ಪರಿವರ್ತನೆಯ ಶಿಕ್ಷಣ ಅಗತ್ಯ
ಶಿಕಾರಿಪುರ: ಪರಿವರ್ತನೆಯ ಶಿಕ್ಷಣ ಅವಶ್ಯಗಿದ್ದು, ಸಮಾಜಘಾತುಕ ಶಕ್ತಿಗಳನ್ನು ಮನಪರಿವರ್ತನೆಯಿಂದ ಅಸಾಧಾರಣ ವ್ಯಕ್ತಿಯನ್ನಾಗಿಸುವ ಸಾಮರ್ಥ್ಯ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಹೊಂದಿದೆ ಎಂದು ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕ ಮಾದಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಜಗದಾಂಬೆ ಸರಸ್ವತಿ ಮಾತೇಶ್ವರಿರವರ ಸ್ಮೃತಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ಸಾಧನೆಗಾಗಿ ಹಲವು ಸಂಘ ಸಂಸ್ಥೆಗಳು ಜನ್ಮವಾಗಿದ್ದು, ನಿತ್ಯ ಭಗವಂತನ ಬಗ್ಗೆ ಉಚಿತವಾಗಿ ಜ್ಞಾನ ದೀಕ್ಷೆ ನೀಡುವ ಮೂಲಕ ಪ್ರಜಾಪಿತ ಬ್ರಹ್ಮಕುಮಾರಿ ವಿವಿ ವಿಶೇಷವಾಗಿ ಗುರುತಿಸಿಕೊಂಡಿದೆ ಎಂದರು.
ಸ್ವರ್ಧಾತ್ಮಕ ಯುಗದಲ್ಲಿ ಜಂಜಾಟದ ಜೀವನದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಶಾಂತಿ, ಅಹಿಂಸೆ ಶಿಕ್ಷಣ ಅತ್ಯಗತ್ಯವಾಗಿದೆ ಎಂದರು. ಪುರಸಭಾ ಸದಸ್ಯ ಅಂಗಡಿ ಜಗದೀಶ್ ಮಾತನಾಡಿ,ಪ್ರತಿಯೊಬ್ಬರ ಅಂತರಾತ್ಮದಲ್ಲಿ ಭಗವಂತನಿದ್ದು, ಸಾಕ್ಷಾತ್ಕಾರದ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಬಾಲ್ಯದಲ್ಲಿಯೇ ಆದ್ಯಾತ್ಮಿಕತೆಯ ಅರಿವು ಮೂಡಿಸಿದಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದರು.
ತಾ.ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿ, ಮನುಷ್ಯನ ಪ್ರಕೃತಿ ವಿರುದ್ಧದ ದಬ್ಬಾಳಿಕೆ, ಭಗವಂತನ ದ್ಯಾನದಲ್ಲಿ ನಿರ್ಲಕ್ಷ್ಯ ಮತ್ತಿತರ ವರ್ತನೆಯಿಂದಾಗಿ ಉತ್ತರಾಖಂಡದ ಭೀಕರ ಅವಘಡ ಎಚ್ಚರಿಕೆ ಪಾಠವಾಗಿದೆ ಎಂದರು.
ಪ್ರಾಸ್ಥಾವಿಕವಾಗಿ ಪ್ರ.ಬ್ರ.ವಿ.ವಿ ದ ಸಂಚಾಲಕಿ ಕು.ಸ್ನೇಹಕ್ಕ ಮಾತನಾಡಿದರು. ಸಭೆಯಲ್ಲಿ ಸಿಪಿಐ ಮಾದಪ್ಪ ಹಾಗೂ ಹುಚ್ರಾಯಪ್ಪರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಸುಬಾಷ್ ಚಂದ್ರಸ್ಥಾನಿಕ್, ಪುಟ್ಟಪ್ಪಗೌಡ, ಶಿವಮೂರ್ತಿ, ರಾಮಣ್ಣ, ಜಯಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

