ಸಂಸ್ಥಾಪನಾ ದಿನಾಚರಣೆ
ಜೋಗ್ಫಾಲ್ಸ್: ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸುವ ಆತ್ಮಾಭಿಮಾನ ವಿದ್ಯಾರ್ಥಿಗಳು ಮೆರೆಯಬೇಕು ಎಂದು ಬಸವರಾಜ ಬಾಣಾವರ ಹೇಳಿದರು. ಇಲ್ಲಿನ ಕಾರ್ಗಲ್ನ ಕುವೆಂಪು ರಂಗಮಂದಿರದಲ್ಲಿ ನಡೆದ ಸಾಗರ ಬೆರಳಚ್ಚು -ಕಂಪ್ಯುಟರ್ ವಿದ್ಯಾಶಾಲೆ, ಕಾರ್ಗಲ್ ಸಂಸ್ಥೆಯ 43ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಮಾರಂಭ ಉದ್ಘಾಟಿಸಿದ ಎಸ್.ಎಂ.ಪೈ, ಕಾರ್ಗಲ್ನಲ್ಲಿ 1970ರಲ್ಲಿ ಬಾಣಾವರದ ಬಸವರಾಜಪ್ಪನವರು ಸಾಗರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಶಾಲೆಯನ್ನು ಸ್ಥಾಪಿಸಿ ಸತತ 43 ವರ್ಷಕಾಲ ವಿದ್ಯಾಭ್ಯಾಸ ನೀಡುತ್ತಾ ಬಂದಿರುವುದು ಅವರ ಸೇವಾ ಮನೋಭಾವನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು. ಕೈಗಾರಿಕಾ ವಿಸ್ತರಣಾಧಿಕಾರಿ ಕೆ.ವಿ. ವೆಂಕಟೇಶ್, ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಮಾತನಾಡಿದರು. ಕವಿನಿನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಮಂಜುನಾಥ್ ಉಪಸ್ಥಿತರಿದ್ದರು.
ರಾಹುಲ್ ಹುಂಡೈ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಡಿ.19
ನಗರದ ಶಂಕರಮಠ ರಸ್ತೆಯಲ್ಲಿ ರಾಹುಲ್ ಹುಂಡೈ ನೂತನ ಕಾರ್ ಶೋರೂಂಅನ್ನು ಗುರುವಾರ ಕಂಪನಿಯ ವಿಭಾಗಿಯ ವ್ಯವಸ್ಥಾಪಕ ವೈ.ಎಸ್. ಲೀ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಂಡೈ ಕಂಪನಿಯ ರಾಜ್ಯದ ಮುಖ್ಯಸ್ಥ ಕಾರ್ತಿಕ್, ಭಾರತದಲ್ಲಿ 1998ರಿಂದ ಹುಂಡೈ ಕಾರು ವಹಿವಾಟು ಪ್ರಾರಂಭವಾಗಿದೆ. ರಾಜ್ಯದಲ್ಲಿ ಪ್ರಸ್ತುತ 16 ಡಿಲರ್ಸ್ ಇದ್ದಾರೆ. 10 ವಿವಿಧ ಮಾದರಿಯ ಕಾರುಗಳನ್ನು ಹೊಂದಿದ್ದು, ರಾಜ್ಯದ ಮಾರುಕಟ್ಟೆಯಲ್ಲಿ ಶೇ. 21ರಷ್ಟು ಪಾಲನ್ನು ಹೊಂದಿದೆ ಎಂದರು.
ಹುಂಡೈ ಕಂಪನಿಯು ಐ- 10 ಗ್ರ್ಯಾಂಡ್ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದೆ. ಉತ್ಕೃಷ್ಟ, ಗುಣಮಟ್ಟದ ಕಾರುಗಳನ್ನು ಗ್ರಾಹಕರಿಗೆ ನೀಡುತ್ತಿದೆ. ರಾಜ್ಯದಲ್ಲಿ ಪ್ರತಿ ತಿಂಗಳು 2 ಸಾವಿರ ಕಾರುಗಳು ಮಾರಾಟವಾಗುತ್ತಿವೆ ಎಂದು ವಿವರಿಸಿದರು.
ರಾಹುಲ್ ಹುಂಡೈನ ಶೋರೂಂನ ಗಣಪತಿ ಹೆಗಡೆ ಮಾತನಾಡಿ, ನೂತನ ಶೋರೂಂನಲ್ಲಿ ಕಂಪನಿಯ ಎಲ್ಲಾ ಮಾದರಿಯ ಕಾರುಗಳು ಲಭ್ಯವಿದ್ದು, ಕಾರು ಉತ್ಪಾದನಾ ಕಾರ್ಖಾನೆಯಲ್ಲಿ ತರಬೇತಿ ಪಡೆದ ನುರಿತ ಮೆಕ್ಯಾನಿಕ್ಗಳಿಂದ ಉತ್ತಮ ಸೇವೆ ಸಿಗಲಿದೆ ಎಂದು ತಿಳಿಸಿದರು.
ಕಾರು ಮಾರಾಟದೊಂದಿಗೆ ಬಿಡಿ ಭಾಗಗಳ ಮಾರಾಟ ಹಾಗೂ ದುರಸ್ತಿ ಸೇರಿದಂತೆ ಎಲ್ಲ ಬಗೆಯ ಸೇವೆ ಒದಗಿಸಲು ರಾಹುಲ್ ಹುಂಡೈ ಶೋರೂಂ ಆರಂಭಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

