ಶಿವಮೊಗ್ಗ

ಮೂಲ ಸೌಲಭ್ಯ ಒದಗಿಸಿ

Published On :

ಸೊರಬ: ಅಭಿವೃದ್ಧಿ ಹೆಸರಲ್ಲಿ ರಸ್ತೆ, ಕಟ್ಟಡವಾದರೆ ಮುಗಿಯಲಿಲ್ಲ ಸಾಮಾನ್ಯ ಜನತೆಗೆ ಅಗತ್ಯವಿರುವ ಮೂಲ ಸೌಲಭ್ಯದ ಕುರಿತು ಚಿಂತನೆಯೂ ಇರಬೇಕು ಎಂದು ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.  ಶಾಲಾ, ಕಾಲೇಜು ಆರಂಭಗೊಂಡಿದೆ. ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಗ್ರಾಮಾಂತರ ಪ್ರದೇಶಗಳಿಂದ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿದಿನ ತಾಲೂಕು ಕೇಂದ್ರ ಸೊರಬಕ್ಕೆ ಬರುತ್ತಾರೆ. ತಾಲೂಕು ಕೇಂದ್ರಕ್ಕೆ ಹತ್ತಿರವಿರುವ ಹಳ್ಳಿ ಮಕ್ಕಳು ಸೈಕಲ್ ಅಥವಾ ನಡೆದು ಬರುವ ಅಭ್ಯಾಸವಿಟ್ಟುಕೊಂಡು ವ್ಯಾಸಂಗ ಪಡೆಯುತ್ತಿದ್ದರೆ, ಕೇಂದ್ರದಿಂದ 6-8 ಕಿಮೀ ದೂರದ ಹಳ್ಳಿ ಮಕ್ಕಳಿಗೆ ಸಮರ್ಪಕ ವ್ಯಾಸಂಗಕ್ಕೆ ಬೇರೆಬೇರೆ ಕಾರಣಗಳಿಂದ ಅಡಚಣೆಯಾಗಿದೆ ಎಂದವರು ಹೇಳಿದರು.
ವಾಹನದ ಕೊರತೆ: ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವ್ಯಾಸಂಗಕ್ಕೆ ತೆರಳಲು ವಾಹನ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಇರುವ ಬಸ್ ನೂರಿನ್ನೂರು ಮಕ್ಕಳನ್ನು ತುಂಬಿಕೊಂಡು ಬರುವುದರಿಂದ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ. ತಾಲೂಕಿನ ಇಂಡುವಳ್ಳಿ-ಶಿಗ್ಗಾ, ಕೆಳದಿ ಮಾಸೂರು ಮಾರ್ಗ, ಚಂದ್ರಗುತ್ತಿ, ಹರೀಶಿ, ಕಡಸೂರು, ಸಿದ್ಧಾಪುರ, ೊಹಸಬಾಳೆ, ಮುಟಗುಪ್ಪೆ, ಉದ್ರಿ- ತೊಗರ್ಸಿ, ಗುಡವಿ ಮತ್ತು ಜಡೆ ಭಾಗಗಳಿಂದ ಇಲ್ಲಿಗೆ ಶಾಲಾ ಸಮಯಕ್ಕೆ ತೆರಳಲು ಕೆಎಸ್‌ಆರ್ಟಿಸಿ ಬಸ್‌ಗಳು ಅಗತ್ಯವಿದೆ ಎಂದಿದ್ದಾರೆ. ವೇದಿಕೆಯ ವೀರೇಂದ್ರಗೌಡ, ಕಾಳಪ್ಪ, ವೀರಭದ್ರಗೌಡ, ಕುಬೇರಪ್ಪ, ತೇಕರಪ್ಪ, ಧರ್ಮಪ್ಪ, ರಂಗನಾಥ, ತೇಜಪ್ಪ, ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಪ್ರವೀಣ, ಅಭಿಷೇಕ, ಅನುಷ, ರೇಷ್ಮಾ, ಚಂದ್ರಪ್ಪ, ಶಮಂತ, ವಿನಯಕುಮಾರ್, ಪ್ರಕಾಶನಾಯ್ಕ್, ಶ್ರೀಪತಿ, ಶಿವಮೂರ್ತಿ, ಹರೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.