ಶಿವಮೊಗ್ಗ

1ಲಕ್ಷ ಮೌಲ್ಯದ ಬೀಟೆ ಮರ ವಶ

Published On :

ಸಾಗರ: ತಾಲೂಕಿನ ಆನಂದಪುರ ಸಮೀಪದ ಗಿಳಾಲಗುಂಡಿ ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ರು.  1 ಲಕ್ಷ ಮೌಲ್ಯದ ಬೀಟೆ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಹಿತ ಹಿಡಿದು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗಿಳಾಲಗುಂಡಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಓಮಿನಿ ವಾಹನವನ್ನು ತಡೆದು ಅಕ್ರಮವಾಗಿ ಸಾಗಿಸುತ್ತಿದ್ದ 2 ಬೀಟೆ ಮಹರಾಜ ಕಾಟ್ ಹಾಗೂ 50 ಸೈಜ್ ಬೀಟೆ ವಶಪಡಿಸಿಕೊಂಡಿದ್ದಾರೆ.
ಆರೋಪಿ ಕುಂಸಿಯ ದೇವರಹಳ್ಳಿ ಮಹೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಇನ್ನು ಮೂವರು ತಪ್ಪಿಸಿಕೊಂಡಿದ್ದಾರೆ.  ದಾಳಿಯಲ್ಲಿ ಚೋರಡಿ ವಲಯ ಅರಣ್ಯಾಧಿಕಾರಿ
ಕೆ. ರವಿ, ವನಪಾಲಕ ಶ್ರೀದೇವ್, ಮಂಜುನಾಥ್, ಗಣೇಶ್, ಅರಣ್ಯ ರಕ್ಷಕ ಅಶೋಕ್, ರಾಘವ, ಸುರೇಶ, ಪದಕಿ, ಅರಣ್ಯ ವೀಕ್ಷಕ ಚಂದ್ರಶೇಖರ್, ವಾಹನ ಚಾಲಕ ರಫೀಕ್ ಪಾಲ್ಗೊಂಡಿದ್ದರು.
ಜೂಜು; 8 ಮಂದಿ ಬಂಧನ
ಭದ್ರಾವತಿ: ತಾಲೂಕು ಕಲ್ಲಹಳ್ಳಿಯಲ್ಲಿ ಚಂದ್ರೇಗೌಡ ಸೇರಿದಂತೆ 8 ಮಂದಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿಮಾಡಿ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ರು.  10,184 ಹಾಗೂ ಆಟಕ್ಕೆ ಬಳಸಿದ್ದ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂದ್ದಾರೆ.
ಕಾಣೆಯಾಗಿದ್ದಾರೆ
ಶಿವಮೊಗ್ಗ: ಶಿವಮೊಗ್ಗದಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್(26) ಎಂಬವರು ಕಾಣೆಯಾಗಿದ್ದು, ನಿತ್ಯ ಮನೆಗೆ ಮದ್ಯಪಾನ ಮಾಡಿಕೊಂಡು ಬರುತ್ತಿದ್ದರು. ಇದನ್ನು ನಿಲ್ಲಿಸುವಂತೆ ಹೇಳಿದಕ್ಕಾಗಿ ಮನೆಯಿಂದ 16ರಂದು   ಬೆಳಿಗ್ಗೆ 5 ಗಂಟೆಗೆ ಹೊರಟವರು ಇನ್ನೂ ಮನೆಗೆ ಬಂದಿಲ್ಲ.
ಇವರು 26ವರ್ಷದವರಾಗಿದ್ದು, ಗೋಧಿಬಣ್ಣ, ಸಾಧಾರಣ ಮೈಕಟ್ಟು, 5.3ಅಡಿ ಎತ್ತರವಿದ್ದಾರೆ.  ಕನ್ನಡ ಮಾತನಾಡಬಲ್ಲವರಾಗಿದ್ದಾರೆ. ಮನೆಯಿಂದ ಹೊರಡುವಾಗ ಕ್ರೀಂ ಕಲರ್ ಶರ್ಟ್ ಮತ್ತು ಬೂದಿಬಣ್ಣದ ಪ್ಯಾಂಟ್ ಧರಿಸಿದ್ದು, ಕೈಯಲ್ಲಿ ಅಮ್ಮ ಎಂದು ಹಚ್ಚೆ ಇರುತ್ತದೆ.
ಮತ್ತೊಂದು ಪ್ರಕರಣದಲ್ಲಿ ಶೇಖರಪ್ಪ (52) ಇವರನ್ನು ಅನಾರೋಗ್ಯದ ಕಾರಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, 3ರಂದು ಕಾಣೆಯಾಗಿದ್ದಾರೆ.
ಇವರು ದುಂಡುಮುಖವನ್ನು ಹೊಂದಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವರು.
ಎಡಗೈಯಲ್ಲಿ ರತ್ನಮ್ಮ ಎಂದು ಹಚ್ಚೆ ಹಾಕಿರುತ್ತಾರೆ. ಬಿಳಿ ಪಂಚೆ ಮತ್ತು ಬಿಳಿ ಅಂಗಿ, ಕಲರ್ ಟವೆಲ್ ಹಾಕಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.