ಮಟ್ಕಾ ಜೂಜಾಟ: ಆರೋಪಿಗಳ ಬಂಧನ
ಕ.ಪ್ರ.ವಾರ್ತೆ, ಭದ್ರಾವತಿ, ಜೂ.11
ಭದ್ರಾವತಿ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಭದ್ರಾವತಿ ಉಪವಿಭಾಗದ ವಿವಿಧ ಠಾಣೆಗಳ ಪೊಲೀಸರು ಸೋಮವಾರ ವ್ಯಾಪಕ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ ಅವರಿಂದ ಹಣ ಮತ್ತು ಓ.ಸಿ ಚೀಟಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿರುವ ವೀರಾಪುರ ಗ್ರಾಮದ ರವಿ ಗೌಡರ ಹೋಟೆಲ್ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಶಶಿ ಮತ್ತು ಭಂಡಾರಹಳ್ಳಿಯ ಮೋಹನ ಎಂಬವರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಬಂಧಿಸಿ ಆರೋಪಿಗಳಿಂದ 2100 ನಗದು ಮತ್ತು ಓ.ಸಿ ಬರೆಯಲು ಉಪಯೋಗಿಸಿದ ಚೀಟಿ ಹಾಗೂ ಲೇಖನಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಸೀಗೆಬಾಗಿ ಗ್ರಾಮದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಹೊಸ ಸೀಗೆಬಾಗಿ ವಾಸಿ ಬಿ.ಟಿ. ಸತೀಶ (38) ಎಂಬವನನ್ನು ಭದ್ರಾವತಿ ಹಳೇನಗರ ಪೊಲೀಸರು ದಾಳಿ ನಡೆಸಿ ಬಂಧಿಸಿ, ಆರೋಪಿಯಿಂದ 460 ನಗದು ಹಾಗೂ ಓ.ಸಿ. ಬರೆಯಲು ಉಪಯೋಗಿಸಿದ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಬಾಬು ಮಸ್ತಾನ್ ಹಾಗೂ ಸುರೇಶಬಾಬು ಎಂಬವರನ್ನು ನ್ಯೂಟೌನ್ ಪೊಲೀಸರು ದಾಳಿ ನಡೆಸಿ ಬಂಧಿಸಿ ಆರೋಪಿಗಳಿಂದ 990 ನಗದು ಮತ್ತು ಓ.ಸಿ. ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಮನೆ ಶಿವಾಜಿ ವೃತ್ತದ ಪೊಲೀಸರು ಸಂತೆ ಮೈದಾನದ ಹತ್ತಿರ ಮಟ್ಕಾ ಜೂಜಾಟವಾಡುತ್ತಿದ್ದ ಮಹಮದ್ ಆಜೀಜ್ ಮಹಮದ್ ಆಲಿ ಮತ್ತು ಖಾಜಾ ಪೀರ್ ಅವರುಗಳನ್ನು ಬಂಧಿಸಿ ಆರೋಪಿಗಳಿಂದ 2220 ನಗದು ಮತ್ತು ಓ.ಸಿ. ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೇಪರ್ಟೌನ್ ಠಾಣೆ ಪೊಲೀಸರು ಹಿರಿಯೂರು ಗ್ರಾಮದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಹಿರಿಯೂರಿನ ಶೇಖರ (39) ಎಂಬವನನ್ನು ಬಂಧಿಸಿ ಆತನಿಂದ 1250 ನಗದು ಮತ್ತು ಓ.ಸಿ. ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

