ಶಿವಮೊಗ್ಗ

ನಾಳೆಯಿಂದ ಉಚಿತ ಯೋಗ ಶಿಬಿರ

Published On :

ಶಿವಮೊಗ್ಗ: ನಗರದ ಎ.ಎನ್.ಕೆ ರಸ್ತೆಯಲ್ಲಿನ ಗುರುಕಣ್ಣಿನ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಜೂನ್ 13ರಿಂದ 2 ವಾರ ಪ್ರತಿದಿನ ಸಂಜೆ 6ರಿಂದ 7ಗಂಟೆವರೆಗೆ ರಾಜೇಂದ್ರ ನಗರದ ಗುರುಧ್ಯಾನ ಸಭಾಂಗಣದಲ್ಲಿ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೂ.13ರ ಸಂಜೆ 6ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಯೋಗ ಶಿಕ್ಷಕ ವೈದ್ಯನಾಥ್ ಶಿಬಿರದಲ್ಲಿ ತರಬೇತಿ ನೀಡುವರು ಎಂದು ಆಸ್ಪತ್ರೆಯ ವೈದ್ಯ ಡಾ.ಎಚ್.ವಿ. ಗಿರಿಸ್ವಾಮಿ ರಸ್ತಾಪುರಮಠ ತಿಳಿಸಿದ್ದಾರೆ. ವಿವರಗಳಿಗಾಗಿ- 08182-270647.
ವಿಶೇಷ ಉಪನ್ಯಾಸ
ಶಿವಮೊಗ್ಗ:  ರೋಟರಿ ಕ್ಲಬ್ ಜೂನ್ 12ರಂದು ಸಂಜೆ7.15ಕ್ಕೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿರುವ ರೋಟರಿ ಯುವಕೇಂದ್ರದ ಆವರಣದಲ್ಲಿರುವ ಪವಾಡಗಳ ಅನಾವರಣ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಪವಾಡ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹುಲಿಕಲ್ ನಟರಾಜ್ ಪ್ರಾತ್ಯಕ್ಷಿಕೆ ಮೂಲಕ ಮಾತನಾಡಲಿದ್ದಾರೆ ಎಂದು ಕ್ಲಬ್‌ನ ಅಧ್ಯಕ್ಷ ಎನ್.ಎಸ್. ಶ್ರೀಧರ್ ತಿಳಿಸಿದ್ದಾರೆ. ವಿವರಗಳಿಗಾಗಿ- 9480008646.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.