ಶಿವಮೊಗ್ಗ

ನೋಡೋರಿಲ್ಲ ನಾಡಕಚೇರಿ...!

Published On :

- ಬಿ.ವಿ.ಶೇಷಗಿರಿ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಡಿ.30
ಐತಿಹಾಸಿಕ ಕ್ಷೇತ್ರ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತಾಳಗುಂದ ಹೋಬಳಿಯ ನಾಡಕಚೇರಿಯಲ್ಲಿ ಸಿಬ್ಬಂದಿಗಳೇ ಇಲ್ಲದೇ ಹೆಸರಿಗೆ ಮಾತ್ರ ನಾಡಕಚೇರಿ ಎಂಬಂತಾಗಿದೆ.
ತಾಳಗುಂದ ಜಿಲ್ಲೆ ಮತ್ತು ತಾಲೂಕಿನಲ್ಲಿ ಅತ್ಯಂತ ದೊಡ್ಡ ಹೋಬಳಿ ಎಂಬ ಹೆಗ್ಗಳಿಕೆ ಪಡೆದಿದ್ದು, ಇಲ್ಲಿನ ನಾಡಕಚೇರಿ ಮಾತ್ರ ಜಿಲ್ಲಾ ಆಡಳಿತ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಸಿಬ್ಬಂದಿ ಕೊರತೆ: ನಾಡಕಚೇರಿ ಎಂದ ಮೇಲೆ ಉಪತಹಸೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮಲೆಕ್ಕಿಗರು ಇರಬೇಕು. ಆದರೆ ತಾಳಗುಂದ ನಾಡಕಚೇರಿಯಲ್ಲಿ ವರ್ಷಕಳೆದರೂ ಉಪತಹಸೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಲ್ಲದೇ ಕಾರ್ಯನಿರ್ವಹಿಸುವಂತಾಗಿದೆ.
ಇಡೀ ತಾಲ್ಲೂಕಿನಲ್ಲಿ 66 ವೃತ್ತಗಳಿದ್ದರೆ, ಈ ಹೋಬಳಿಯಲ್ಲಿ 21 ವೃತ್ತಗಳಿವೆ. ಒಟ್ಟು 21 ಗ್ರಾಮಲೆಕ್ಕಿಗರು  ಇಲ್ಲಿರಬೇಕಿತ್ತು, ಆದರೆ ಇಲ್ಲಿ ಇರುವಂತಹ ಗ್ರಾಮ ಲೆಕ್ಕಿಗರ ಸಂಖ್ಯೆ ಕೇವಲ 10. ಇವರಲ್ಲೇ ಇಬ್ಬರು ಅಟಲ್ ಜೀ ಕೇಂದ್ರಕ್ಕೆ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಖಾಲಿ ಖಾಲಿ: ರಾಜಕೀಯವಾಗಿ ನಿರ್ಣಯಕ ಪಾತ್ರ ವಹಿಸುತ್ತಿರುವ ಹೋಬಳಿ ಇದಾಗಿದ್ದು, ಈ ಭಾಗದ ರೈತರು ನಾಡಕಚೇರಿಗೆ 15-20 ಕಿ.ಮೀ. ಸುತ್ತಿ ಬರಬೇಕು. ಹಾಗೆ ತಮ್ಮ ಕೆಲಸಕ್ಕೆಂದು ಬಂದರೆ ಕಚೇರಿಯಲ್ಲಿ ಯಾರೊಬ್ಬರೂ ಇರುವುದಿಲ್ಲ.  
ಕಳೆದ ತಿಂಗಳು ಶಿರಾಳಕೊಪ್ಪ ಪಟ್ಟಣಕ್ಕೆ ಆಗಮಿಸಿದ್ದ ಲೋಕಾಯುಕ್ತ ಡಿಎಸ್ಪಿ ಮತ್ತು ಸಿಬ್ಬಂದಿ ಪಟ್ಟಣಕ್ಕೆ ಭೇಟಿ ನೀಡಿದಾಗ ಪತ್ರಿಕೆ ಅವರಿಗೆ ತಾಳಗುಂದ ನಾಡಕಚೇರಿ ಸಿಬ್ಬಂದಿ ಹಾಗೂ ಅಲ್ಲಿನ ಗ್ರಾಮಸ್ಥರ ಸಮಸ್ಯೆ ಬಗ್ಗೆ ಲಿಖಿತ ಮಾಹಿತಿ ನೀಡಿತ್ತು.
ಆದರೆ ಈವರೆಗೆ ಜಿಲ್ಲಾ ಆಡಳಿತ ತಲೆಕೆಡಿಸಿಕೊಳ್ಳದೇ, ಲೋಕಾಯುಕ್ತರ ಮನವಿಗೂ ಕಿವಿಗೊಡದೇ ಹಾಗೆಯೇ ಕಾಲಹರಣ ಮಾಡುತ್ತಾ ಇಲ್ಲಿನ ರೈತರ ಬದುಕಿನೊಂದಿಗೆ ಚೆಲ್ಲಾಟ ವಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತೀವ್ರ ಒತ್ತಡ: ಶಿರಾಳಕೊಪ್ಪ ಪಟ್ಟಣದಲ್ಲಿ ಇರುವಂತಹ ಉಡಗಣಿ ನಾಡಕಚೇರಿ ಉಪತಹಸೀಲ್ದಾರ್ ತಾಳಗುಂದ ನಾಡಕಚೇರಿ ಉಪತಹಸೀಲ್ದಾರ್ ಆಗಿ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಖರೀದಿ ಕೇಂದ್ರ ಸೇರಿದಂತೆ ಹಲವಾರು ಒತ್ತಡ ಇರುವುದರಿಂದ ತೀವ್ರ ಒತ್ತಡ ಎದುರಿಸಬೇಕಾಗಿದೆ ಎಂದು ರೈತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.  ಜಿಲ್ಲಾ ಆಡಳಿತ ತಕ್ಷಣ ಈ ಬಗ್ಗೆ ಕ್ರಮ ಕೆಗೊಳ್ಳದಿದ್ದರೆ ರೈತರು ಬೀದಿಗಿಳಿದು ಹೋರಾಡುವ ಬಗ್ಗೆ ಚರ್ಚಿಸುತ್ತಿದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.