ಸುದ್ದಿ ಸಂಕ್ಷೇಪ
ಡಾ. ಹರೀಶ ಆಯ್ಕೆ
ಭದ್ರಾವತಿ: ಪಟ್ಟಣದ ಖ್ಯಾತ ಮನೋವೈದ್ಯ ಡಾ. ಹರೀಶ ದೇಲಂತಬೆಟ್ಟು ಅವರು 2013-14ನೇ ಸಾಲಿನ ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ನಿಯೋಜಿತ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಆ.3ರಂದು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಂಘದ ರಾಜ್ಯಮಟ್ಟದ ಸಮಾವೇಶದಲ್ಲಿ ಅಧಿಕಾರ ಸ್ವೀಕಾರ ಮಾಡಲಿರುವರು. ಅಲ್ಲದೆ 2014-15ರ ಸಾಲಿಗೆ ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿರುವರು.
ಇಂದಿನಿಂದ ಜನಸಂಪರ್ಕ ಸಭೆ
ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಜನಸಂಪರ್ಕ ಸಭೆ ನಡೆಯಲಿದೆ. ಸೋಮವಾರ ಜೆಪಿಎಸ್ ಕಾಲೋನಿಯಲ್ಲಿರುವ ಘಟಕ-1ರ ಕಚೇರಿಯಲ್ಲಿ ಸೋಮವಾರ, ಹಳೇನಗರದ ಘಟಕ-2ರ ಕಚೇರಿಯಲ್ಲಿ ಮಂಗಳವಾರ ಹಾಗೂ ಉಂಬ್ಳೇಬೈಲು ರಸ್ತೆಯಲ್ಲಿರುವ ಘಟಕ-3ರ ಕಚೇರಿಯಲ್ಲಿ ಬುಧವಾರ ನಡೆಸಲಾಗುವುದು. ಎಲ್ಲಾ ಸಭೆಗಳೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ನಡೆಯುವುವು ಎಂದು ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆ ತಿಳಿಸಿದೆ. ಗ್ರಾಹಕರು ಸಭೆಗೆ ಹಾಜರಾಗಲು ಹಾಗೂ ಸಲಹೆ, ಸೂಚನೆ ಅಥವಾ ದೂರುಗಳನ್ನು ಲಿಖಿತವಾಗಿ ಮಂಚಿತವಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.
ಮಳೆ ನಿಂತರೂ ನೆರೆ ನಿಂತಿಲ್ಲ
ತೀರ್ಥಹಳ್ಳಿ: ವರುಣನ ಆರ್ಭಟ ಕೊಂಚ ಕಡಿಮೆಯಾಗಿದ್ದರೂ ನೆರೆ ಹಾವಳಿಯಿಂದಾಗಿ ಗ್ರಾಮೀಣ ಜನತೆ ತತ್ತರಿಸುವಂತಾಗಿದೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ದಾಖಲಾದ ಮಳೆ ಪ್ರಮಾಣ, ಆಗುಂಬೆ 143 ಮೀ.ಮೀ ಹಾಗೂ ತೀರ್ಥಹಳ್ಳಿಯಲ್ಲಿ 43 ಮಿಮೀ ಆಗಿದ್ದು, ತುಂಗಾನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜನ ಜಾನುವಾರುಗಳ ಓಡಾಟಕ್ಕೆ ತೊಂದರೆಯಾಗಿದೆ. ಹಲವಾರು ಗ್ರಾಮಗಳಲ್ಲಿ ಗುಡ್ಡದ ಧರೆ ಜರಿಯುತ್ತಿದೆ. ಶನಿವಾರ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಈ ಪ್ರದೇಶಕ್ಕೆ ಭೇಟಿನೀಡಿ ಗ್ರಾಮಸ್ಥರ ಭವಣೆ ಕಂಡು ಸಾಂತ್ವನ ಹೇಳಿದರು. ಸೂಕ್ತ ವ್ವವಸ್ಥೆ ಮಾಡಿಕೊಡಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ತಹಸೀಲ್ದಾರ್ ಗಣೇಶಮೂರ್ತಿ ಹಾಗೂ ಇತರೆ ಕಂದಾಯ ಅಧಿಕಾರಿಗಳು, ತಾಪಂ ಅಧ್ಯಕ್ಷೆ ಜೀನಾ ವಿಕ್ಟರ್ ಹಾಜರಿದ್ದರು.
ಕಂಪ್ಯೂಟರ್ ಕೌಶಲ್ಯ ತರಬೇತಿ ಸಮಾರೋಪ
ಭದ್ರಾವತಿ: ಪಟ್ಟಣದ ವಿ.ಐ.ಎಸ್.ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿರುವ ಮುಂದುವರಿದ ತಾಂತ್ರಿಕ ಶಿಕ್ಷಣ ಕೇಂದ್ರ, ಕ ರ್ನಾಟಕ (ಸಿಸಿಟೆಕ್) ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮತ್ತು ಪ್ರಭಾವಶಾಲಿಯಾಗಿ ಪುನಶ್ಚೇತನಗೊಳಿಸಿದೆ ಎಂದು ಇಲ್ಲಿನ ಸ.ಪ್ರ.ದ.ಕಾಲೇಜಿನ ಅರ್ಥಶಾಸ್ತ್ರ ಪ್ರೊ. ಜಿ. ನಾರಾಯಣ ರಾವ್ ತಿಳಿಸಿದರು. ಅವರು ಪಟ್ಟಣದ ವಿ.ಐ.ಎಸ್.ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಏರ್ಪಡಿಸಿದ್ದ ಒಂದು ವಾರ ಅವಧಿಯ ಉಪನ್ಯಾಸಕರ ಲೈನಕ್ಸ್ ಆಪರೇಟಿಂಗ್ ಸಿಸ್ಟಂ ಮೂಲಕ ಮೂಲ ಕಂಪ್ಯೂಟರ್ ಕೌಶಲ್ಯ ವಿಷಯ ಕುರಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತ ಆನಂದರಾಮನ್ ತರಬೇತುದಾರ ಶಾಮ್ ಮಾತನಾಡಿದರು.
ಪಾಲಿಟೆಕ್ನಿಕ್ನ ಪ್ರಭಾರ ಪ್ರಾಂಶುಪಾಲ ಚಂದ್ರಶೇಖರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಶಿಬಿರಾರ್ಥಿಗಳ ಪರವಾಗಿ ಲಕ್ಷ್ಮಿಕಾಂತ್, ಅನಿತ, ಯೋಗೀಶ್, ಪ್ರವೀಣ್, ಪುಷ್ಪ, ದೀಪಕ್ ಆರಾಧ್ಯ, ರಘು, ಮನುಕುಮಾರ್ ಮತ್ತು ಮಮತಾ ಮಾತನಾಡಿದರು.
ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ರಮೇಶ್ ಪ್ರಾರ್ಥಿಸಿದರು. ಇದೇ ವಿಭಾಗದ ಉಪನ್ಯಾಸಕ ಸತೀಶ್ ಸ್ವಾಗತಿಸಿದರು. ಸಿಸಿಟೆಕ್ ವ್ಯವಸ್ಥಾಪಕ ಮೃತ್ಯುಂಜಯ ಹೊಂಬಾಳ್ ವಂದಿಸಿದರು.
(ಚಿತ್ರ 26ಬಿವಿಟಿ1 -
ಪ್ರೊ. ಜಿ. ನಾರಾಯಣ ರಾವ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

