ಶಿವಮೊಗ್ಗ

ರಸ್ತೆ ದುರಸ್ತಿಗೆ ಆಗ್ರಹ

Published On :

ಶಿವಮೊಗ್ಗದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ನಾಲ್ಕು ಚಕ್ರದ ವಾಹನಗಳಿರಲಿ, ದ್ವಿಚಕ್ರ ವಾಹನಗಳು ಓಡಾಡುವುದೂ ಕಷ್ಟ. ಎಲ್ಲಾ ರಸ್ತೆಗಳ ಡಾಂಬರ್ ಕಿತ್ತು ಹೋಗಿರುವುದರಿಂದ ಅಲ್ಲಿನ ಮನೆಗೆಳಿಗೆ ಧೂಳು ನುಗ್ಗುತ್ತಿದೆ.
    ಅಶೋಕ ನಗರಕ್ಕೂ ಜನರು ಇದೇ ಬಡಾವಣೆಯ ಮೂಲಕ ಓಡಾಡುವುದರಿಂದ ಸಂಚರಿಸಲು ಕಷ್ಟಕರವಾಗಿದ್ದು, ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನಹರಿಸಿ ರಸ್ತೆಗಳ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಬೀದಿಗಿಳಿಯಬೇಕಾದಿತ್ತು.
                  
             - ಸರೋಜಮ್ಮ,
     ಸ್ಥಳೀಯ ಬಡಾವಣೆ ನಿವಾಸಿ

ಸರ್ಕಾರಿ ಬಸ್ ಸಂಚಾರಕ್ಕೆ ಮನವಿ
ಭದ್ರಾವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಇರುವುದು ಏಣಿಕೆಯಷ್ಟು ಮಾತ್ರ. ಬೆಳಗ್ಗೆ 10 ಗಂಟೆವರೆಗೆ ಖಾಸಗಿ ಬಸ್‌ಗಳು ಸಂಚರಿಸುತ್ತವೆ. 11 ಗಂಟೆ ನಂತರ ಸರಿಯಾದ ಸಮಯಕ್ಕೆ ಬಸ್‌ಗಳು ಇಲ್ಲದೇ ಬಸ್ ನಿಲ್ದಾಣದಲ್ಲೇ ಪ್ರಯಾಣಿಕರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗಿದೆ. ಪರೀಕ್ಷೆ ವೇಳೆ ಬೆಳಗ್ಗೆ ಮುಂಜಾನೆಯ ಬಸ್‌ಗೆ ಹೋಗಬೇಕು. ಒಂದು ಸರ್ಕಾರಿ ಬಸ್ ಸಂಚರಿಸುತ್ತದೆ.
  ಅದು ಕೂಡ ಬೆಳಗ್ಗೆ ಮತ್ತು ಸಂಜೆ ಎರಡು ಸಮಯ ಮಾತ್ರ. ಗ್ರಾಮೀಣ ಭಾಗದ ಪ್ರದೇಶಗಳಿಗೆ ಸರ್ಕಾರಿ ಬಸ್‌ಗಳು ಸಂಚರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅದೇ ರೀತಿ ಕುವೆಂಪು ವಿಶ್ವವಿದ್ಯಾನಿಲಯಕ್ಕೂ ಬಸ್ ಸಂಚಾರಕ್ಕೆ ಆದ್ಯತೆ ನೀಡಬೇಕು.
   - ಕಾವ್ಯಶ್ರೀ, ಕುವೆಂಪು ವಿವಿ            
                       ವಿದ್ಯಾರ್ಥಿನಿ

ಬಾಯಿ ತೆರೆದ ಮ್ಯಾನ್‌ಹೋಲ್
ನಗರದ ಟಿಪ್ಪು ನಗರದಲ್ಲಿರುವ ಮ್ಯಾನ್‌ಹೋಲ್ ತೆರೆದುಕೊಂಡಿದ್ದು, ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ.
   ಅಲ್ಲದೆ, ಈ ಬಡಾವಣೆಯಲ್ಲಿರುವ 7ಕ್ರಾಸ್‌ನಲ್ಲಿ ರಸ್ತೆ ಸರಿಯಿಲ್ಲ. ಅರ್ಧ ಭಾಗ ಕಾಂಕ್ರಿಟ್ ರಸ್ತೆಯಾದರೆ ಉಳಿದದ್ದು ಮಣ್ಣು ರಸ್ತೆ. ಇದರಿಂದ ಧೂಳು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತದೆ.
 ಮ್ಯಾನ್‌ಹೋಲ್ ಮುಚ್ಚುವಂತೆ ನಗರಸಭೆ ಕಾರ್ಮಿಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
  ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಈ ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತ ಮಾಡಿಕೊಂಡು ಆಸ್ಪತ್ರೆ ಸೇರಿರುವ ಉದಾಹರಣೆ ಇದೆ.
  ಮಕ್ಕಳು ಆಟವಾಡುವಾಗ ಮ್ಯಾನ್‌ಹೋಲ್‌ನಲ್ಲಿ ಬೀಳುವ ಭೀತಿ ಇದೆ. ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲದಾಗಿದೆ.
ಮಕ್ಕಳಿಗೆ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಹೊಣೆ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
   ಬಹುತೇಕ ಮಧ್ಯಮವರ್ಗದ ಜನರೇ ಇರುವ ಈ ಬಡಾವಣೆಯನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.
       - ಪುಟ್ಟಮ್ಮ, ಸ್ಥಳೀಯರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.