ಮೋದಿ ಪ್ರಧಾನಿಯಾದರೆ ಅಪಾಯ
ದಾವಣಗೆರೆ: ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತವು ಮತ್ತೊಂದು ಅಪಾಯವನ್ನು ಎದುರಿಸ ಬೇಕಾಗುತ್ತದೆ ಎಂದು ಹಿರಿಯ ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್ ಎಚ್ಚರಿಸಿದರು.
ನಗರದ ನರಹರಿಶೇಟ್ ಭವನದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘ ಮತ್ತು ಅಹಿಂದ ಜಿಲ್ಲಾ ಘಟಕ ಏರ್ಪಡಿಸಿದ್ದ ತಳ ಸಮುದಾಯಗಳು ಮತ್ತು ಪ್ರಸ್ತುತ ಸಂದರ್ಭದ ರಾಜಕೀಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ನಲ್ಲಿ 2500 ಸಾವಿರ ಅಮಾಯಕ ಜನರ ಸಾವಿಗೆ ಕಾರಣರಾದ ಮೋದಿಗೆ ಪ್ರಧಾನಿ ಮಾಡಲು ಹೊರಟಿರುವುದು ನಾಚಿಗೇಡಿನ ಸಂಗತಿ ಎಂದರು. ಕೆಳ ಸಮುದಾಯಗಳನ್ನು ಅನಾದಿಯಿಂದಲೂ ಹುಳುಗಳನ್ನಾಗಿ ಕಾಣುತ್ತಾ ಬರಲಾಗಿದೆ. ಈಚಿನ ದಿನಗಳಲ್ಲಿ ಅಲ್ಪಸಂಖ್ಯಾತರು, ದಲಿತರು, ಶೋಷಿತರು ಸಂಘ ಪರಿವಾರದ ಒಂದು ಭಾಗವಾದ ಬಿಜೆಪಿಗೆ ಸೇರುತ್ತಿರುವುದು ದುರಂತ. ಕೆಳ ಸಮುದಾಯದಲ್ಲಿ ಇಂತಹ ವಿಚಾರದ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಕುರುಬರ ಸಂಘ, ಕೆಂಗೋ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಅಹಿಂದ ಜಿಲ್ಲಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಜಿಪಂ ಉಪಾಧ್ಯಕ್ಷೆ ಶಾರದಮ್ಮ ಲಕ್ಷ್ಮಣ, ಸದಸ್ಯರಾದ ಲಕ್ಷ್ಮಿ ಮಂಜಪ್ಪ, ಎಂ. ನಾಗೇಂದ್ರಪ್ಪ, ಶ್ಯಾಗಲೆ ನಾಗಪ್ಪ, ಬಿ.ಎಂ.ಸತೀಶ, ರಾಮಚಂದ್ರ ಕಲಾಲ್, ಬಿ.ಇ. ನಾಗರಾಜ, ರಂಗಸ್ವಾಮಿ, ಮರಿಯಾಚಾರ್, ಸೊಕ್ಕೆ ನಾಗರಾಜ, ಎಚ್. ಶಂಕರ್, ಎನ್.ಜೆ. ನಿಂಗಪ್ಪ, ಎಸ್ಸೆಸ್ ಗಿರೀಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

