ಶಿವಮೊಗ್ಗ

ಬಹುಮಾನಗಳ ಸುರಿಮಳೆ

Published On :

ಜೋಗ್‌ಫಾಲ್ಸ್: ಏಷ್ಯಾ ಖಂಡದ ಅತಿ ಕಡಿಮೆ ವೆಚ್ಚದ ವಿದ್ಯುದಾಗಾರ (ಕೇವಲ 22.46 ಪೈಸೆಗಳ ದರದಲ್ಲಿ) ಎಂಬ ಹೆಗ್ಗಳಿಕೆ ಹೊಂದಿದ ಶರಾವತಿ ವಿದ್ಯುದಾಗಾರಕ್ಕೆ ಅತ್ಯುತ್ತಮ ನಿರ್ವಹಣೆ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಈ ಬಾರಿ ನಿಗಮದ ಕೇಂದ್ರ ಕಚೇರಿಯಿಂದ 2012-13ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಪ್ರತಿ ವರ್ಷ ಉತ್ತಮ ನಿರ್ವಹಣೆ ಮತ್ತು ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡುವ ವಿದ್ಯುದಾಗಾರಗಳಿಗೆ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈ ಬಾರಿ ಶರಾವತಿ ಪ್ರಥಮ ಪ್ರಶಸ್ತಿ ನೀಡಿದೆ.
100 ಮೆಗಾವ್ಯಾಟ್‌ಗಿಂತಲೂ ಅಧಿಕವಿರುವ ವಿದ್ಯುದಾಗಾರಗಳ ಪೈಕಿಯ ಪ್ರಥಮ ಬಹುಮಾನ ಗೇರುಸೊಪ್ಪ ವಿದ್ಯುದಾಗಾರಕ್ಕೆ ಲಭಿಸಿದ್ದು, 100 ಮೆಗಾವ್ಯಾಟ್ ಒಳಗಿರುವ ಪ್ರಶಸ್ತಿಯ ಶ್ರೇಣಿಯ ಬಹುಮಾನವನ್ನು ಲಿಂಗನಮಕ್ಕಿ ವಿದ್ಯುದಾಗಾರ ತನ್ನದಾಗಿಸಿಕೊಂಡಿದೆ.
ನಿಷ್ಠಾವಂತ ಸೇವೆ: ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ನಿಗಮದ ಕೇಂದ್ರ ಕಚೇರಿಯಿಂದ ಪ್ರಶಸ್ತಿ ಲಭಿಸಿರುವುದು ಎಲ್ಲಾ ಕಾರ್ಮಿಕರ, ಉದ್ಯೋಗಿಗಳ, ಅಧಿಕಾರಿಗಳ ಪರಿಶ್ರಮದ ಫಲವಾಗಿದ್ದು, ಈ ಹೆಗ್ಗಳಿಕೆಗೆ ಪ್ರತಿಯೊಬ್ಬರ ನಿಷ್ಠಾವಂತ ಸೇವೆಯೇ ಕಾರಣ ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಅಭಿಯಂತರ ಸಿ. ಗಿರೀಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್. ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.