ಡಿಸಿ ವರ್ಗಾವಣೆಗೆ ದಸಂಸ ವಿರೋಧ
ಶಿವಮೊಗ್ಗ: ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಅವರನ್ನು ವರ್ಗಾಯಿಸಬಾರದೆಂಬ ಕೂಗು ಇನ್ನೂ ನಿಂತಿಲ್ಲ.
ಈಗಾಗಲೇ ನಗರದ ಸಂಘ, ಸಂಸ್ಥೆಗಳಿಂದ ವರ್ಗಾವಣೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಬುಧವಾರ ಸಹ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಡಿಸಿಎಂ ವಿರುದ್ಧ ಘೋಷಣೆ: ನಗರದ ಈದ್ಗಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಸಂಸ ಕಾರ್ಯಕರ್ತರು, ಧರಣಿ ನಡೆಸಿ ಬೇಕೇ ಬೇಕು ಡಿಸಿ ಬೇಕು, ಡಿಸಿ ವರ್ಗಾವಣೆಯನ್ನು ರದ್ದು ಮಾಡಿ ಎಂದು ಘೋಷಣೆ ಕೂಗಿದರಲ್ಲದೇ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧವೂ ಘೋಷಣೆ ಕೂಗಿದರು.
ವರ್ಗಾವಣೆ ಕೈಬಿಡಿ: ಕೂಡಲೇ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ವರ್ಗಾವಣೆಯನ್ನು ರದ್ದುಪಡಿಸಬೇಕು. ಭದ್ರಾವತಿಯ ಡಿವೈಎಸ್ಪಿ ಶ್ರೀಧರ್ ಹಾಗೂ ನಗರ ಸಿಪಿಐ ತಿರುಮಲೇಶ್ ಅವರ ವರ್ಗಾವಣೆಗೆ ಪ್ರಯತ್ನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಸಂಘಟನೆಯ ರಾಜ್ಯ ಸಂಚಾಲಕ ಭದ್ರಾವತಿ ಸತ್ಯ, ಜಿಲ್ಲಾ ಸಂಚಾಲಕ ಗುರುರಾಜ್, ಪ್ರಕಾಶ್ ಲಿಗಾಡಿ, ನರಸಿಂಹ, ನಗರ ಸಂಚಾಲಕ ಮಹಾಲಿಂಗಪ್ಪ, ಬಂಗಾರಪ್ಪ ನಿಟ್ಟಕ್ಕಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

