ಜ.11, 12ರಂದು ಕೃಷಿ ಉತ್ಸವ
ಹೊಸನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜನವರಿ 11 ಮತ್ತು 12ರಂದು ಎರಡು ದಿನ ತಾಲೂಕು ಮಟ್ಟದ ಕೃಷಿ ಉತ್ಸವವನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಪೂರ್ವಭಾವಿಯಾಗಿ ಸ್ಥಳೀಯ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು ಮತ್ತು ತಾಲೂಕು ಮಟ್ಟದ ಪ್ರಮುಖರ ಸಭೆ ನಡೆಸಿ ಡಿ.ಎಂ. ರತ್ನಾಕರ್ ಶ್ರೇಷ್ಠಿ ಅವರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಉತ್ಸವ ಸಂದರ್ಭ ವಿಭಿನ್ನ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಸುಮಾರು 100 ಮಳಿಗೆ ತೆರೆಯಲಾಗುವುದು ಎರಡು ದಿನ ನಡೆಯಲ್ಲಿರುವ ಉತ್ಸವದಲ್ಲಿ ಕೃಷಿ, ಹೈನುಗಾರಿಕೆ ಮತ್ತು ಮಹಿಳಾ ಸಬಲೀಕರಣ, ಪುಷ್ಪೋದ್ಯಮ, ಇತರ ಪಶು ಸಂಗೋಪನೆ ವಿಷಯಾಧರಿಸಿ ಮೊದಲ ದಿನ 3 ಗೋಷ್ಠಿ ಮತ್ತು 2ನೇ ದಿನ 3 ಗೋಷ್ಠಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8277004843 ಅಥವಾ 9449727296 ಸಂಪರ್ಕಿಸಿ.
ಧನುರ್ಮಾಸ ಪೂಜೆ
ಹೊಸನಗರ: ಕೋಣಂದೂರು ಬೃಹನ್ಮಠದಲ್ಲಿ ಧನುರ್ಮಾಸ ವಿಶೇಷ ಪೂಜೆ ಮಂಗಳವಾರ ಪ್ರಾರಂಭವಾಗಿದ್ದು, ಜನವರಿ 14ರ ವರೆಗೆ ಶ್ರೀ ಕ್ಷೇತ್ರ ಬೃಹನ್ಮಠ ಕೋಣದೂರು ಮಠದಲ್ಲಿ ಶಿವಲಿಂಗೇಶ್ವರ ಮಹಾಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ. ರಾಜೋಪಚಾರ ಮಹಾಪೂಜೆ ಬಿಲ್ವಾರ್ಚನೆ, ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ಬೆಳಗ್ಗೆ 7 ರಿಂದ ಆರಂಭಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

