆಕಂಡರಿ ಶಾಲೆಯ ಕನ್ನಡ ಉಪನ್ಯಾಸಕ ತುರುವನೂರು ಎಂ.ವಿ. ಮಲ್ಲಿಕಾರ್ಜುನ ಉಪಸ್ಥಿತರಿರುವರು ಎಂದರು.
ಸಾಹಿತ್ಯ ಮತ್ತು ಸಂಗೀತಾಸ್ತಕರ ಪ್ರವೇಶಕ್ಕಾಗಿ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಪಾಸ್‌ಗಳು ದುರ್ಗಿಗುಡಿಯ ಶಂಕರ್ ಸೈಕಲೋತ್ಸವ ಮತ್ತು ಬಸವನಗುಡಿಯಲ್ಲಿರುವ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದಲ್ಲಿ ಪಡೆಯಬಹುದು ಎಂದು ಅವರು ತಿಳಿಸಿದರು. ವಿವರಗಳಿಗಾಗಿ- 994549990, 9448241149..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.