ಶಿವಮೊಗ್ಗ

ನಾಡಿ ಆಯ್ಕೆ: ಸಂಭ್ರಮಾಚರಣೆ

Published On :

ಹೊಸನಗರ: ಜಿಲ್ಲೆಯವರಾದ ಹಿರಿಯ ಸಾಹಿತಿ ನಾ. ಡಿಸೋಜ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಸಾಪ ಸದಸ್ಯರು, ಸಾಹಿತ್ಯಾಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ನಂತರ ಮಾತನಾಡಿದ ಕಸಾಪ ಅಧ್ಯಕ್ಷ ಕೆಸಿನಮನೆ ರತ್ನಾಕರ್, ನಾ. ಡಿಸೋಜ ಸಮ್ಮೇಳನಾಧ್ಯಕ್ಷರಾಗಿರುವುದು ಜಿಲ್ಲೆಗೆ ಸಂದಿರುವ ಗೌರವ. ನಾ. ಡಿಸೋಜ ತಮ್ಮ ಕೃತಿಗಳ ಮೂಲಕ ಮಲೆನಾಡಿನ ಸೊಗಡು ಅದರಲ್ಲೂ ಮುಳುಗಡೆ ಸಂತ್ರಸ್ತರ ನೋವನ್ನು ಪರಿಣಾಮಕಾರಿಯಾಗಿ ಜಗತ್ತಿಗೆ ಪ್ರಸ್ತುತಪಡಿಸಿದ್ದಾರೆ. ಅವರಿಗೆ ಈ ಗೌರವ ಸಂದಿರುವುದು ಈ ಭಾಗದ ಕಿರಿಯ ಸಾಹಿತಿಗಳಿಗೆ ಇನ್ನಷ್ಟು ಸ್ಫೂತರ್ ತಂದಿದೆ ಎಂದರು.
ಈ ಸಮಯದಲ್ಲಿ ಪಪಂ ಸದಸ್ಯ ರತ್ನಾಕರ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಎಚ್. ಶ್ರೀನಿವಾಸ್ ಕಾಮತ್, ವಿನಾಯಕ ಅರೇಮನೆ, ಕಸಾಪ ತಾಲೂಕು ಕಾರ್ಯದರ್ಶಿ ಮಹಾಬಲ, ಗುರುಮೂರ್ತಿ, ಚಿತ್ತಾರ ಮುರಳಿ ಎಲ್.ಕೆ, ವೇಣುಗೋಪಾಲ್, ಎಂ.ಪಿ. ಸುರೇಶ್, ಗಿರೀಶ್, ಜಯನಗರ ಕೃಷ್ಣಮೂರ್ತಿ, ಪಂಚಾಕ್ಷರಯ್ಯ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.