ಶಿವಮೊಗ್ಗ

'ದಂಡಾವತಿ ಯೋಜನೆ ಅಗತ್ಯವಿದೆ'

Published On :

ಸೊರಬ: ಅಂತರ್ಜಲದ ಹೆಚ್ಚಳ, ಪ್ರಗತಿದಾಯಕ ಕೃಷಿಗಾಗಿ ದಂಡಾವತಿಯಂತಹ ಅನೇಕ ನೀರಾವರಿ ಯೋಜನೆಗಳು ರಾಜ್ಯಕ್ಕೆ ಅಗತ್ಯವಿದೆ ಎಂದು ಮಾಜಿ ಮುಕ್ಯಮಂತ್ರಿ ಬಿ.ೆಸ್. ಯಡಿಯೂರಪ್ಪ ಹೇಳಿದರು.
  ತಾಲೂಕಿನ ಜಡೆ, ಶಕುನವಳ್ಳಿ ಗ್ರಾಮಗಳಲ್ಲಿ ಸೋಮವಾರ ಸಭೆ ನಡೆಸಿದ ಬಳಿಕ ಸಂಜೆ ಪಟ್ಟಣಕ್ಕೆ ಆಗಮಿಸಿದ ಅವರು, ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಈ ನಿಟ್ಟಿನಲ್ಲಿ ಮುಂದಿನ ನಮ್ಮ ಅಧಿಕಾರದವಧಿಯಲ್ಲಿ ಸಕ್ರಿಯ ಶ್ರಮ ವಹಿಸುವುದು ಖಚಿತ ಎಂದರು.
 ಹಿಂದೆ ಪಪಂನ್ನು ಕೊಳ್ಳೆ ಹೊಡೆದವರೆ ಮತ್ತೀಗ ಚಿನ್ನ, ಟೀವಿ, ಮಿಕ್ಸಿ ಕೊಡುಗೆಯ ಆಮಿಷ ತೋರುತ್ತಿದ್ದಾರೆ. ಅವರ ಕೊಡುಗೆಯೆಲ್ಲವೂ ನೀವು ಕಟ್ಟಿದ ತೆರೆಗೆಯಿಂದ ಬಂದದ್ದು ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.
 ಮಾಜಿ ಶಾಸಕ ಹಾಲಪ್ಪ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣ ತಂದಾಗ್ಯೂ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಪಪಂ ಆಡಳಿತ ಸೋತಿದೆ. ಇಂತಹ ನಿಷ್ಕ್ರಿಯತೆಯುಳ್ಳ, ಸ್ವಾರ್ಥ ಲಾಲಸೆಯ ಪ್ರತಿನಿಧಿಗಳನ್ನು ಮತ್ತೆ ಚುನಾಯಿಸದೆ, ಅಭಿವೃದ್ಧಿ ಪರವಾಗಿರುವ ಜನಪ್ರತಿನಿಧಿಗಳನ್ನು ಆರಿಸಿ, ಪಟ್ಟಣ ಅಭಿವೃದ್ಧಿಗೆ ಸಹಕರಿಸಿ ಎಂದರು.
ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ಮಾತನಾಡಿದರು. ಮಾಜಿ ಶಾಸಕ ಜಿ. ಬಸವಣ್ಯಪ್ಪ ಮಾತನಾಡಿದರು. ತಾಲೂಕು ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್, ವಿವಿಧ ಮೋರ್ಚಾ ಅಧ್ಯಕ್ಷ ಪದಾಧಿಕಾರಿಗಳು, ಪಪಂ ನೂತನ ಅಭ್ಯರ್ಥಿಗಳು, ಪಕ್ಷದ ಕಾರ್ಯರ್ತರು ಇದ್ದರು. ಇದೇ ವೇಳೆ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.