ಶಿವಮೊಗ್ಗ

ಅಂತರಶಾಲಾ ಭಾಷಣ ಸ್ಪರ್ಧೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.15
ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ನಗರ ಮಟ್ಟದ ಅಂತರಶಾಲಾ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಸುಬ್ರಹ್ಮಣ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿದ್ಯಾ ಭವನದ ಪ್ರಾಂಶುಪಾಲೆ ಜಿ.ವಿ. ಇಂದೂ ವಹಿಸಿದ್ದರು.
ಸರ್ಧೆಯ ಆರನೇ ತರಗತಿ ವಿಭಾಗದಲ್ಲಿ ಆಕ್ಸ್‌ರಡ್ ಶಾಲೆಯ ಕೃತಿಕಾ ಪ್ರಥಮ, ಪೋದಾರ ಶಾಲೆಯ ಶ್ರೇಯಾ ದ್ವಿತೀಯ, ಭಾರತೀಯ ವಿದ್ಯಾಭವನದ ಶೆಣೈ ತೃತೀಯ ಸ್ಥಾನ ಪಡೆದರು.
ಏಳನೇ ತರಗತಿ ವಿಭಾಗದಲ್ಲಿ ಭಾರತೀಯ ವಿದ್ಯಾಭವನದ ಸಂಹಿತಾ ಗುರುದತ್ ಪ್ರಥಮ, ಆದಿಚುಂಚನಗಿರಿ ಶಾಲೆಯ ಸುಮೇಧ ಹೆಗ್ಡೆ  ದ್ವಿತೀಯ, ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಶ್ರೀಕೃಷ್ಣ ಪೈ ತೃತೀಯ ಸ್ಥಾನ ಪಡೆದರು. ಎಂಟನೇ ತರಗತಿ ವಿಭಾಗದಲ್ಲಿ ಆದಿಚುಂಚನಗಿರಿ ಶಾಲೆಯ ಹೇಮಸಾಗರ್ ಪ್ರಥಮ, ಮಹಾವೀರ ಶಾಲೆಯ ಶ್ರೀಕೃಪಾ ದ್ವಿತೀಯ ಹಾಗೂ ಆದಿಚುಂಚನಗಿರಿ ಶಾಲೆಯ ಕೆ.ಎಸ್. ಸ್ಮೃತಿ ತೃತೀಯ ಸ್ಥಾನ ಪಡೆದರು.
ಸ್ಪರ್ಧೆಯ ತೀರ್ಪುಗಾರರಾಗಿ ಕಸ್ತೂರ ಬಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಕೆ. ವೆಂಕಟೇಶ ಕಾಮತ್, ಸಹ್ಯಾದ್ರಿ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ದೀಕ್ಷಾ ಕಾಮತ್ ಕಾರ್ಯನಿರ್ವಹಿಸಿದ್ದರು. ನಗರದ ವಿವಿಧ ಶಾಲೆಗಳ ಹತ್ತಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.