ಶಿವಮೊಗ್ಗ

ಪಹಣಿ ನೀಡಿ ಜೋಳ ಕೊಡಿ'

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ಡಿ.9 ತಾಲೂಕಿನ ಸಂಡ ಗ್ರಾಮದಲ್ಲಿನ ಕೆಎಂಎಫ್ ಪಶು ಆಹಾರ ಘಟಕಕ್ಕೆ ಅಗತ್ಯವಾದ ಮೆಕ್ಕೆಜೋಳದ ಖರೀದಿ ಆರಂಭಿಸಲಾಗಿದ್ದು, ರೈತರು ಕಂದಾಯ ಇಲಾಖೆಯ ದೃಢೀಕರಣದ ಜತೆಗೆ ಪಹಣಿ ನೀಡಿ ಜೋಳ ನೀಡುವಂತೆ ಘಟಕದ ಪ್ರಧಾನ ವ್ಯವಸ್ಥಾಪಕ ಡಾ. ಸದಾಶಿವ ತಿಳಿಸಿದ್ದಾರೆ.
ಸೋಮವಾರ ಸಂಜೆ ನಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸಂಡ ಗ್ರಾಮದ ಕೈಗಾರಿಕಾ ಪ್ರದೇಶದ ಪಶು ಆಹಾರ ಕಾರ್ಖಾನೆಗೆ ಕೆಎಂಎಫ್ ಸಂಸ್ಥೆ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯನ್ವಯ ಪ್ರತಿ ಕ್ವಿಂಟಲ್ಗೆ ರು. 1310 ದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲಿದೆ ಎಂದರು.
ಪರಿಶೀಲಿಸಿ ಪೂರೈಕೆ: ಸರ್ಕಾರ ನಿಗದಿಪಡಿಸಿದ ಗುಣಮಟ್ಟದ ಜೋಳದ ಮಾದರಿಯನ್ನು ಘಟಕದ ಗುಣನಿಯಂತ್ರಣ ವಿಭಾಗದಲ್ಲಿ ಪರೀಕ್ಷಿಸಿಕೊಂಡು ಘಟಕದಲ್ಲಿನ ಅಧಿಕಾರಿಗಳು ಸೂಚಿಸಿದ ನಿರ್ದಿಷ್ಟ ದಿನದಂದು ಪರಿಶೀಲನೆಗೊಳಪಡಿಸಿ ಮಾದರಿ ರೀತಿಯಲ್ಲಿ ಪೂರೈಕೆ ಮಾಡುವಂತೆ ತಿಳಿಸಿದರು.
ನೇರ ಹಣ: ಘಟಕಕ್ಕೆ ಸಾಗಾಣಿಕೆ ವೆಚ್ಚಕ್ಕೆ ಕೆಎಂಎಫ್ ಜವಾಬ್ದಾರಿಯಲ್ಲ ಎಂದು ತಿಳಿಸಿದ ಅವರು ಖರೀದಿಯಾದ ವಾರದಲ್ಲಿ ಚೆಕ್ ಮೂಲಕ ರೈತರ ಹೆಸರಿಗೆ ನೇರವಾಗಿ ಹಣ ಪಾವತಿಸುವುದಾಗಿ ತಿಳಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಂಘಗಳಿಗೆ ಖರೀದಿ ಆರಂಭಿಸಿರುವ ಬಗ್ಗೆ ಸುತ್ತೋಲೆ  ಕಳುಹಿಸಿರುವುದಾಗಿ ತಿಳಿಸಿದ ಅವರು, ಘಟಕಕ್ಕೆ 10 ಲಕ್ಷ ಮೆಟ್ರಿಕ್ ಜೋಳ ಅಗತ್ಯವಿದ್ದು ವಾರದಲ್ಲಿ ಪ್ರಾಯೋಗಿಕವಾಗಿ ಉತ್ಪಾದನೆ ಆರಂಭಿಸಿ, ಪರೀಕ್ಷಿಸಿ ನಂತರದಲ್ಲಿ ನಿರಂತವಾಗಿ ಪಶುಆಹಾರ ಉತ್ಪಾದನೆಯನ್ನು   ಕೈಗೊಳ್ಳುವುದಾಗಿ ತಿಳಿಸಿದರು.  ಶಿವಮೊಗ್ಗ ಕೆಎಂಎಫ್ ಉಪ ಪ್ರಧಾನ ವ್ಯವಸ್ಥಾಪಕ ಶೇಖರಪ್ಪ, ರಮೇಶ್ ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.