ಸುದ್ದಿ ಸಂಕ್ಷೇಪ
ನಾಳೆ ಶಾಂತಿ ಸಭೆ
ಶಿವಮೊಗ್ಗ: ಜು. 8ರಿಂದ ಜಿಲ್ಲೆಯಾದ್ಯಂತ ಮುಸ್ಲಿಮರು ರಂಜಾನ್ ಉಪವಾಸ ಆರಂಭಿಸಿ, ಆಗಸ್ಟ್ 8 ಅಥವಾ 9ರಂದು ರಂಜಾನ್ ಕೊನೆ ದಿನ ಆಚರಿಸಲಿರುವರು. ಈ ಸಂದರ್ಭದಲ್ಲಿ ಕೋಮುಸೌಹಾರ್ದತೆ, ಸಾಮರಸ್ಯ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜು.8ರಂದು ಸಂಜೆ 5.30ಕ್ಕೆ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆ ಏರ್ಪಡಿಸಲಾಗಿದೆ. ಸಭೆಗೆ ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರು, ಶಾಂತಿ ಸಮಿತಿಯ ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯರು ಹಾಜರಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಗಂಧದ ಸಸಿ ಮಾರಾಟ
ಶಿವಮೊಗ್ಗ: ಶಿವಮೊಗ್ಗ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಗೊಳಪಡುವ ಸಂಶೋಧನಾ ವಲಯದಲ್ಲಿ 69 ಮತ್ತು 812 ಬ್ಯಾಗಿನಲ್ಲಿ ಬೆಳೆಸಲಾದ ಅಂದಾಜು ಮುಕ್ಕಾಲು ಅಡಿ ಎತ್ತರವಿರುವ ಶ್ರೀಗಂಧದ 50 ಸಾವಿರ ಸಸಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಆಸಕ್ತರು ವಲಯ ಅರಣ್ಯಾಧಿಕಾರಿಗಳು, ಸಂಶೋಧನಾ ವಲಯ, ಶಿವಮೊಗ್ಗ, ಮೊ. 9945517026ನ್ನು ಸಂಪರ್ಕಿಸಬಹುದಾಗಿದೆ.
ಆರೋಗ್ಯದ ಅಂಗಳ ಫೋನ್ ಇನ್
ಶಿವಮೊಗ್ಗ: ಆಕಾಶವಾಣಿ ಭದ್ರಾವತಿ ಕೇಂದ್ರವು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಯೋಜಕತ್ವದಲ್ಲಿ ಎನ್.ಆರ್.ಎಚ್.ಎಂ. ಮತ್ತಿತರ ಯೋಜನೆಗಳಡಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆ ಕುರಿತಾದ ತಲಾ 30 ನಿಮಿಷಗಳ ಇಪ್ಪತ್ತು ಕಂತುಗಳ ಸರಣಿ ಕಾರ್ಯಕ್ರಮ ರೂಪಿಸಿ ಜು.8ರಿಂದ ಪ್ರತಿ ಸೋಮವಾರ ಬೆಳಿಗ್ಗೆ 8.35ರಿಂದ ಪ್ರಸಾರ ಮಾಡುತ್ತದೆ. ಪ್ರತಿ ನಾಲ್ಕು ಕಂತುಗಳಿಗೆ ಒಂದರಂತೆ 60 ನಿಮಿಷಗಳ ಒಂದೊಂದು ನೇರ ಪೋನ್ ಇನ್ ಕಾರ್ಯಕ್ರಮಗಳನ್ನೂ ಸರಣಿ ಒಳಗೊಂಡಿದೆ. ಫೋನ್ ಮಾಡಬೇಕಾದ ಸಂಖ್ಯೆಗಳು 08282- 270282 ಮತ್ತು 274900.
ರಂಗನಾಥ್ ನೇಮಕ
ಭದ್ರಾವತಿ: ತಾಲೂಕಿನ ಅರಹತೊಳಲು ಗ್ರಾಮದ ಎ.ಜಿ. ರಂಗನಾಥ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕ ಕೆ.ಟಿ. ಗಿರಿಯಪ್ಪ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಪಕ್ಷದ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ರಂಗನಾಥ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಗಿರಿಯಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

