ಶಿವಮೊಗ್ಗ

ಮಳೆ ಅಬ್ಬರ: ದೋಣಿ ನಾಪತ್ತೆ

Published On :

ಕ.ಪ್ರ.ವಾರ್ತೆ , ತೀರ್ಥಹಳ್ಳ ,  ಜು.20
ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಇದೇ ಹೊತ್ತಿನಲ್ಲಿ ಚೆಂಗಾರು ದೋಣಿಕಂಡಿಯಲ್ಲಿ ದೋಣಿಯೊಂದು ಮಾಲತಿ ನದಿಯಲ್ಲಿ ಕೊಚ್ಚಿಹೋಗಿದೆ.
ದೋಣಿಯಲ್ಲಿ ಎಷ್ಟು ಜನ ಪ್ರಯಾಣಿಕರಿದ್ದರೆಂದು ತಿಳಿದುಬಂದಿಲ್ಲ. ಅದೇ ರೀತಿ ಯಾರೆಲ್ಲಾ ಇದ್ದರೆಂಬ ಬಗ್ಗೆಯೂ ಮಾಹಿತಿ ಇಲ್ಲ. ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾತ್ರಿ 10 ಗಂಟೆ ವರೆಗೆ ಹುಡುಕಾಟ ನಡೆದೇ ಇತ್ತು.
ಪ್ರಯತ್ನ ವಿಫಲ: ಮಧ್ಯಾಹ್ನ ವೇಳೆಗೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ದೋಣಿ ಕೊಚ್ಚಿಹೋದ ವಿಷಯ ತಲುಪಿದ್ದು, ನಾಪತ್ತೆಯಾದ ದೋಣಿಯನ್ನು ಹುಡುಕುವ ಪ್ರಯತ್ನದಲ್ಲಿ ಕೂಡಲೇ ಕಾರ್ಯಪ್ರವೃತ್ತರಾದರು.
ಆದರೆ, ರಾತ್ರಿ ವರೆಗೆ ಹುಡುಕಿದರು ದೋಣಿ ಪತ್ತೆಯಾಗಿಲ್ಲ. ನದಿ ಹಾದುಹೋಗುವ ಮಾರ್ಗದ ಹಳ್ಳಿಗಳಲ್ಲಿ, ಸೇತುವ ಇರುವ ಕಡೆ ಪರಿಶೀಲನೆ ನಡೆಸಲಾಯಿತದರೂ ಪ್ರಯತ್ನ ಫಲಪ್ರದವಾಗಿಲ್ಲ. ದೋಣಿಯನ್ನು ಗ್ರಾಮಸ್ಥರು ಚಲಾಯಿಸಿಕೊಂಡು ಹೋಗಿದ್ದಾಗಿ ತಿಳಿದುಬಂದಿದೆ. ದೋಣಿಯಲ್ಲಿ ಯಾರಿದ್ದರೆಂದು ಗೊತ್ತಾಗಿಲ್ಲ.
ಸಂಜೆ ತಹಸೀಲ್ದಾರ್, ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್, ಆಗುಂಬೆ ಠಾಣೆಯ ರೂಪೇಶ್ ಕುಮಾರ್ ಮತ್ತು ತಂಡ ಸಾಕಷ್ಟು ಮಾಲತಿ ನದಿಯ ದಂಡೆಗಳಲ್ಲಿ ದೋಣಿಗಾಗಿ ಹುಡುಕಾಡಿದ್ದಾರೆ.
ಮುಂದುವರಿದ ಹುಡುಕಾಟ: ನದಿ ದಡದಲ್ಲಿ 2 ತಾಸು ನಡೆದು ಹೋದೆವು, ಎಲ್ಲೂ ದೋಣಿ ಪತ್ತೆಯಾಗಿಲ್ಲ. ಇನ್ನೂ ಸ್ಥಳದಲ್ಲೇ ಇರುವುದಾಗಿ ತಹಸೀಲ್ದಾರ್ ಗಣೇಶ್ ಮೂರ್ತಿ ಕನ್ನಡಪ್ರಭಕ್ಕೆ ರಾತ್ರಿ 10 ಗಂಟೆ ವೇಳೆ ತಿಳಿಸಿದರು. ಸಂಜೆ 4ಗಂಟೆ ನಂತರ ಅಗ್ನಿಶಾಮಕ ದಳ ತಂಡ ಸಹ ಹುಡುಕಾಟ ಕಾರ್ಯದಲ್ಲಿ ತೊಡಗಿಕೊಂಡಿದೆ.
ಮಾಲತಿ ನದಿ ಆಗುಂಬೆಯ ಘಾಟಿಯಲ್ಲಿ ಹುಟ್ಟಿ, ಭೀಮನಕಟ್ಟೆಯಲ್ಲಿ ತುಂಗೆಯನ್ನು ಸೇರಿಕೊಳ್ಳಲಿದೆ. ಸುಮಾರು 14ರಿಂದ 16 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ನದಿ ಹರಿಯಲಿದೆ. ಬಿದರಗೋಡು, ಕಮ್ಮರಡಿ ಮಾರ್ಗವಾಗಿ, ಮೇಗರವಳ್ಳಿ ಬಳಿ ಹಾದುಹೋಗಲಿದೆ. ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ನದಿಯ ಹರಿವಿನ ತೀವ್ರತೆ ಹೆಚ್ಚಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.