ಶಿವಮೊಗ್ಗ

ಸೊರಬದಲ್ಲಿ ಮೀನಾಕ್ಷಮ್ಮನಿಗೆ ಶ್ರದ್ಧಾಂಜಲಿ

Published On :

ಕ.ಪ್ರ.ವಾರ್ತೆ, ಸೊರಬ, ಡಿ.23
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸೋಮವಾರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿ, ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಹೊಸಬಾಳೆ ದತ್ತಾತ್ರೇಯ ಅವರ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ದತ್ತಾತ್ರೇಯ ಹೊಸಬಾಳೆಯವರ ತಾಯಿ ಮೀನಾಕ್ಷಮ್ಮನವರು 12 ದಿನಗಳ ಹಿಂದಷ್ಟೆ ನಿಧನರಾಗಿದ್ದರು.
ಪ್ರಮುಖರು ಇದ್ದರು: ಈ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿ ಪ್ರಮುಖರಾದ ಧರ್ಮೇಂದ್ರ ಪ್ರಧಾನ್, ಅನಂತಕುಮಾರ್, ಪ್ರಹ್ಲಾದ ಜೋಷಿ, ಆಯನೂರು ಮಂಜುನಾಥ್ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಪದಾಧಿಕಾರಿಗಳಾದ ರಾಕೇಶ್ ಸಿನ್ಹ, ಕಮಲ ಶರ್ಮ, ಸಂಜೀವ್ ಕುಮಾರ್, ಓಂಪ್ರಕಾಶ್ ಧನಕಾಡ್, ಆಶಿಶ್ ಸೂಧ, ಪಂಕಜ್ ಶರ್ಮ, ವಿ. ಮುರಳೀಧರನ್, ಮಹೇಂದ್ರ ಪಾಂಡೆ, ರವಿಕುಮಾರ್, ಮಾ. ನಾಗರಾಜ್, ಎಂ.ಎಲ್. ಶ್ರೀಧರ್, ತೇಜಸ್ವಿನಿ ಅನಂತ್ ಕುಮಾರ್ ಮೊದಲಾದವರು ಇದ್ದರು.
ದತ್ತಾತ್ರೇಯ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ ರಾಜನಾಥ ಸಿಂಗ್, ಮೀನಾಕ್ಷಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಆಗಮಿಸಿ ದತ್ತಾತ್ರೇಯ ಅವರ ಮನೆಗೆ ತೆರಳಿ, ಸಾಂತ್ವನ ಹೇಳಿ, ಮೀನಾಕ್ಷಮ್ಮನವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಶಂಕರ ಗೌಡ, ಆರ್.ಕೆ.ಸಿದ್ದರಾಮಣ್ಣ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯ ಹುಣವಳ್ಳಿ ಗಂಗಾಧರಪ್ಪ, ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ, ಮಾಜಿ ಸದಸ್ಯ ಎ.ಎಲ್. ಅರವಿಂದ್, ಪದ್ಮನಾಭ ಭಟ್, ಡಿ.ಎಸ್. ಅರುಣ್, ನಟರಾಜ್, ಹೃಷಿಕೇಶ್ ಪೈ, ಭವಾನಿರಾವ್ ಮೊರೆ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು.
ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಹೊಸಬಾಳೆ ಕುಟುಂಬಕ್ಕೆ ಶೋಕ ಸಂದೇಶ ಕಳುಹಿಸಿದ್ದರು. ಶೋಕ ಸಭೆಯ ಹಿನ್ನೆಲೆಯಲ್ಲಿ ಬಿಜೆಪಿಯು ಯಾವುದೇ ಸಭೆ, ಸನ್ಮಾನ ಸಮಾರಂಭ ಮುಂತಾದವುಗಳಿಗೆಅವಕಾಶ ನೀಡಲಿಲ್ಲ. ಪಕ್ಷದ  ಹಲವು ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.