ಇಂದು ಶಿವಾನುಗೋಷ್ಠಿ
ಶಿವಮೊಗ್ಗ: ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜೂನ್ 23ರಂದು ಸಂಜೆ 6.30ಕ್ಕೆ 401ನೇ ಮಾಸಿಕ ಶಿವಾನುಭವ ಗೋಷ್ಠಿ ಏರ್ಪಡಿಸಲಾಗಿದೆ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಜಡೆ ಸಂಸ್ಥಾನದ ಮಠದ ಶ್ರೀ ಮ.ನಿ.ಪ್ರ. ಡಾ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಉಪನ್ಯಾಸಕ ಹಾಗೂ ನಾಣ್ಯ ಸಂಗ್ರಹಕಾರ ಎಚ್. ಖಂಡೋಬರಾವ್ ಅವರು ಇತಿಹಾಸ ಮತ್ತು ನಾವು ವಿಷಯ ಕುರಿತು ಉಪನ್ಯಾಸ ನೀಡುವರು. ಸಂಗೀತ ವಿದುಷಿ ನಾಗವೇಣಿ ಹೆಗಡೆ ವಚನ ಸಂಗೀತ ನಡೆಸಿಕೊಡುವರು ಎಂದು ಮಠದ ಮೇಲ್ವಿಚಾರಕರು ತಿಳಿಸಿದ್ದಾರೆ.
ಅಭಿನಂದನೆ
ಶಿವಮೊಗ್ಗ: ಉತ್ತರಾಖಾಂಡ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಭಾರತೀಯ ರೆಡ್ಕ್ರಾಸ್ ಸಂಸ್ಥೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಡಾ. ಕುಮಾರ್ ರೆಡ್ಕ್ರಾಸ್ ಕೇಂದ್ರ ಕಚೇರಿಯಿಂದ ನಿಯೋಜನೆಗೊಂಡಿದ್ದಾರೆ.
ರೆಡ್ಕ್ರಾಸ್ ತಂಡವು ಸ್ಥಳೀಯ ಆಡಳಿತದೊಂದಿಗೆ ಪ್ರವಾಹ ಪೀಡಿತ ಉತ್ತರ ಕಾಶಿಯಲ್ಲಿ, ಮಾನವೀಯ ಸೇವೆಗಳಲ್ಲಿ ಭಾಗವಹಿಸುತ್ತಿದೆ. ಸಂತ್ರಸ್ತರಿಗೆ ಆಹಾರ, ನೀರು, ತಾತ್ಕಾಲಿಕ ವಸತಿ, ಆರೋಗ್ಯ, ಪ್ರಥಮ ಚಿಕಿತ್ಸೆ ಸೇವೆಗಳಲ್ಲಿ ಭಾಗವಹಿಸುತ್ತಿದೆ.
ರಕ್ತದಾನ ಶಿಬಿರ
ಶಿವಮೊಗ್ಗ: ವಿಶ್ವಮಧ್ವ ಮಹಾಪರಿಷತ್, ನಾರಾಯಣ ಹೃದಯಾಲಯ ಮತ್ತು ರೋಟರಿ ರಕ್ತ ನಿಧಿ ಆಶ್ರಯದಲ್ಲಿ ಜೂನ್ 23ರಂದು ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಬಿ.ಬಿ. ರಸ್ತೆಯ ಶ್ರೀ ಸತ್ಯಪ್ರಮೋದ ಮಂದಿರದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ವಿಶ್ವಮಧ್ವ ಪರಿಷತ್ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಸ್.ಆರ್. ಕೇಶವಮೂರ್ತಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182-270424.
ಮಧುಮೇಹ ತಪಾಸಣಾ ಶಿಬಿರ
ಶಿವಮೊಗ್ಗ: ವಿನೋಬನಗರದ ನಯನ ಹೆಲ್ತ್ ಕ್ಲಿನಿಕ್ನಲ್ಲಿ ಜೂನ್ 23ರಂದು ಬೆಳಿಗ್ಗೆ 7ರಿಂದ 9ಗಂಟೆವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕ್ಲಿನಿಕ್ ತಿಳಿಸಿದೆ. ವಿವರಗಳಿಗಾಗಿ- 08182- 248149.
ಪ್ರತಿಭಾ ಪುರಸ್ಕಾರ
ಶಿಕಾರಿಪುರ: ತಾಲೂಕು ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜೂ.23ರ ಭಾನುವಾರ ಶ್ರೀ ದತ್ತ ಕೇವಲಾನಂದಾಶ್ರಮದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ವಿಪ್ರ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ರಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9ಕ್ಕೆ ಪಟ್ಟಣದ ಶ್ರೀ ಹುಚ್ಚೂರಾಯಸ್ವಾಮಿ ದಡದಲ್ಲಿನ ಶ್ರೀ ದತ್ತಕೇವಲಾನಂದಾಶ್ರಮದಲ್ಲಿ ಸಂಘದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.
ತಾ. ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಣಪತಿಭಟ್, ಸಾಗರ ತಾ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮ. ಸ ನಂಜುಂಡಸ್ವಾಮಿ, ಜಿಲ್ಲಾ ವಿಪ್ರ ನೌಕರರ ಸಂಘದ ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಜಿ.ಎಸ್. ಅನಂತ್, ಖಜಾಂಚಿ ಎಚ್.ಎನ್ ಛಾಯಾಪತಿ ಮತ್ತಿತರರು ಭಾಗವಹಿಸಲಿದ್ದು, ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
25ರಂದು ಉಚಿತ ಹೃದಯ, ಕ್ಯಾನ್ಸರ್ ತಪಾಸಣೆ
ಶಿವಮೊಗ್ಗ: ವಾಜಪೇಯಿ ಆರೋಗ್ಯಶ್ರೀ ಯೋಜನೆಯಿಂದ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೂ.25ರಂದು ಜಿಲ್ಲೆ ಕಡುಬಡವರಿಗೆ ನುರಿತ ವೈದ್ಯರಿಂದ ಹೃದಯರೋಗ ಹಾಗೂ ಕ್ಯಾನ್ಸರ್ ತಪಾಸಣೆ ಹಮ್ಮಿಕೊಳ್ಳಲಾಗಿದೆ.
ಬಿಪಿಎಲ್ ಕಾರ್ಡ್ದಾರರು ಈ ಯೋಜನೆ ಫಲಾನುಭವಿಗಳಾಗಿದ್ದು, ಹೃದಯ ಸಂಬಂಧ ಖಾಯಿಲೆಗಳಿಗೆ ಹಾಗೂ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣೆ ಹಾಗೂ ವೈದ್ಯರಿಂದ ಸಮಾಲೋಚನೆ ನಡೆಲಾಗುವುದು. ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವಿರುತ್ತದೆ.
ನಗರದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆ ನಂಜಪ್ಪ ಲೈಫ್ಕೇರ್ ಹಾಗೂ ಕ್ಯಾನ್ಸರ್ ಸಂಬಂಧಿಸಿದಂತೆ ಮಲೆನಾಡು ಆಸ್ಪತ್ರೆಯ ನುರಿತ ವೈದ್ಯರು ಈ ತಪಾಸಣೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲೆಯ ಬಿಪಿಎಲ್ ಕಾರ್ಡ್ದಾರರು ತಮ್ಮ ದಾಖಲಾತಿಗಳೊಂದಿಗೆ ತಪಾಸಣೆ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ವಿವರಗಳಿಗೆ ಕೆ.ಜಿ.ಪ್ರಕಾಶ್, ಜಿಲ್ಲಾ ವ್ಯವಸ್ಥಾಪಕರು, ವಾಜಪೇಯಿ ಆರೋಗ್ಯಶ್ರೀ ಯೋಜನೆ(ದೂರವಾಣಿ ಸಂಖ್ಯೆ 7259003386) ಇವರನ್ನು ಸಂಪರ್ಕಿಸಬಹುದಾಗಿದೆ.
ಭದ್ರಾವತಿ ಇಂದು ವಿದ್ಯುತ್ ವ್ಯತ್ಯಯ
ಭದ್ರಾವತಿ: ಸೀಗೆಬಾಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ 25ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನ್ಯೂಟೌನ್, ನ್ಯೂಕಾಲೋನಿ, ಆಕಾಶವಾಣಿ, ಕೂಲಿಬ್ಲಾಕ್ ಶೆಡ್, ಗಣೇಶ ಕಾಲೋನಿ, ವಿದ್ಯಾಮಂದಿರ, ಕಿತ್ತೂರು ಚೆನ್ನಮ್ಮ ಬಡಾವಣೆ, ಜನ್ನಾಪುರ, ಸುರಗಿತೋಪು, ಕಾಗದನಗರ, ಹುಡ್ಕೊ ಕಾಲೋನಿ, ಬುಳ್ಳಾಪುರ, ದೊಡ್ಡಗೊಪ್ಪೇನಹಳ್ಳಿ, ಆನೆಕೊಪ್ಪ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

