ಶಿವಮೊಗ್ಗ

ಹಿರಿಯರ ಮಾರ್ಗದರ್ಶನ ಇರಲಿ

Published On :

ಸೊರಬ: ಧರ್ಮ ಮತ್ತು ಪರಂಪರೆ ಉಳಿಯಲು ಗುರುಹಿರಿಯರ ಮಾರ್ಗದರ್ಶನ ಅಗತ್ಯವಿದೆ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಶ್ರೀಗಳು ತಿಳಿಸಿದರು.
 ತಾಲೂಕಿನ ಶಿರಿನಾಯಕನಕೊಪ್ಪ ಗ್ರಾಮದಲ್ಲಿ ದಿ. ಕೊಟ್ರಬಸಪ್ಪ ಕುಟುಂಬದವರು ನಿರ್ಮಿಸಿರುವ ಬಾಳೆಕೊಪ್ಪ ಬಸವಣ್ಣದೇವರ ನೂತನ ದೇಗುಲ ಹಾಗೂ ವಿಗ್ರಹ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಗುರು ಹಿರಿಯರಿಗೆ ಗೌರವ ನೀಡುವ ಮನೋಭಾವ ಕಡಿಮೆಯಾಗುತ್ತಿರುವುದು ಖೇದಕರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ, ಲೌಕಿಕ ಜೀವನದಲ್ಲಿ ಮೋಜಿಗೆ ದಾಸರಾಗಿರುವ ಜನತೆಯನ್ನು ನೈತಿಕವಾಗಿ ಜಾಗೃತಿಗೊಳಿಸುವ ಉದ್ದೇಶದಿಂದ ಧರ್ಮದ ಕಹಳೆ ಮೊಳಗಬೇಕಾದ ಅಗತ್ಯವಿದೆ ಎಂದರು.
 ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಮಂಗಳವಾದ್ಯದೊಂದಿಗೆ ಕಳಸದ ಪುರ ಮೆರವಣಿಗೆಯಲ್ಲಿ ಕಲಾತಂಡಗಳು, ಭಕ್ತಾದಿಗಳು, ದೇಗುಲ ನಿರ್ಮಾತೃ ಕುಟುಂಬದವರು ಪಾಲ್ಗೊಂಡಿದ್ದರು.
 ಹಿರೇಮಾಗಡಿ ಮಠದ ಶಿವಮೂರ್ತಿ ಶ್ರೀಗಳು, ಶಾಂತಾಪುರ ಮಠದ ಶಿವಾನಂದ ಶ್ರೀಗಳು, ತೊಗರ್ಶಿ ಮಳೆ ಹಿರೇಮಠದ ಮಹಾಂತ ದೇಶಿಕೇಂದ್ರ ಶ್ರೀಗಳು, ಹಾವೇರಿ ಬಣ್ಣದ ಮಠದ ಚೆನ್ನ ಮಲ್ಲಿಕಾರ್ಜುನ್ ಶ್ರೀಗಳು ಉಪಸ್ಥಿತರಿದ್ದರು.
 ಇದೇ ವೇಳೆ ದಿ. ಕೊಟ್ರಬಸಪ್ಪ ಕುಟುಂಬದವರು ಗ್ರಾಮದ ಆಂಜನೇಯ ದೇವಾಲಯ ನಿರ್ಮಾಣಕ್ಕೆ 1 ಲಕ್ಷ ರು. ದೇಣಿಗೆ ನೀಡುವುದಾಗಿ ಘೋಷಿಸಿದರು. ತಾಪಂ ಸದಸ್ಯರಾದ ಜೈಶೀಲಪ್ಪ, ಬಸವಲಿಂಗಪ್ಪ, ಮಾಜಿ ಅಧ್ಯಕ್ಷ ರುದ್ರಪ್ಪ ಕಡ್ಲೇರಾ, ಸದಸ್ಯ ಶಿವಪ್ಪ, ಮಲ್ಲಿಕಾರ್ಜುನ ಗುತ್ತೇರಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.