ಸುದ್ದಿ ಸಂಕ್ಷೇಪ
ಸುಲಿಗೆಕೋರರ ಬಂಧನ
ಕುಣಿಗಲ್: ಮೊಬೈಲ್ ಟ್ರಾಕರ್ ತಂತ್ರಜ್ಞಾನದ ಅಧಾರದ ಮೇಲೆ, ಮಾರಾಕಾಸ್ಚ್ರಗಳಿಂದ ಯಾತ್ರಾರ್ಥಿಗಳನ್ನು ಬೆದರಿಸಿ ಚಿನ್ನ, ನಗದು ಹಾಗೂ ಮೊಬೈಲ್ ದೋಚಿದ್ದ ಸುಲಿಗೆಕೊರರನ್ನು ಕುಣಿಗಲ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ರಮೇಶ್ ಎಂಬಾತ, ಕಳೆದೆರಡು ತಿಂಗಳ ಹಿಂದೆ ತನ್ನ ಕುಟುಂಬದವರೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸಕ್ಕಾಗಿ ಹೊರಟಿದ್ದು, ಪಟ್ಟಣದ ಬೈಪಾಸ್ನಲ್ಲಿ ಹೇರೂರು ಗ್ರಾಮದ ತುಸು ದೂರ ಊಟಕ್ಕಾಗಿ ಕಾರು ನಿಲ್ಲಿಸಿ ಕುಟುಂಬದವರೊಂದಿಗೆ ಊಟ ಮಾಡುತ್ತಿದ್ದರು. ಬೈಕ್ನಲ್ಲಿ ಆಗಮಿಸಿದ ಮೂವರು ಯುವಕರು ಲಾಂಗ್, ಕತ್ತಿಗಳಿಂದ ಬೆದರಿಸಿ 45 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದು ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು, ಬೆಂಗಳೂರಿನ ವಿಘ್ನೇಶ್ವರ ನಗರದಲ್ಲಿ ಹೊನ್ನಪ್ಪ ಎಂಬಾತನನ್ನು ವಶಕ್ಕೆ ಪಡೆದು, ಇತನ ಮಾಹಿತಿ ಮೇರೆಗೆ ತಾಲೂಕಿನ ಪಡುವಗೆರೆಯ ಚೇತನ್ನನ್ನು ಬಂಧಿಸಿದರು. ಮತ್ತೊರ್ವ ಆರೋಪಿ ಪವನ್ ಪರಾರಿಯಾಗಿದ್ದಾನೆ.
ಎತ್ತಿನ ಗಾಡಿ ಹರಿದು ಮಗು ಸಾವು
ಹರಪನಹಳ್ಳಿ: ಎತ್ತಿನ ಟಯರ್ ಗಾಡಿ ಮಗುವಿನ ಮೇಲೆ ಹರಿದ ಪರಿಣಾಮ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ದೀಪ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಹಗರಿ ಗಜಾಪುರ ಗ್ರಾಮದಲ್ಲಿ ಭಾನುವಾರ ಜರುಗಿದೆ. ಹಗರಿ ಗಜಾಪುರದ ಬಸವರಾಜ ಅವರ ಮಗಳು ದೀಪ (3) ಮೃತಳು. ಸವಾರನ ನಿರ್ಲಕ್ಷ್ಯತನದಿಂದ ಎತ್ತಿನ ಗಾಡಿ ಮಗುವಿನ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಮೃತ ದೀಪಾಳ ತಂದೆ ಬಸವರಾಜ ಸಲ್ಲಿಸಿರುವ ದೂರಿನನ್ವಯ ಚಿಗಟೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎತ್ತಿನ ಬಂಡಿ ಸವಾರ ಕೊಟ್ರಬಸಪ್ಪನನ್ನು ಬಂಧಿಸಲಾಗಿದೆ.
ವಿದ್ಯುತ್ ಕಂಬ ಬಿದ್ದು ಕಾರ್ಮಿಕ ಸಾವು
ಹೊನ್ನಾಳಿ: ವಿದ್ಯುತ್ ಕಂಬ ಹೂಳುತ್ತಿರುವ ಸಂದರ್ಭದಲ್ಲಿ ಮೈ ಮೇಲೆ ಕಂಬ ಬಿದ್ದು ತೀವ್ರವಾಗಿ ಗಾಯಗೊಂಡ ಕಾರ್ಮಿಕನೊಬ್ಬ ಶನಿವಾರ ರಾತ್ರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಶಿಕಾರಿಪುರ ತಾಲೂಕಿನ ಬೇಗೂರು- ಬೆಂಡೇಕಟ್ಟೆ ಗ್ರಾಮದವನಾಗಿದ್ದಾನೆ. ಪಕ್ಕದ ತಾಲೂಕಾದ ಹಿರೇಕೆರೂರು ತಾಲೂಕು ತಡಕನಹಳ್ಳಿಯಲ್ಲಿ ಶನಿವಾರ ಸಂಜೆ ವೇಳೆ ವಿದ್ಯುತ್ ಕಂಬ ಹೂಳುತ್ತಿರುವಾಗ ಆಯತಪ್ಪಿ ಕಂಬ ಈ ಕೂಲಿ ಕಾರ್ಮಿಕನ ಮೇಲೆ ಉರುಳಿಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

