ಶಿವಮೊಗ್ಗ

ಟ್ಯಾಟೂ ಲಂಬಾಣಿ ಜನಾಂಗದ ಕಲೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.16
ಇಂದು ಯುವಜನಾಂಗ ಮೈತುಂಬ ಟ್ಯಾಟೂ ಹಾಕಿಸಿಕೊಳ್ಳುವ ಪ್ರವೃತಿ ಬೆಳೆಸಿಕೊಂಡಿದೆ. ಈ ಕಲೆ ಮೂಲತಃ ಲಂಬಾಣಿ ಜನಾಂಗದ ಕಲೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಟಿ.ಎಚ್. ನರೇಂದ್ರ ನಾಯ್ಕ ಅವರು ಬರೆದ ಲಂಬಾಣಿ ಸಮುದಾಯದ ಸಾಮಾಜಿಕ ಚಿತ್ರಣ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಜನಾಂಗ ಮೊದಲು ಇದನ್ನು ಅಚ್ಚೆ ಎಂದು ಕರೆಯುತ್ತಿದ್ದರು. ಇಂದು ಟ್ಯಾಟೂ ಆಗಿದೆ ಎಂದರು.
ಜನಾಂಗ ಅಭಿವೃದ್ಧಿ ಹೊಂದಿದೆ: ಲಂಬಾಣಿ ಜನಾಂಗ ವಿಶೇಷವಾದ ಕಲೆ, ಸಂಸ್ಕೃತಿಯನ್ನು ಒಂದಿದೆ. ಅದರಲ್ಲಿಯೂ ಜನಾಂಗದ ವಿಶೇಷವಾದ ವಸ್ತ್ರಾಲಂಕಾರ ನೋಡುಗರನ್ನು ಆಕರ್ಷಿಸುತ್ತದೆ. ಇಲ್ಲಿ ತಾಂಡದ ನಾಯಕನ ಮಾತುಗಳೇ ನಡೆಯುವುದು. ಆತ ಹೇಳಿದ ಮಾತಿಗೆ ಎಲ್ಲರೂ ಒಪ್ಪಬೇಕು. ಒಂದು ರೀತಿಯಲ್ಲಿ ಏಕಾಧಿಪತ್ಯ ಇದ್ದಂತೆ ಎಂದ ಅವರು, ಲಂಬಾಣಿ ಜನಾಂಗ ಇಂದು ಹಿಂದುಳಿದಿಲ್ಲ. ಸಾಕಷ್ಟು ಜನ ವಿದ್ಯಾವಂತರಾಗಿ ಒಳ್ಳೆಯ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಸಣ್ಣರಾಮ, ಪ್ರಸ್ತುತ ಕಡೆಗಣಿಸಲ್ಪಟ್ಟ ಜನಾಂಗಳ ಬಗ್ಗೆ ಅಧ್ಯಯನಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಲಂಬಾಣಿ ಜನಾಂಗದ ಅಧ್ಯಯನ ನಡೆದಿರುವುದು ಶ್ಲಾಘನೀಯ. ಹಿಂದುಳಿದ ಜನಾಂಗಗಳ ಅಧ್ಯಯನ ಮಾಡುವುದೇ ಒಂದು ವಿಶೇಷ. ಅಲ್ಲದೇ, ಆ ಜನಾಂಗದ ಕಲೆ, ಸಂಸ್ಕೃತಿ, ಸಾಂಸ್ಕೃತಿಕ ಅಧ್ಯಯನ ಮಾಡುವುದು ಸವಾಲಿನ ಕೆಲಸ ಎಂದವರು ಈ ಸಂದರ್ಭದಲ್‌ಲ್ಲ ಹೇಳಿದರು.
 ಸಂಶೋಧನೆ ಮಾಡಿದಲ್ಲದೇ ಅದನ್ನು ವಿಶ್ಲೇಷಣೆ ಮಾಡುವುದು ಮತ್ತಷ್ಟು ತ್ರಾಸದಾಯಕವಾದದ್ದು. ಇಲ್ಲಿ ಜನಾಂಗದ ಎಲ್ಲಾ ಕಾಲವನ್ನು ದಾಖಲು ಮಾಡಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ ಕೃತಿ ವಿಶೇಷವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಟಿ.ಎಚ್. ನರೇಂದ್ರ ನಾಯ್ಕ ಅವರು ಬರೆದ ಲಂಬಾಣಿ ಸಮುದಾಯದ ಸಾಮಾಜಿಕ ಚಿತ್ರಣ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.  
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಪ್ರೊ. ರಾಮೇಗೌಡ, ಪರೀಕ್ಷಾಂಗ ವಿಭಾಗದ ಕುಲಸಚಿವ ಭೋಜ್ಯನಾಯ್ಕ್, ಹಣಕಾಸು ಅಧಿಕಾರಿ ಪ್ರೊ. ಹೀರೆಮಣಿ ನಾಯ್ಕ್, ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.