ನಗರದಲ್ಲಿ ಉತ್ತಮ ಮಳೆ
ಹೊಸನಗರ: ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಒಂದೆನಿಸಿದ ನಗರ ಹೋಬಳಿಯಲ್ಲಿ ಈ ಬಾರಿಯು ಮಳೆ ಉತ್ತಮ ಆರಂಭ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹೆಚ್ಚು ಮಳೆ ಸುರಿದಿದೆ. ಮತ್ತೊಂದಡೆ ತಾಲೂಕಿನಾದ್ಯಂತ ಕೃಷಿ ಕಾರ್ಯ ಚುರುಕು ಪಡೆದುಕೊಂಡಿದೆ.
ಮಾಣಿಯಲ್ಲಿ 853 ಮಿಮೀ, ಯಡೂರು- 932 ಮಿಮೀ, ಮಾಸ್ತಿಕಟ್ಟೆ- 1148 ಮಿಮೀ, ಚಕ್ರಾ- 1006 ಮಿಮೀ, ಸಾವೇಹಕ್ಲು- 1046 ಮಿಮೀ ಮತ್ತು ಹುಲಿಕಲ್ ಪ್ರದೇಶದಲ್ಲಿ ಅತಿ ಹೆಚ್ಚು 1150 ಮಿಮೀ ಮಳೆ ಸುರಿದಿದೆ. ಕಳೆದ ವಾರದಲ್ಲಿ ಬಿರುಸಿನಿಂದ ಕೂಡಿದ್ದ ಮಳೆ ಕಳದೆರಡು ದಿನದಿಂದ ತುಸು ಕಡಿಮೆಯಾಗಿದೆ.
ಕಳೆದ ವರ್ಷದ ಆತಂಕ: ಕಳೆದ ಬಾರಿ ನಗರ ಹೋಬಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿತ್ತು. ಕೆರೆ ಕೋಡಿ ಒಡೆದು ಹೋಗಿದ್ದಲ್ಲದೆ, ಗದ್ದೆ ಜಮೀನಲ್ಲಿ ಆಳೆತ್ತರ ನೀರು ತುಂಬಿತ್ತು. ಮಾತ್ರವಲ್ಲ ಕೃಷಿ ಜಮೀನಲ್ಲಿ ಹೇರಳ ಮರಳು ಜಮಾಯಿಸಿದ್ದರಿಂದ ಬೇಸಾಯ ಮಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು.
ವರ್ಷಧಾರೆಯ ಆರ್ಭಟಕ್ಕೆ ಕಂದ್ಲಕೊಪ್ಪ, ವಾಟಗೋಡು, ಬಸವನಬ್ಯಾಣದಲ್ಲಿ ಭೂಮಿ ಬಿರುಕುಬಿಟ್ಟು ನಿವಾಸಿಗಳಲ್ಲಿ ಭಯ ಉಂಟುಮಾಡಿತ್ತು. ಈ ಬಾರಿ ಕೂಡ ಆರಂಭದಲ್ಲಿ ಮಳೆಯ ಆರ್ಭಟ ನೋಡಿ ಕಳೆದ ಬಾರಿ ಅನಾಹುತ ಮತ್ತೆ ಮರುಕಳಿಸಬಹುದೆಂಬ ಆತಂಕ ತರಿಸಿತ್ತು. ಆದರೆ ಮಳೆಯ ಆರ್ಭಟ ಇಳಿಮುಖವಾಗಿದ್ದು ಜನತೆ ನಿಟ್ಟುಸಿರು ಬಿಡುವಂತಾಗಿದೆ.
ವಿದ್ಯುತ್, ದೂರವಾಣಿ ವ್ಯತ್ಯಯ: ಕಳೆದ ಎರಡುವಾರದಿಂದ ಸುರಿದ ಮಳೆಗೆ ನಗರ, ನಿಟ್ಟೂರು, ಅಂಡಗದೋದೂರು, ಸಂಪೇಕಟ್ಟೆ, ಆರೋಡಿಯಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬಂದಿತ್ತು. ದೂರವಾಣಿ ಸಂಪರ್ಕ ಕೂಡ ಸ್ಥಗಿತಗೊಂಡಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲವು ಸಹಜ ಸ್ಥಿತಿಗೆ ಬಂದಿದೆ.
ಕೃಷಿ ಚುರುಕು: ತಾಲೂಕಿನಾದ್ಯಂತ ಮಳೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ರೈತರಿಗೆ ಸ್ಪಂದಿಸುವ ಸಲುವಾಗಿ ರಸಗೊಬ್ಬರ ವಿತರಣೆಗೆ ಅಗತ್ಯ ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

