ಸೊರಗಿದ ಅಹವಾಲು ಆಲಿಕೆ ಸಭೆ
ಶಿವಮೊಗ್ಗ: ಅದೇಕೋ ಪೊಲೀಸರಿಗೂ ಸಾರ್ವಜನಿಕರ ಸಮೀಕರಣ ಆಗಿಬರುತ್ತಿಲ್ಲ. ಅಹವಾಲು ಆಲಿಸುತ್ತೇವೆ, ನಿಮ್ಮ ವೈಯಕ್ತಿಕ ಸಮಸ್ಯೆಯಾಗಲೀ, ಸಾರ್ವಜನಿಕ ಸಮಸ್ಯೆಯಾಗಲೀ ನಮ್ಮ ಗಮನಕ್ಕೆ ತನ್ನಿ ಎಂದು ಪೊಲೀಸ್ ಇಲಾಖೆ ಅಹವಾಲು ಆಲಿಕೆ ಸಭೆ ಕರೆದರೆ ಜನ ಮಾತ್ರ ಸಭೆಯಿಂದ ದೂರ ಉಳಿಯುತ್ತಿದ್ದಾರೆ.
ಕಳೆದ ತಿಂಗಳು ನಡೆದ ಸಭೆಯಲ್ಲಿ ಜಯಕರ್ನಾಟಕ ಸಂಘಟನೆ ಸೇರಿದಂತೆ ಒಟ್ಟು 13 ಮಂದಿ ಸಭೆಗೆ ಬಂದಿದ್ದರೆ, ಈ ಬಾರಿ ಸಭೆಗೆ ಬಂದವರು ಕೇವಲ ನಾಲ್ಕೈದು ಮಂದಿ.
ಭಾನುವಾರ ಇಲ್ಲಿನ ಡಿಎಆರ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸುವ ಸಭೆ ಕರೆಯಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ದಯಾಳ್ ನೇತೃತ್ವದಲ್ಲಿ ಸಭೆ ನಡೆಯಿತು. ಬೆಳಗ್ಗೆ 11.15 ಗಂಟೆಗೆ ಸಭೆ ಆರಂಭವಾಯಿತು. ಜನ ಮಾತ್ರ ಅತ್ತ ಸುಳಿಯಲೇ ಇಲ್ಲ.
ಬಾರದ ಜನ: ಹಾಗೂ ಹೀಗೂ ಸಭೆ ಆರಂಭಿಸಿದರೆ ನಂತರ ಬಂದು ಸೇರಿಕೊಳ್ಳುತ್ತಾರೆಂಬ ಪೊಲೀಸ್ ಅಧಿಕಾರಿಗಳ ಆಶಾಭಾವನೆ ಹುಸಿಯಾಯಿತು. ಸಭೆ ಆರಂಭವಾಗಿ 15-20 ನಿಮಿಷ ತರುವಾಗಿ ಎಲ್ಲಾ ಅಹವಾಲು ಆಲಿಕೆ ಮುಗಿದಿತ್ತು, ಅಲ್ಲಿಗೆ ಸಭೆಯೇ ಕೊನೆಗೊಂಡಿತು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಗಳು, ಜನ ಬರಲಿಲ್ಲ ಎಂದರೆ ನಾವೇನು ಮಾಡೋಣ ಹೇಳಿ. ಸಭೆ ಕರೆದಿದ್ದೇವೆ. ಜನ ಬಂದು ಸಾರ್ವಜನಿಕ ಸಮಸ್ಯೆ, ಇಲಾಖೆಗೆ ಸಂಬಂಧಪಟ್ಟ ವೈಯಕ್ತಿಕ ಸಮಸ್ಯೆಗಳನ್ನು ಇಲ್ಲಿ ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಅವರು ಬಾರದೇ ಇದ್ದರೆ ಏನು ಮಾಡೋದು ಎಂದು ಅಧಿಕಾರಿಗಳೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದರು.
ಕೌಶಲೇಂದ್ರ ಕುಮಾರ್ ಮಾತನಾಡಿ, ಈ ಬಗ್ಗೆ ಬೊಲೀಸ್ ಕಂಟ್ರೊಲ್ ರೂಂಗೆ ಮಾಹಿತಿ ನೀಡಿ ವಿಚಾರಣೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಸಾರ್ವಜನಿಕರೊಬ್ಬರು ಮಾತನಾಡಿ, ಭದ್ರಾವತಿ ನಗರದ ತರೀಕೆರೆ ರಸ್ತೆಯ ಬಾರ್ ಅಂಡ್ ರೆಸ್ಟೊರೆಂಟ್ ಒಂದರ ಎದುರಿಗೆ ಪ್ರತಿದಿನ ಸುಮಾರು 200ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ರಸ್ತೆ ಮೇಲೆಯೇ ನಿಲ್ಲಿಸಲಾಗುತ್ತದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂದರು.
ಕಿರಿಕಿರಿ: ಅಪಘಾತಗಳು ಸಾಮಾನ್ಯವಾಗಿವೆ. ಇದೇ ರಸ್ತೆಯ್ಲಲಿ ಆಸ್ಪತ್ರೆ, ಆಶ್ರಮ, ಕಲ್ಯಾಣ ಮಂದಿರಗಳೂ ಇವೆ. ಬರುವ ಕುಡುಕರಿಂದ ದಿನನಿತ್ಯ ಸಾರ್ವಜನಿಕರು ಕಿರಿಕಿರಿ ಹಾಗೂ ಮುಜುಗರ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಯಾಳ್ ಮಾತನಾಡಿ, ತಾವು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

