ಶಿವಮೊಗ್ಗ

21ಕ್ಕೆ ಗುರುವಂದನೆ

Published On :

ಶಿವಮೊಗ್ಗ: ಬಾಲಪ್ರತಿಭೆ ಎಸ್. ತುಷಾರ ಗೌರಿಯವರ 50ನೇ ಕೀರ್ತನಾ ಕಾರ್ಯಕ್ರಮ ಹಾಗೂ ಗುರುವಂದನೆ ಕಾರ್ಯಕ್ರಮ ಜು.21ರಂದು ಸಂಜೆ 5 ಗಂಟೆಗೆ ಶಿವಮೊಗ್ಗ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಆಯೋಜನೆಗೊಂಡಿದೆ.
ಮುಖ್ಯ ಅತಿಥಿಗಳಾಗಿ ನಾವಿಕ ದಿನಪತ್ರಿಕೆ ಸಂಪಾದಕರಾದ ಲತಾ ರಂಗಸ್ವಾಮಿ, ಮಾಧವನೆಲೆ ಸಂಯೋಜಕ ಎ. ಮೈಲಾರಿ, ಕೀರ್ತನ ಕಲಾವಿದ ಜಿ.ಆರ್. ಕೇಶಮೂರ್ತಿ ಉಪಸ್ಥಿತರಿರುವರು.
ಎಂಕಾಂ, ಎಂಎ ಪ್ರವೇಶಕ್ಕೆ ಅರ್ಜಿ
ಸಾಗರ: ಪಟ್ಟಣದ ಲಾಲ್‌ಬಹಾದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾವಿದ್ಯಾಲಯದ ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಎಂ.ಕಾಂ ಮತ್ತು ಎಂ.ಎ
(ಅರ್ಥಶಾಸ್ತ್ರ) ವಿಷಯಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 ಜು.17 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ 08183-229137, 9449652155 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2013ನೇ ಸಾಲಿನ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜು. 17ರಿಂದ 24ರವರೆಗೆ ವಿವಿಧ ವೃತ್ತಿಯಲ್ಲಿ ಖಾಲಿಯಿರುವ ಸ್ಥಾನಗಳಿಗೆ ಅರ್ಜಿಯನ್ನು ಭರ್ತಿ ಮಾಡಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08183-221002 ಸಂಪರ್ಕಿಸಬಹುದು.
28ಕ್ಕೆ ಕಾರ್ಯಾಗಾರ
ಸಾಗರ: ದಶಮಾನೋತ್ಸವ ಸಂಭ್ರಮದಲ್ಲಿರುವ ಕನ್ನಡ ವಿಕಿಪೀಡಿಯ ಸಂಸ್ಥೆ ತನ್ನ ಅಂತರ್ಜಾಲ ವಿಶ್ವಕೋಶಕ್ಕೆ ಸೇವಾಮನೋಭಾವನೆಯಿಂದ ಮಾಹಿತಿಗಳನ್ನು ಅಪ್‌ಲೋಡ್ ಮಾಡಬಲ್ಲಂತಹ ಹಿರಿಕಿರಿಯ ಲೇಖಕರನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಸಾಗರದ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಂಸ್ಥೆ ಜು.28ರಂದು ಕಾರ್ಯಾಗಾರ ಆಯೋಜಿಸಿದೆ.
ಗಣಕದಲ್ಲಿ ಕನ್ನಡ ಬಳಕೆಯ ಪ್ರಾಥಮಿಕ ಜ್ಞಾನ ಉಳ್ಳಂತಹ ಆಸಕ್ತ ಲೇಖಕರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ವಿಕಿಮೀಡಿಯ ತನ್ನ ಅಂತರ್ಜಾಲದಲ್ಲಿ ಬರೆಯಲ್ಪಡುವ ಲೇಖನಗಳಿಗೆ ಕೊಡುಗೆ ಎಂದು ನಮೂದಿಸಿದೆ. ಹಾಗಾಗಿ ಲೇಖನಗಳಿಗೆ ಸಂಭಾವನೆ ಇರುವುದಿಲ್ಲ. ಭಾಗವಹಿಸುವ ಲೇಖಕರು ಜು.21ರೊಳಗೆ ತಮ್ಮ ಸ್ವವಿವರ ಹಾಗೂ ಸ್ಥಿರ-ಜಂಗಮ ದೂರವಾಣಿ ಸಂಪರ್ಕ ಸಂಖ್ಯೆಯನ್ನು ಕನ್ನಡದಲ್ಲಿ ಬರೆದು ಈ ವಿಳಾಸಕ್ಕೆ ಮಿಂಚಂಚೆ ಕಳುಹಿಸಬೇಕಾಗಿ ಕನ್ನಡ ಟೈಮ್ಸ್ ಸಂಸ್ಥೆಯ ಸ್ಥಾಪಕ ಸದಸ್ಯ ಚಿನ್ಮಯ ಎಂ.ರಾವ್ ತಿಳಿಸಿದ್ದಾರೆ.

ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಮಣಿಪಾಲದ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರುದ್ಯೋಗಿ ಸ್ವ ಉದ್ಯೋಗಾಕಾಂಕ್ಷಿಗಳಿಗಾಗಿ ಆಗಸ್ಟ್ 9ರಿಂದ ಮಣಿಪಾಲದಲ್ಲಿ ಟಿವಿ, ಡಿವಿಡಿ, ಎಲೆಕ್ಟ್ರಾನಿಕ್ಸ್ ಸರ್ವಿಸಿಂಗ್ ಕುರಿತು ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ನಬಾರ್ಡ್ ಪ್ರಾಯೋಜಕತ್ವದಲ್ಲಿ ಈ ತರಬೇತಿ ನಡೆಯಲಿದ್ದು, 30 ದಿನಗಳ ತರಬೇತಿ ಇರುತ್ತದೆ. ಈ ವೇಳೆ ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಕೌಶಲ್ಯದ ಜತೆಗೆ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸಕ್ಕೆ ಸಂಬಂಧಿಸಿದ ಮಾಹಿತಿ ನೀಡಲಾಗುವುದು. ಆದರಿಂದ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ 18 ರಿಂದ 45 ವರ್ಷ ವಯೋವಾನದ ಹಾಗೂ ಈ ಕ್ಷೇತ್ರದಲ್ಲಿ ಪ್ರಾಥಮಿಕ ಜ್ಞಾನ ಅಥವಾ ಅನುಭವ ಹೊಂದಿರುವ ನಿರುದ್ಯೋಗಿ ಯುವಕ, ಯುವತಿಯರು ಈ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಹಾಗೂ ಪಡೆಯಲ್ಲಿಚ್ಚಿಸುವ ತರಬೇತಿಯ ಹೆಸರು ಮತ್ತಿತರ ಮಾಹಿತಿಯೊಂದಿಗೆ ಅರ್ಜಿಯನ್ನು ಖಾಲಿ ಹಾಳೆಯಲ್ಲಿ ಬರೆದು ಜುಲೈ 31ರೊಳಗೆ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಡಿಕೇಟ್‌ಬ್ಯಾಂಕ್ ಪ್ರಧಾನ ಕಚೇರಿ ಸಂಕೀರ್ಣ, ಮಣಿಪಾಲ-576104. ಇಲ್ಲಿಗೆ ಕಳುಹಿಸುವಂತೆ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ವಿವರಗಳಿಗಾಗಿ-0820-2570455.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.