ರೈತರಿಂದ ಅರ್ಜಿ ಆಹ್ವಾನ
ಸಾಗರ: 2013-14ನೇ ಸಾಲಿಗೆ ಅಡಕೆ ಹಳದಿ ಎಲೆ ಬಾಧಿತ ತೋಟಗಳ ಪುನಶ್ಚೇತನ ಕಾರ್ಯಕ್ರಮದಡಿ ಅಡಿಕೆಗೆ ಬೇರುಹುಳುವಿನ ಬಾಧೆಗೆ ತುತ್ತಾದ ತೋಟಗಳ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕಿನ 38 ಹೆಕ್ಟೇರ್ ಪ್ರದೇಶದಲ್ಲಿ ಪುನಶ್ಚೇತನ ಕಾರ್ಯಕ್ರಮಕ್ಕೆ 2.87 ಲಕ್ಷ ಕ್ರಿಯಾಯೋಜನೆ ಅನುಮೋದನೆಯಾಗಿದೆ. ಪ್ರತಿ ಹೆಕ್ಟೇರಿಗೆ ಶೇ. 50ರಂತೆ ಗರಿಷ್ಟ 7500 ಸಹಾಯಧನ ನೀಡಲಾಗುವುದು. ಅಡಕೆ ಬೇರುಹುಳುವಿನ ಬಾಧೆಗೆ ತುತ್ತಾದ ಬೆಳೆಗಾರರು ಮಾತ್ರ ಅಜರ್ಗಳನ್ನು ತೋಟಗಾರಿಕೆ ಇಲಾಖೆ, ಸಾಗರ ಇವರಿಂದ ಪಡೆದು, ಭತರ್ ಮಾಡಿ ಭಾವಚಿತ್ರ, ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜೆರಾಕ್ಸ್ ಮತ್ತು 2012-13ನೇ ಸಾಲಿನ ಭಾಗಾಯ್ತು ಪಹಣಿ ಪತ್ರಿಕೆಯ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಜು. 29ರೊಳಗೆ ಸಲ್ಲಿಸಲು ಕೋರಲಾಗಿದೆ.
ಬೇರುಹುಳುವಿನ ಬಾಧೆಗೆ ತುತ್ತಾದ ಅಡಕೆ ತೋಟಗಳನ್ನು ತಾಂತ್ರಿಕ ತಂಡ ಪರಿಶೀಲಿಸಿದ ನಂತರ ಬೇರುಹುಳುವಿನ ಬಾಧೆಯ ತೀವ್ರತೆ, ಹಾನಿಗೊಳಗಾದ ವಿಸ್ತೀರ್ಣ, ಅನುದಾನದ ಲಭ್ಯತೆ ಹಾಗೂ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತಿಮ್ಮಪ್ಪ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
27 ರಂದು ಚಿಕ್ಕಜೋಗಿಹಳ್ಳಿ ಆಸ್ಪತ್ರೆ ಉದ್ಘಾಟನೆ
ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಗಳ ಸಂಯುಕ್ತಾಶ್ರಯದಲ್ಲಿ ಶಿಕಾರಿಪುರ ತಾಲೂಕು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಿರ್ಮಿಸಿರುವ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು 27ರಂದು ಬೆಳಿಗ್ಗೆ 11.30ಕ್ಕೆ ಚಿಕ್ಕಜೋಗಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉದ್ಘಾಟಿಸಲಾಗುವುದು.
ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಉಪಸ್ಥಿತಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟ್ಟಡವನ್ನು ಉದ್ಘಾಟಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ವಿಶೇಷ ಅತಿಥಿಗಳಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಪಂ ಅಧ್ಯಕ್ಷೆ ಗೀತಾ ಬಿ. ಮಲ್ಲಿಕಾರ್ಜುನ್, ಕ್ಯಾಪ್ಟನ್ ಗಣೇಶ್ ಕಾರ್ಣೀಕ್, ಹೇಮಾಪಾವನಿ ಶ್ರೀನಿವಾಸ್, ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ ಸೇರಿದಂತೆ ಹಲವರು ಪಾಲ್ಗೊಳ್ಳುವರು.
ಇಂದು ಭೀಷ್ಮ ಪ್ರತಿಜ್ಞೆ ಯಕ್ಷಗಾನ
ಸಾಗರ: ತಾಲೂಕಿನ ವರದಹಳ್ಳಿಯ ಶ್ರೀಧರಾಶ್ರಮದಲ್ಲಿ ಜು.21ರ ಭಾನುವಾರ ಸಂಜೆ 4ಗಂಟೆಗೆ ಶ್ರೀ ಮಹಮ್ಮಾಯಿ ಮಹಿಳಾ ಯಕ್ಷಗಾನ ಮಂಡಳಿಯ ಕಲಾವಿದರಿಂದ ಭೀಷ್ಮ ಪ್ರತಿಜ್ಞೆ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಕೆ.ಜಿ. ರಾಮರಾವ್, ಜಿ.ಎಸ್. ಮಂಜುನಾಥ್, ಶರತ್ಕುಮಾರ್, ಗಣೇಶ್ ಭಟ್ ಪಾಲ್ಗೊಳ್ಳಲಿದ್ದು, ಮುಮ್ಮೇಳದಲ್ಲಿ ಸರಸ್ವತಿ ನಾಗರಾಜ್, ಅಹಲ್ಯಾ, ಗೀತಾ, ಉಷಾ, ನಾಗರತ್ನ ಅಭಿನಯಿಸಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
30ರಂದು ಆಟೋ ಹರಾಜು
ಭದ್ರಾವತಿ: ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಮಾನತು ಪಡಿಸಿಕೊಂಡ ಕೆ.ಎಂ.05-ಎಎ-8730 ನೋಂದಣಿ ಸಂಖ್ಯೆಯ ಆಟೋರಿಕ್ಷಾ ಮಾಲೀಕರು ಪತ್ತೆಯಾಗದ ಕಾರಣ ಅದನ್ನು ಹರಾಜು ಮಾಡಿ ನ್ಯಾಯಾಲಕ್ಕೆ ಹಣವನ್ನು ಪಾವತಿಸಲು ನ್ಯಾಯಾಲಯದ ಆದೇಶವಾಗಿರುವುದರಿಂದ ಸದರಿ ವಾಹನವನ್ನು ಜು.30 ರಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಹರಾಜು ಮಾಡಲು ತೀರ್ಮಾನಿಸಲಾಗಿದೆ ಎಂದು ಠಾಣೆಯ ಸಬ್ಇನ್ಸ್ಸ್ಪೆಕ್ಟರ್ ತಿಳಿಸಿದ್ದಾರೆ.
ಸಾರ್ವಜನಿಕರು ನ್ಯೂಟೌನ್ ಠಾಣೆಗೆ ಹಾಜರಾಗಿ ಸದರಿ ವಾಹನದ ಬೆಲೆ ನಿಗದಿಪಡಿಸಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಸಬ್ಇನ್ಸ್ಸ್ಪೆಕ್ಟರ್ ಕೋರಿದ್ದಾರೆ.
ವಂಚನೆ: ತರೀಕೆರೆ ದಂಪತಿ ವಿರುದ್ಧ ದೂರು
ಶಿವಮೊಗ್ಗ: ನಗರದ ಆಭರಣ ಜ್ಯುವೆಲರಿ ಅಂಗಡಿಯಲ್ಲಿ ಮುಂಗಡ ಹಣ ನೀಡಿ ಮುತ್ತಿನ ಸರ ಖರೀದಿಸಿ, ಸಂಬಂಧಿಕರಿಗೆ ತೋರಿಸಿ ಬರುವುದಾಗಿ ಹೇಳಿ ಹೋದವರು ಉಳಿದ ಹಣ ನೀಡದೆ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ತರೀಕೆರೆಯ ಮಲ್ಲಿಕಾರ್ಜುನ ಮತ್ತು ಪಂಕಜ ದಂಪತಿಗಳು ಹಣ ನೀಡದೆ ವಂಚಿಸಿದವರು. ಇವರು 44 ಗ್ರಾಂ ತೂಕದ ಮುತ್ತಿನ ಸರ ತಯಾರಿಸಲು 24,421 ಸಾವಿರ ರುಪಾಯಿ ಮುಂಗಡ ಹಣ ನೀಡಿದ್ದರು. ಸರ ತಯಾರಾದ ನಂತರ ಜ್ಯುವೆಲರ್ಗೆ ಬಂದು ಸಂಬಂಧಿಕರಿಗೆ ತೊರಿಸಿಕೊಂಡು ಬರುತ್ತೇವೆ ಎಂದು ಹೇಳಿ ಸರ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬಾಕಿ ಹಣ 1,23,192 ಲಕ್ಷ ಪಾವತಿಸದೆ ವಂಚಿಸಿದ್ದಾರೆ ಎಂದು ಆಭರಣ ಜ್ಯುವೆಲರ್ನ ಕ್ಯಾಷಿಯರ್ ಗಣಪತಿ ಶೆಣೈ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

