ಶಿವಮೊಗ್ಗ

ನಕಲಿ ಬಂಗಾರ: ಇಬ್ಬರ ಬಂಧನ

Published On :




ಸಾಗರ: ತಮಗೆ ನಿಧಿ ಸಿಕ್ಕಿದೆ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ರಾಜ್ಯದ ಹೆಸರಾಂತ ದೇವಸ್ಥಾನಕ್ಕೆ ಬರುತ್ತಿದ್ದ ಶ್ರೀಮಂತ ಭಕ್ತರನ್ನು ಪುಸಲಾಯಿಸಿ ಅವರಿಂದ ಹಣ ಪಡೆದು ನಕಲಿ ಬಂಗಾರ ನೀಡಿ ಪರಾರಿಯಾಗುತ್ತಿದ್ದ ತಂಡದ ಇಬ್ಬರನ್ನು ಮಂಗಳವಾರ ತಾಲೂಕಿನ ಆನಂದಪುರಂನ ದಾಸಕೊಪ್ಪ ಬಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ವೇದಮೂರ್ತಿ ಎಂಬುವವರಿಗೆ ತಮ್ಮ ಬಳಿ 250 ಗ್ರಾಂ ಚಿನ್ನವಿದ್ದು, ಅದು ತಮಗೆ ನೆಲ ಅಗೆಯುವಾಗ ಸಿಕ್ಕಿದ್ದು ಎಂದು ಹೇಳಿದ್ದಾರೆ. ವೇದಮೂರ್ತಿಯನ್ನು ನಂಬಿಸಲು ಒಂದು ಚೂರು ನಿಜವಾದ ಬಂಗಾರವನ್ನು ಆರೋಪಿಗಳು ನೀಡಿದ್ದಾರೆ. ಜ.27ರಂದು ವೇದಮೂರ್ತಿ # 1 ಲಕ್ಷ ನಗದಿನೊಂದಿಗೆ ನಿಗದಿಪಡಿಸಿದ ಸ್ಥಳಕ್ಕೆ ಬಂದಿದ್ದಾನೆ.
ನಕಲಿ ಚಿನ್ನ: 5 ಜನರಿದ್ದ ತಂಡ ವೇದಮೂರ್ತಿಗೆ 250 ಗ್ರಾಂ ಬಂಗಾರವಿದ್ದ ಪೊಟ್ಟಣವನ್ನು ನೀಡಿದೆ. ವೇದಮೂರ್ತಿ ಪೊಟ್ಟಣ ಬಿಚ್ಚಿ ಪರಿಶೀಲನೆ ಮಾಡಿದಾಗ ಅದು ನಕಲಿ ಬಂಗಾರವೆನ್ನುವುದು ತಿಳಿದಿದೆ.
ವೇದಮೂರ್ತಿ ತಕ್ಷಣ ಅವರನ್ನು ಹಿಡಿಯುವ ಪ್ರಯತ್ನ ನಡೆಸಿದ್ದನಾದರೂ ಫಲಕಾರಿಯಾಗಿರಲಿಲ್ಲ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಂಗಳವಾರ ಆನಂದಪುರಂನ ದಾಸಕೊಪ್ಪ ಬಳಿ ಬನ್ನೂರು ವಾಸಿ ನಾಗಪ್ಪ ಹಾಗೂ ಮಾದಪುರದ ಶಿವಪ್ಪ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 1 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ನಾಗಪ್ಪ, ಶಿವಪ್ಪ ನಕಲಿ ಬಂಗಾರ ನೀಡಿ ವೇದಮೂರ್ತಿ ಅವರಿಂದ ಪಡೆದ ಹಣವನ್ನು ಹಂಚಿಕೆ ಮಾಡಿಕೊಳ್ಳಲು ಉಳಿದ ಮೂವರು ಶೃಂಗೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಜಿ.ಸಿ. ರಾಜು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ದೇವರಾಜ್, ಸಿಬ್ಬಂದಿಕಿರಣಕುಮಾರ್, ಪ್ರಕಾಶ್, ಹಜರತಾಲಿ, ಜಯೇಂದ್ರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.